ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಫಾಲ್ಸ್ ನಲ್ಲಿ ಸೆಲ್ಫೀ ತೆಗೆಯಲು ಹೋಗಿ ಯುವಕ ನೀರು ಪಾಲು

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಆಗಸ್ಟ್ 16: ಸೆಲ್ಫೀ ಹುಚ್ಚು ಯುವಕನೊಬ್ಬನನ್ನು ಬಲಿ ಪಡೆದಿದೆ. ಸ್ನೇಹಿತರಿಬ್ಬರು ಫಾಲ್ಸ್ ತುದಿಯಲ್ಲಿ ಸೆಲ್ಫೀ ಕ್ಲಿಕ್ಕಿಸುತ್ತಿದ್ದ ಸಂದರ್ಭ ಕಾಲು ಜಾರಿ ನೀರಿಗೆ ಬಿದ್ದು ಕೊಚ್ಚಿ ಹೋದ ಘಟನೆ ಕಾರ್ಕಳ ತಾಲೂಕಿನ ನಿಟ್ಟೆ ಅರ್ಬಿ ಫಾಲ್ಸ್ ನಲ್ಲಿ ಗುರುವಾರ ಸಂಜೆ ನಡೆದಿದೆ.

 ಪ್ರೀತಿಸಿದ ಹುಡುಗಿ ವಿಷ ಕೊಟ್ಟ ವಿಷಯ ಯುವಕನ ಸೆಲ್ಫೀ ವಿಡಿಯೋದಿಂದ ಬಹಿರಂಗ ಪ್ರೀತಿಸಿದ ಹುಡುಗಿ ವಿಷ ಕೊಟ್ಟ ವಿಷಯ ಯುವಕನ ಸೆಲ್ಫೀ ವಿಡಿಯೋದಿಂದ ಬಹಿರಂಗ

ಸುದೇಶ್ ಮತ್ತು ಭರತ್ ಎಂಬ ಇಬ್ಬರು ಸ್ನೇಹಿತರು ನೀರಿನಲ್ಲಿ ಆಟವಾಡುತ್ತ ಸೆಲ್ಫೀ ತೆಗೆಯುತ್ತಿದ್ದರು. ಸೆಲ್ಫೀ ಕ್ಲಿಕ್ಕಿಸುವ ಭರದಲ್ಲಿ ನೀರಿಗೆ ಜಾರಿ ಬಿದ್ದಿದ್ದಾರೆ. ಈ ಸಮಯ ಇಬ್ಬರು ನೀರಿನಲ್ಲಿ ಕೊಚ್ಚಿ ಹೋಗಿದ್ದು, ಭರತ್ ಅಪಾಯದಿಂದ ಪಾರಾಗಿದ್ದಾರೆ.

 Youth Died While Taking Selfie In Karkala

ನಂದಳಿಕೆ ಕುಂಟಲಗುಂಡಿ ನಿವಾಸಿ ಸುದೇಶ್ (18 ) ನೀರು ಪಾಲಾದ ಯುವಕ. ಯುವಕನಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಘಟನಾ ಸ್ಥಳಕ್ಕೆ ತಹಶೀಲ್ದಾರ್, ಅಗ್ನಿಶಾಮಕ ದಳ ಭೇಟಿ ನೀಡಿ ಹುಡುಕಾಟ ನಡೆಸುತ್ತಿದ್ದಾರೆ.

ಚಿತ್ರದುರ್ಗದಲ್ಲಿ ದಂಪತಿ ಆತ್ಮಹತ್ಯೆಗೆ ಯತ್ನ; ಗಂಡ ಸಾವುಚಿತ್ರದುರ್ಗದಲ್ಲಿ ದಂಪತಿ ಆತ್ಮಹತ್ಯೆಗೆ ಯತ್ನ; ಗಂಡ ಸಾವು

ಕಾರ್ಕಳ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪ್ರಕರಣ ದಾಖಲಾಗಿದೆ.

English summary
while two friends were taking a selfie at the falls, they slipped to water and one died. The incident took place on Thursday evening at the Nitte Arbi Falls in Karkala Taluk.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X