ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಣಿಪಾಲ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯ:ಯುವ ಪತ್ರಕರ್ತೆ ಸಾವು

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಮೇ.09: ಮಣಿಪಾಲ ಆಸ್ಪತ್ರೆ ವೈದ್ಯರ ಎಡವಟ್ಟಿನಿಂದ ಯುವ ಪತ್ರಕರ್ತೆಯೊಬ್ಬಳು ಸಾವನ್ನಪ್ಪಿದ ಘಟನೆ ಬುಧವಾರ(ಮೇ.08) ನಡೆದಿದೆ.

ಸಾಸ್ತಾನ ಬಳಿಯ ಗುಂಡ್ಮಿಯ ಅರ್ಚನಾ ಗುಂಡ್ಮಿ ಮೃತಪಟ್ಟ ಯುವ ಪತ್ರಕರ್ತೆಯಾಗಿದ್ದಾರೆ. ಕೆಲವು ಸಮಯ ಪ್ರೈಮ್ ಟಿವಿ ಸುದ್ದಿ ಸಂಪಾದಕಿಯಾಗಿದ್ದರು.ನಂತರ ಖಾಸಗಿ ‌ವಾಹಿನಿಗಳಲ್ಲಿ ಪತ್ರಕರ್ತೆಯಾಗಿ ಕೆಲಸ ಮಾಡುತ್ತಿದ್ದರು.

ಕಟೀಲಿನಲ್ಲಿ ಸುಸಜ್ಜಿತ ಆಸ್ಪತ್ರೆ ಕಟ್ಟಿಸಿ ಬಡವರ ಬಂಧುವಾದ ವೈದ್ಯಕಟೀಲಿನಲ್ಲಿ ಸುಸಜ್ಜಿತ ಆಸ್ಪತ್ರೆ ಕಟ್ಟಿಸಿ ಬಡವರ ಬಂಧುವಾದ ವೈದ್ಯ

H1N1 ಕಾಯಿಲೆ ಚಿಕಿತ್ಸೆಗೆ ಕಳೆದ 18 ದಿನಗಳ ಹಿಂದೆ ಮಣಿಪಾಲ‌ ಆಸ್ಪತ್ರೆಗೆ ದಾಖಲಾಗಿದ್ದರು. ಆರಂಭದಲ್ಲಿ ಬಂದ ರಿಪೋರ್ಟ್ ನಲ್ಲಿ ಮಣಿಪಾಲದ ವೈದ್ಯರು H1N1 ಇಲ್ಲ ಎಂದು ಕುಟುಂಬಸ್ಥರ ಬಳಿ ತಿಳಿಸಿದ್ದರು. ನಂತರ ಪುಣೆಯಿಂದ ಬಂದ ವರದಿಯಲ್ಲಿ H1N1 ಇರುವುದರ ಬಗ್ಗೆ ಪತ್ತೆಯಾಗಿ ಚಿಕಿತ್ಸೆ ಪಡೆಯುತ್ತಿದ್ದರು‌.

Young journalist Archana Gundmi died of a doctors negligence

ನಡೆದಾಡುಕೊಂಡು ಆರೋಗ್ಯವಂತರಾಗಿಯೇ ಬಂದಿದ್ದ ಅರ್ಚನಾಗೆ ಚೆನ್ನಾಗಿಯೇ ಚಿಕಿತ್ಸೆ ನಡೆಯುತ್ತಿತ್ತು. ಅರ್ಚನಾ ಚೇತರಿಸಿಕೊಂಡಿದ್ದರು.ಸುಮಾರು 2 ಲಕ್ಷದವರೆಗೆ ಆಸ್ಪತ್ರೆ ಚಿಕಿತ್ಸೆಯನ್ನು ಕುಟುಂಬಸ್ಥರು ಭರಿಸಿದ್ದರು.

ನಂತರ ಆಯೂಷ್ಮಾನ್ ಭಾರತ್ ಕಾರ್ಡ್ ಇರೋಂದ್ರಿಂದ ಅದರ ಮೂಲಕ ಚಿಕಿತ್ಸೆ ಮುಂದುವರೆಸಲು ಮುಂದಾದ ಕಾರಣ ಆಸ್ಪತ್ರೆ ಆಡಳಿತ ಮಂಡಳಿ ಚಿಕಿತ್ಸೆ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದರು ಅನ್ನೋದು ಕುಟುಂಬಸ್ಥರ ಆರೋಪವಾಗಿದೆ.

ಅರ್ಚನಾ ಆರೋಗ್ಯ ಹದಗೆಡುತ್ತಾ ಗಂಭೀರ ಸ್ಥಿತಿ ಪಡೆಯುತ್ತಿದ್ದಂತೆ ಕುಟುಂಬಸ್ಥರಿಗೆ ಸಂಶಯ ಬಂದು ಕೇಳಿದಾಗ ಬದುಕುಳಿಯುವ ಸಾಧ್ಯತೆ ಕಮ್ಮಿ ಅನ್ನೋದನ್ನು ಉಡಾಫೆಯಾಗಿ ವೈದ್ಯರು ಹೇಳಿದ್ದಾರೆ ಅನ್ನೋದು ಕುಟುಂಬಸ್ಥರ ಆರೋಪವಾಗಿದೆ.

Young journalist Archana Gundmi died of a doctors negligence

ಅರ್ಚನಾ ನಾಲ್ಕು ತಿಂಗಳ ಹಿಂದೆ ಗಣೇಶ್ ಎಂಬುವವರ ಜೊತೆ ಮದುವೆಯಾಗಿದ್ದರು.ಈಗ ಗರ್ಭಿಣಿಯಾಗಿದ್ದರು.ಇದೀಗ ಹೊಟ್ಟೆಯಲ್ಲಿದ್ದ ಮಗು ಸಹ ಪ್ರಾಣ ಕಳೆದುಕೊಂಡಿರುವುದರಿಂದ ಅರ್ಚನಾ ಕುಟುಂಬ ಕಣ್ಣೀರಲ್ಲಿ ಮುಳುಗಿದೆ.

ಆರ್ಚನಾರ ಮನೆಯವರು ಕೆಲ ಹೊತ್ತು ಮಣಿಪಾಲದ ವೈದ್ಯರ ನಿರ್ಲಕ್ಷ್ಯಕ್ಕೆ ಆಸ್ಪತ್ರೆ ಮುಂದೆ ಹೆಣ ಇಟ್ಟು ಪ್ರತಿಭಟನೆ ನಡೆಸಿದ್ದಾರೆ.ಆದರೆ ಮಣಿಪಾಲ ಆಸ್ಪತ್ರೆಯ ವೈದ್ಯರಾಗಲಿ, ಅಲ್ಲಿಯ ಸಂಸ್ಥೆಯವರಾಗಲಿ ಸ್ಪಂದಿಸಿಲ್ಲ.

English summary
Young journalist Archana Gundmi died of a doctor's negligence.She is admitted to Manipal hospital 18 days ago. Archana, who was still treated after discharging, is now dead.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X