ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಲ್ಪೆ ಮೀನು ವ್ಯಾಪಾರಿ ಕೊಲೆ ಯತ್ನ ಪ್ರಕರಣ; ಐವರ ಬಂಧನ

|
Google Oneindia Kannada News

ಉಡುಪಿ, ಜೂನ್ 11: ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಮೀನು ವ್ಯಾಪಾರಿ ಕೆ.ಮಹಮ್ಮದ್ ರಿಯಾಝ್ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಪೊಲೀಸರು 5 ಮಂದಿಯನ್ನು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.

ಬಂಧಿತರನ್ನು ಫರಂಗಿಪೇಟೆಯ ಇಸ್ಮಾಯಿಲ್ (45), ಆತನ ಸಹೋದರ ಮುಹಮ್ಮದ್ ಗೌಸ್ (35), ಮುಹಮ್ಮದ್ ಕೈಸರ್ (60), ಮುನೀರ್ (25), ಅನ್ವರ್ (25) ಎಂದು ಗುರುತಿಸಲಾಗಿದೆ. ಬಂಧಿತರ ಪೈಕಿ ಇಸ್ಮಾಯಿಲ್ ಕೊಲೆ ಯತ್ನದ ಪ್ರಮುಖ ಆರೋಪಿಯಾಗಿದ್ದಾನೆ. ಈತ ರಿಯಾಝ್ ಕೊಲೆಗೆ ಸುಪಾರಿ ನೀಡಿದ್ದ ಎನ್ನಲಾಗಿದೆ.

ಮಂಗಳೂರಿನ ಮೀನು ವ್ಯಾಪಾರಿ ಮೇಲೆ ಮಾರಕಾಸ್ತ್ರಗಳಿಂದ ದಾಳಿಮಂಗಳೂರಿನ ಮೀನು ವ್ಯಾಪಾರಿ ಮೇಲೆ ಮಾರಕಾಸ್ತ್ರಗಳಿಂದ ದಾಳಿ

ಜೂನ್ 7 ರಂದು ಮಲ್ಪೆ ಬಂದರಿಗೆ ಮೀನಿನ ವ್ಯಾಪಾರಕ್ಕೆ ಬಂದಿದ್ದ ಮಹಮ್ಮದ್ ರಿಯಾಝ್ ಮೇಲೆ ನಾಲ್ವರು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದರು.

Young Fish merchant murder attempt 5 arrested

 ಮಂಗಳೂರು: ವಿದ್ಯಾರ್ಥಿನಿ ಅಂಜನಾಳನ್ನ ಕೊಲೆ ಮಾಡಿದ್ದೇಕೆ? ಮಂಗಳೂರು: ವಿದ್ಯಾರ್ಥಿನಿ ಅಂಜನಾಳನ್ನ ಕೊಲೆ ಮಾಡಿದ್ದೇಕೆ?

ಮೀನು ವ್ಯಾಪಾರಕ್ಕೆ ಮುಂಜಾನೆ 4:30ರ ಸಮಯದಲ್ಲಿ ಇತರ ಮೂವರೊಂದಿಗೆ ಎಂದಿನಂತೆ ಪಿಕಪ್ ವಾಹನದಲ್ಲಿ ರಿಯಾಜ್ ಉಡುಪಿ ಮಲ್ಪೆ ಮೀನುಗಾರಿಕಾ ಬಂದರಿಗೆ ಬಂದಿದ್ದರು. ಇತರ ಮೂವರು ಚಹಾ ಕುಡಿಯಲು ಇಳಿದು ಹೋಗಿದ್ದ ಸಂದರ್ಭ ರಿಯಾಝ್ ವಾಹನದಲ್ಲೇ ನಿದ್ರೆಗೆ ಜಾರಿದ್ದರು. ಇದೇ ಸಮಯದಲ್ಲಿ ಅವರ ವಾಹನವನ್ನು ಹಿಂಬಾಲಿಕೊಂಡು ಬಂದಿದ್ದ ಕಾರಿನಲ್ಲಿದ್ದ ನಾಲ್ವರು ರಿಯಾಝ್ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಪರಾರಿಯಾಗಿದ್ದರು. ಸ್ಥಳೀಯರು ರಿಯಾಜ್ ಅವರನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದರು.

English summary
In relation to fish merchant Riyaz (32) murder attempt case, Udupi police arrested 5 accused in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X