ವಿದ್ಯಾರ್ಥಿನಿ ಕುಡಿದು ತೂರಾಡಿದ ವಿಡಿಯೋ ವೈರಲ್, ಯುವಕನ ಬಂಧನ
ಉಡುಪಿ, ಅಕ್ಟೋಬರ್ 23: ವಿದ್ಯಾರ್ಥಿನಿಯೊಬ್ಬಳು ಮಣಿಪಾಲದ ಲಕ್ಷ್ಮೀಂದ್ರ ನಗರದ ಬಾರೊಂದರಲ್ಲಿ ಕುಡಿದು ತೂರಾಡುತ್ತ ಹೊರಬರುತ್ತಿರುವ ದೃಶ್ಯವೊಂದು ವೈರಲ್ ಆಗಿದ್ದು, ಈ ವೀಡಿಯೊ ವೈರಲ್ ಮಾಡಿದ ಯುವಕನನ್ನು ಬಂಧಿಸಲಾಗಿದೆ.
ವೈರಲ್ ಆಯ್ತು ವಿಮಾನ ಹೈಜಾಕ್ ವಿಡಿಯೋ... ಅಸಲಿ ಕತೆಯೇ ಬೇರೆ!
ವೈರಲ್ ಆದ ವಿಡಿಯೋದಲ್ಲಿ ವಿದ್ಯಾರ್ಥಿನಿಯೊಬ್ಬಳು ಕುಡಿದ ಮತ್ತಿನಲ್ಲಿ ತೂರಡುತ್ತಾ ಯುವಕನೊಬ್ಬನನ್ನು ತಬ್ಬಿಕೊಳ್ಳುವ ದೃಶ್ಯವಿದೆ. ಈ ದೃಶ್ಯಗಳನ್ನು ಉಡುಪಿ ಸಂತೆಕಟ್ಟೆಯ ಯುವಕನೊಬ್ಬ ತನ್ನ ಮೊಬೈಲ್ನಲ್ಲಿ ಸೆರೆ ಹಿಡಿದು ವಾಟ್ಸ್ ಆಪ್ ಮೂಲಕ ಹರಿಬಿಟ್ಟಿದ್ದ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಬಾರ್ ಮಾಲೀಕರು ಯುವಕನನ್ನು ಪತ್ತೆ ಹಚ್ಚಿದ್ದಾರೆ. ಅಲ್ಲದೇ ಆತನನ್ನು ಬಾರ್ಗೆ ಕರೆತಂದು ಥಳಿಸಿ, ಬಳಿಕ ಮಣಿಪಾಲ ಪೊಲೀಸರಿಗೆ ಒಪ್ಪಿಸಿದ್ದಾರೆ.
ಪೊಲೀಸರು ಯುವಕನ ಮೇಲೆ ಸಾರ್ವಜನಿಕ ಪ್ರದೇಶದಲ್ಲಿ ಶಾಂತಿ ಭಂಗ ತಂದ ಪ್ರಕರಣ ದಾಖಲಿಸಿದ್ದಾರೆ.