ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಡುಪಿ ಯುವಕರ ಸಾಧನೆ; ಲಸಿಕೆ ಲಭ್ಯತೆ ತಿಳಿಸಲಿದೆ ಅಪ್ಲಿಕೇಶನ್!

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಜೂನ್ 28; ಕೋವಿಡ್ ಲಸಿಕೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿದೆ. ದೇಶದಲ್ಲಿ ಪ್ರತಿ ದಿನ ಲಕ್ಷಾಂತರ ಜನ ಲಸಿಕೆ ಪಡೆಯುತ್ತಿದ್ದಾರೆ. ಲಸಿಕೆಯ ಲಭ್ಯತೆ ಮತ್ತು ಕಾಯ್ದಿರಿಸಿಕೊಳ್ಳಲು ಜನ ಪರದಾಡುತ್ತಿದ್ದಾರೆ. ಹೀಗೆ ತನ್ನ ಪೋಷಕರಿಗೆ ವಾಕ್ಸಿನ್ ಕಾಯ್ದಿರಿಸಿಕೊಳ್ಳಲು ಪರದಾಡಿದ ಯುವಕರಿಬ್ಬರು ತನಗಾದ ಕಿರಿಕಿರಿ ಇನ್ಯಾರಿಗೂ ಆಗದಿರಲಿ ಎಂದು ಹೊಸ ತಂತ್ರಜ್ಞಾನ ಆವಿಷ್ಕರಿಸಿದ್ದಾರೆ.

ಉಡುಪಿ ಜಿಲ್ಲೆಯ ಬ್ರಹ್ಮಾವರದ ಸಾಲಿಗ್ರಾಮ ನಿವಾಸಿ ರಾಮ್‌ದಾಸ್ ಹೊಸ ಅಪ್ಲಿಕೇಶನ್ ತಯಾರು ಮಾಡಿದ್ದಾರೆ. ಕಂಪ್ಯೂಟರ್ ಸೈನ್ಸ್ ‌ಇಂಜಿನಿಯರ್ ಆಗಿರುವ ಇವರು ಬೆಂಗಳೂರಿನ ಪ್ರತಿಷ್ಟಿತ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ‌.

 ಸರ್ಕಾರಿ ಕೋಟಾದಡಿ ಬಾರದ ಲಸಿಕೆ: ಜನರ ಪರದಾಟ, ಆಯೋಜಕರ ಪೀಕಲಾಟ! ಸರ್ಕಾರಿ ಕೋಟಾದಡಿ ಬಾರದ ಲಸಿಕೆ: ಜನರ ಪರದಾಟ, ಆಯೋಜಕರ ಪೀಕಲಾಟ!

ಲಾಕ್‌ಡೌನ್‌ನಲ್ಲಿ ಊರಿಗೆ ಮರಳಿದ ರಾಮ್‌ದಾಸ್ ಕಳೆದ ತಿಂಗಳ ಮೇ 3ರಂದು ತನ್ನ ತಂದೆಗೆ ವ್ಯಾಕ್ಸಿನ್ ಕೊಡಿಸಲು ವ್ಯಾಕ್ಸಿನ್ ಲಭ್ಯವಿರುವ ಕೇಂದ್ರ ಹುಡುಕಾಡಿದ್ದರು. ಬಹಳಷ್ಟು ಹುಡುಕಾಟದ ಬಳಿಕ ಲಸಿಕಾ ಕೇಂದ್ರದಲ್ಲಿ ಕ್ಯೂ ನಿಂತು ಲಸಿಕೆ ಪಡೆದಿದ್ದರು. ಲಸಿಕೆ ಪಡೆಯಲು ಭಾರೀ ಕಷ್ಟಪಟ್ಟ ರಾಮ್‌ದಾಸ್ ತನ್ನ ಹಾಗೆಯೇ ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ಸಂಬಂಧಿಕ ಕಾರ್ತಿಕ್ ನೆರವು ಪಡೆದು ಜನರಿಗೆ ಉಪಯೋಗುವಂತಹ ಅಪ್ಲಿಕೇಶನ್ ತಯಾರು ಮಾಡಿದ್ದಾರೆ.

ಹೊಸ ದಾಖಲೆ: ಬೆಂಗಳೂರಿನಲ್ಲಿ ಶೇ.50ರಷ್ಟು ಜನರಿಗೆ ಕೊರೊನಾವೈರಸ್ ಲಸಿಕೆ ಹೊಸ ದಾಖಲೆ: ಬೆಂಗಳೂರಿನಲ್ಲಿ ಶೇ.50ರಷ್ಟು ಜನರಿಗೆ ಕೊರೊನಾವೈರಸ್ ಲಸಿಕೆ

Udupi Young Man Developed Application For Vaccination Reminder

15 ದಿನಗಳಲ್ಲಿ ರಾಮ್‌ದಾಸ್ ಹಾಗೂ ಕಾರ್ತಿಕ್ ಅಪ್ಲಿಕೇಶನ್ ಸಿದ್ಧಪಡಿಸಿದ್ದಾರೆ. ಈ ಆ್ಯಪ್‌ ಮೂಲಕವೇ ವ್ಯಾಕ್ಸಿನ್ ಲಭ್ಯತೆ ಪತ್ತೆ ಹಚ್ಚಿ ಸುಲಭವಾಗಿ ವ್ಯಾಕ್ಸಿನ್ ಪಡೆಯಬಹುದಾಗಿದೆ. ಈ ಆ್ಯಪ್ ಹೆಸರು 'ವಿ ಟ್ರ್ಯಾಕ್' ಎಂಬುದಾಗಿದ್ದು, ಪ್ಲೇ ಸ್ಟೋರ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಕೋವಿಡ್‌ ಲಸಿಕೆ ಪ್ರಮಾಣಪತ್ರಕ್ಕೆ ಪಾಸ್‌ಪೋರ್ಟ್ ವಿವರ ಲಿಂಕ್‌ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿಕೋವಿಡ್‌ ಲಸಿಕೆ ಪ್ರಮಾಣಪತ್ರಕ್ಕೆ ಪಾಸ್‌ಪೋರ್ಟ್ ವಿವರ ಲಿಂಕ್‌ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ

ಅಪ್ಲಿಕೇಶನ್‌ನಲ್ಲಿ ವಾಸವಿರುವ ತಾಲೂಕಿನ‌ ಪಿನ್‌ಕೋಡ್ ಹಾಕಿ ವ್ಯಾಕ್ಸಿನ್ ಪಡೆದುಕೊಳ್ಳಲಿರುವ ಕೇಂದ್ರವನ್ನು ಆಯ್ಕೆ ಮಾಡಿದರೆ ಆ ಕೇಂದ್ರದಲ್ಲಿ ವ್ಯಾಕ್ಸಿನ್ ಲಭ್ಯವಿದ್ದಾಗ ಮೊಬೈಲ್‌ಗೆ ನೋಟಿಫಿಕೇಶನ್ ಬರುವುದರ ಜೊತೆಗೆ ಅದನ್ನ ಓದುವವರೆಗೆ ಅಲ್ರಾಮ್ ಸದ್ದು ಕೂಡಾ ಬರುತ್ತದೆ.

ಹೀಗಾಗಿ ಆ್ಯಪ್ ಮೂಲಕ ಬುಕ್ ಆಯ್ಕೆ ಮಾಡಿದರೆ ನೇರವಾಗಿ ಕೋವಿನ್ ಆ್ಯಪ್‌ನಲ್ಲಿ ರಿಜಿಸ್ಟರ್ ಆಗುತ್ತೆ ಈ ಮೂಲಕ ಸುಲಭವಾಗಿ ವ್ಯಾಕ್ಸಿನ್ ಪಡೆದುಕೊಳ್ಳಬಹುದಾಗಿದೆ. ಸದ್ಯ 1 ಸಾವಿರಕ್ಕೂ ಅಧಿಕ ಮಂದಿ ಈ ಆ್ಯಪ್‌ ಡೌನ್‌ಲೋಡ್ ಮಾಡಿಕೊಂಡಿದ್ದಾರೆ.‌

Recommended Video

ದಾಖಲೆ ಪ್ರಮಾಣದಲ್ಲಿ ಭಾರತದಲ್ಲಿ ಲಸಿಕೆ ಅಭಿಯಾನ | Oneindia Kannada

ಮುಂದಿನ ದಿನಗಳಲ್ಲಿ ಈ ಅಪ್ಲಿಕೇಶನ್‌ ಮತ್ತಷ್ಟು ಅಭಿವೃದ್ಧಿಪಡಿಸುವ ಆಲೋಚನೆ ಯುವಕರಲ್ಲಿದೆ. ಆ್ಯಪ್‌ ಮೂಲಕ ವಯಸ್ಸು, ವ್ಯಾಕ್ಸಿನ್ ಆಯ್ಕೆ ಮಾಡುವ ತಂತ್ರಜ್ಞಾನ ರೂಪಿಸಲಿದ್ದಾರೆ. ಆ್ಯಪ್ ಸರಿಯಾದ ಕ್ರಮದಲ್ಲಿ ಉಪಯೋಗವಾದರೆ ಅದೆಷ್ಟೋ ಮಂದಿಗೆ ವ್ಯಾಕ್ಸಿನ್ ಹುಡುಕಾಟದ ಕಿರಿಕಿರಿ ತಪ್ಪಲಿದೆ.

English summary
A young man from Udupi come up with mobile application that will help people for vaccination reminder. Saligrama based Ramdas developed application with his friend.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X