ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಡುಪಿ ಯುವಕರ ಈ ಕ್ರಿಯೇಟಿವಿಟಿಗೆ ಒಂದು ಲೈಕ್ ಕೊಡಲ್ವಾ?

|
Google Oneindia Kannada News

ಉಡುಪಿ, ಡಿ 5: ಉಡುಪಿ, ಮಂಗಳೂರು ಅಥವಾ ದಕ್ಷಿಣಕನ್ನಡ ಜಿಲ್ಲೆಗೆ ಹೊಂದಿಕೊಂಡಿರುವ ಕೇರಳದ ಜಿಲ್ಲೆಗಳಲ್ಲಿ, ಅದು ಯಕ್ಷಗಾನವಿರಲಿ, ಲಕ್ಷದೀಪೋತ್ಸವೇ ಇರಲಿ ಅಥವಾ ಮೆರವಣಿಗೆಯಿರಲಿ ಅಲ್ಲಿ ಚೆಂಡೆಯ ಧ್ವನಿ ಮಾರ್ದನಿಸಲೇ ಬೇಕು.

ಚೆಂಡೆಯನ್ನು ಹೀಗೇ ಬಾರಿಸಬೇಕು ಎನ್ನುವ ಪರಿಪಾಠ ಹಿಂದಿನಿಂದಲೂ ನಡೆದುಕೊಂಡು ಬಂದಿದೆ, ಆದರೆ ಇದನ್ನೂ ಮೀರಿ ಚೆಂಡೆಯನ್ನು ಹೀಗೂ ಬಾರಿಸಬಹುದು ಎನ್ನುವುದನ್ನು ಉಡುಪಿ ಜಿಲ್ಲೆಯ ಯುವಕರ ತಂಡವೊಂದು ತೋರಿಸಿಕೊಟ್ಟಿದೆ.

ಬದುಕಿನ ಪಯಣ, ನಗುವಿನ ನಿಲ್ದಾಣ ಕಾರ್ಟೂನು ಹಬ್ಬ ಬದುಕಿನ ಪಯಣ, ನಗುವಿನ ನಿಲ್ದಾಣ ಕಾರ್ಟೂನು ಹಬ್ಬ

ಉಡುಪಿ ಜಿಲ್ಲೆಯಲ್ಲಿ ಹಗ್ಗಜಗ್ಗಾಟ (ಟಗ್ ಆಫ್ ವಾರ್) ಕ್ರೀಡೆಯನ್ನು ಆಯೋಜಿಸಲಾಗಿತ್ತು. ಅಲ್ಲಿ ಸ್ಪರ್ಧಾಳುಗಳನ್ನು ಪ್ರೋತ್ಸಾಹಿಸಲು ಚೆಂಡೆಯವರನ್ನು ಕರೆಸಲಾಗಿತ್ತು.

Youths from Udupi, new style of chende instrument getting appreciation

ಸ್ಥಳೀಯ ಯುವಕ ಹಾಡಿದ ಸಿನಿಮಾ ಹಾಡಿಗೆ ಸರಿಯಾಗಿ ಚೆಂಡೆಯವರೂ ರಾಗಕ್ಕೆ ತಕ್ಕಂತೆ ಚೆಂಡೆ ಬಾರಿಸಿ ಸ್ಥಳೀಯರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಚೇತನ್ ಹಾಡಿನ ತಾಳಕ್ಕೆ ತಕ್ಕಂತೆ ಚೆಂಡೆಯವರೂ ಬಾರಿಸಿದ ವಿಡಿಯೋ, ಸಾಮಾಜಿಕ ತಾಣದಲ್ಲಿ ಶಹಬ್ಬಾಸ್ ಗಿರಿ ಪಡೆದುಕೊಂಡಿದೆ.

ಉಡುಪಿ ಸ್ವರ್ಣ ಗೋಪುರಕ್ಕೆ 5ಲಕ್ಷ ರೂ. ಘೋಷಿಸಿದ ಟಿ.ಎ.ಶರವಣ ಉಡುಪಿ ಸ್ವರ್ಣ ಗೋಪುರಕ್ಕೆ 5ಲಕ್ಷ ರೂ. ಘೋಷಿಸಿದ ಟಿ.ಎ.ಶರವಣ

ಉಡುಪಿ ಜಿಲ್ಲೆಯ ಯುವಕರ ಚಂಡೆ ಬಳಗ ತಂಡ, ಕ್ರಿಯೇಟಿವಿಟಿ ಮೂಲಕ ಚಂಡೆಯನ್ನು ಬಾರಿಸುವ ಮೂಲಕ ಚಂಡೆ ಪ್ರಿಯರನ್ನು ಹುಬ್ಬೇರಿಸುವಂತೆ ಮಾಡಿದೆ.

ಉಡುಪಿ ಶ್ರೀ ಕೃಷ್ಣನ ಗರ್ಭಗುಡಿಗೆ ಚಿನ್ನದ ಹೊದಿಕೆ, ವೈಶಿಷ್ಟ್ಯತೆಗಳೇನು? ಉಡುಪಿ ಶ್ರೀ ಕೃಷ್ಣನ ಗರ್ಭಗುಡಿಗೆ ಚಿನ್ನದ ಹೊದಿಕೆ, ವೈಶಿಷ್ಟ್ಯತೆಗಳೇನು?

ಯುವಕ, ಕನ್ನಡ, ತುಳು, ಹಿಂದಿ, ತಮಿಳು ಹಾಡಿನ ಜೊತೆಗೆ ವಾಶಿಂಗ್ ಪೌಡರ್ ನಿರ್ಮಾ.. ಹಾಲಿನಂತಹ ಹೊಳಪು ಎನ್ನುವ ಜಾಹೀರಾತನ್ನೂ ಹಾಡಿ, ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿದ್ದಾರೆ. ಅದಕ್ಕೆ ಸರಿಯಾಗಿ ಚೆಂಡೆಯವರೂ ಬಾರಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

English summary
Youths from Subhash Nagar, Udupi, new style of chende instrument getting lot of appreciation in social media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X