ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಲಸೆ ಕಾರ್ಮಿಕರನ್ನು ಊರಿಗೆ ತಲುಪಿಸಿದ ಉಡುಪಿಯ ದಿಟ್ಟ ಯುವತಿ

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಮೇ 20: ಉಡುಪಿಯ ಇಂದ್ರಾಳಿ ರೈಲ್ವೇ ನಿಲ್ದಾಣದಲ್ಲಿ ತಂಗಿದ್ದ ತೆಲಂಗಾಣ ಮೂಲದ 49 ಜನ ವಲಸೆ ಕಾರ್ಮಿಕರಿಗೆ ಉಡುಪಿ ಜಿಲ್ಲೆಯಿಂದ ಮುಕ್ತಿ ಸಿಕ್ಕಿದೆ.

Recommended Video

ಕೂಲಿಕಾರ್ಮಿಕರಿಗೆ ಪ್ರತಿಜ್ಞಾವಿಧಿ ಬೋಧಿಸಿ 'ಬದು‌ನಿರ್ಮಾಣ ಅಭಿಯಾನ' ಕ್ಕೆ ಚಾಲನೆ ನೀಡಿದ ಬಿ.ಸಿ.ಪಾಟೀಲ್ | BC Patil

ಇದೀಗ ಅಚ್ಚರಿ ಅಂದ್ರೆ, ಈ ರೀತಿ ತೆರಳುತ್ತಿರುವ ಆ 49 ವಲಸೆ ಕಾರ್ಮಿಕರಿಗೆ ಉಡುಪಿ ಜಿಲ್ಲಾಡಳಿತದಿಂದಾಗಲೀ, ಕರ್ನಾಟಕ ಸರಕಾರದಿಂದಾಗಲೀ ಸೂಕ್ತವಾದ ಸ್ಪಂದನೆ ಸಿಕ್ಕಿರಲಿಲ್ಲ. ಉಡುಪಿ ಜಿಲ್ಲೆಯಿಂದ ತಮ್ಮ ತವರು ರಾಜ್ಯ ತೆಲಂಗಾಣಕ್ಕೆ ತೆರಳಲು ಕಾರ್ಮಿಕರು ಸಿದ್ಧರಾಗಿದ್ದಾರೆ.

ಉಡುಪಿಯಲ್ಲಿ ಮೀನುಗಾರಿಕಾ ಬೋಟ್ ಮುಳುಗಡೆಉಡುಪಿಯಲ್ಲಿ ಮೀನುಗಾರಿಕಾ ಬೋಟ್ ಮುಳುಗಡೆ

ಬದಲಿಗೆ ಅವರೆಲ್ಲರಿಗೂ ಸ್ಪಂದಿಸಿ ಅವರನ್ನ ಊರಿಗೆ ತಲುಪಿಸಿಯೇ ತಲುಪಿಸ್ತೀನಿ ಅಂತಾ ಪಣ ತೊಟ್ಟವಳು ಓರ್ವ ಯುವತಿ. ಈಕೆಗೆ ಸಾಥ್ ನೀಡಿದವರು ಮಣಿಪಾಲ‌ ಪೊಲೀಸರು. ವಲಸೆ ಕಾರ್ಮಿಕರ ಪಾಲಿಗೆ ಆಪದ್ಬಾಂಧವಳಾಗಿ ಬಂದವಳೇ ಮುಂಬೈ‌ ಮೂಲದ ಸಾಯಿಶ್ರೀ ಅಕೊಂಡಿ.

Young Woman In Udupi Helped Migrants To Reach Telangana

2018 ರಲ್ಲಿ ಮಣಿಪಾಲ್‌ ಇನ್ಸ್ಟಿಟ್ಯೂಟ್ ಆಫ್‌ ಟೆಕ್ನಾಲಜಿ (MIT) B.Tech ಮುಗಿಸಿರುವ ಈಕೆ, ಇತ್ತೀಚೆಗೆ ಕಾರ್ಯ ನಿಮಿತ್ತ ಮಣಿಪಾಲಕ್ಕೆ ಆಗಮಿಸಿ, ಲಾಕ್‌ಡೌನ್‌ ಆಗಿದ್ದಳು. ಕೆಲ ದಿನಗಳ ಹಿಂದೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ವಲಸೆ ಕಾರ್ಮಿಕರ ಸ್ಥಿತಿ ಕಂಡು ಮರುಗಿದಳು.

ಸ್ನೇಹಿತ ವಿನೀತ್ ಜೊತೆಗೂಡಿ, ಮೇ 12 ರಂದು ಸೇವಾ ಸಿಂಧು ವೆಬ್‌ಸೈಟ್‌ ಗೆ ತೆರಳಿ ಆ ಎಲ್ಲಾ 49 ಜನ ವಲಸೆ ಕಾರ್ಮಿಕರ ಹೆಸರು ನೋಂದಾಯಿಸಿದ್ದಾರೆ. ಅದಕ್ಕೂ ಜಾಸ್ತಿ ತನ್ನ ಟ್ವಿಟ್ಟರ್‌ ಖಾತೆಯ ಮೂಲಕ ತೆಲಂಗಾಣ ಸಿಎಂ, TRS ಪಕ್ಷದ ನಾಯಕಿ ಕವಿತಾ, ಬಾಲಿವುಡ್‌ ನಟ ಸೋನು ಸೂದ್ ಅವರಿಗೆ ಮಣಿಪಾಲದ ಇಂದ್ರಾಳಿ ರೈಲ್ವೇ ನಿಲ್ದಾಣದ ಬಳಿ ಪರದಾಡುತ್ತಿದ್ದ ವಲಸೆ ಕಾರ್ಮಿಕರ ಸಂಕಷ್ಟದ ಬಗ್ಗೆ ಟ್ಯಾಗ್‌ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

Young Woman In Udupi Helped Migrants To Reach Telangana

ಈ ಬಗ್ಗೆ ಮಾತನಾಡಿದ ಸಾಯಿಶ್ರೀ, ""ಇತ್ತೀಚೆಗೆ ಮುಂಬೈನಲ್ಲಿದ್ದ ವಲಸೆ ಕಾರ್ಮಿಕರಿಗೆ ಸೋನು ಸೂದ್ ಅವರು ನೀಡಿದ ಸಹಾಯದಿಂದಲೇ, ಆ ಬಾಲಿವುಡ್‌ ನಟನಿಗೆ ಟ್ವಿಟ್ಟರ್ ನಲ್ಲಿ ಟ್ಯಾಗ್‌ ಮಾಡಲು ಪ್ರೇರೇಪಿಸಿತು. ನನ್ನ ಟ್ವೀಟ್ ಗೆ ತಕ್ಷಣವೇ ತೆಲಂಗಾಣ ಸಿಎಂ ಕಚೇರಿಯಿಂದ 24 ಗಂಟೆಯೊಳಗಾಗಿ ಪ್ರತಿಕ್ರಿಯೆಯೂ ಬಂತು'' ಎಂದಿದ್ದಾಳೆ.

Young Woman In Udupi Helped Migrants To Reach Telangana

ಕರೆ ಮಾಡಿ ಮಾತನಾಡಿದ ತೆಲಂಗಾಣ ಸಿಎಂ ಕಚೇರಿಯವರು, ಅವರ ರಾಜ್ಯದ ಕಾರ್ಮಿಕರಿಗೆ ಸ್ಪಂದಿಸುವ ಭರವಸೆ ನೀಡಿದರು. ಮಾತ್ರವಲ್ಲದೇ ತಕ್ಷಣವೇ KSRTC ಬಸ್‌ಗಳನ್ನೂ ಸಂಪರ್ಕಿಸಲು ತಿಳಿಸಿದರು. ಜೊತೆಗೆ ರಾಜ್ಯಕ್ಕೆ ಆಗಮಿಸಲು ಅವರಿಗೆ ಅವಕಾಶ ನೀಡುವುದಾಗಿಯೂ ತೆಲಂಗಾಣ ಸರ್ಕಾರದವರು ತಿಳಿಸಿದರು ಎಂದು ಸಾಯಿಶ್ರೀ ಹೇಳಿದ್ದಾರೆ.

English summary
Migrant Workers are preparing to move from Udupi district to their home state of Telangana.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X