• search
  • Live TV
ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮದ್ಯ ವ್ಯಸನಿಗಳ ಮಕ್ಕಳಿಗಾಗಿ ಮರಳು ಶಿಲ್ಪದ ಮೂಲಕ 'ನೀನು ಒಂಟಿಯಲ್ಲ ಸಂದೇಶ'!

By ಉಡುಪಿ ಪ್ರತಿನಿಧಿ
|

ಉಡುಪಿ, ಫೆಬ್ರವರಿ 15: ಉಡುಪಿಯ ಡಾ.ಎ.ವಿ ಬಾಳಿಗ ಸ್ಮಾರಕ ಆಸ್ಪತ್ರೆ, ರೋಟರಿ ಕ್ಲಬ್, ಉಡುಪಿ-ಮಣಿಪಾಲ, ಐಎಂಎ ಉಡುಪಿ ಸಹಯೋಗದಲ್ಲಿ ಮಲ್ಪೆಯ ಕಡಲಕಿನಾರೆಯಲ್ಲಿ ಆಕರ್ಷಕ ಮರಳು ಶಿಲ್ಪದ ಮೂಲಕ ಬೀಚ್ ಗೆ ಬಂದವರಿಗೆ ಜಾಗೃತಿ ಮೂಡಿಸಲಾಯಿತು.

ಮದ್ಯ ವ್ಯಸನಿಗಳ ಮಕ್ಕಳ ಜಾಗೃತಿ ಸಪ್ತಾಹದ ಅಂಗವಾಗಿ, ಮಕ್ಕಳ ಮೇಲಾಗುವ ಪರಿಣಾಮದ ದೃಶ್ಯದೊಂದಿಗೆ ಬದುಕಿನಲ್ಲಿ ಭರವಸೆಯನ್ನು ನೀಡುವ "ನೀನು ಒಂಟಿಯಲ್ಲ' ಎನ್ನುವ ಸಂದೇಶದೊಂದಿಗೆ ಜನ ಜಾಗೃತಿ ಮಾಡಲಾಯಿತು.

ಉಡುಪಿ; ಟೋಲ್‌ ವಿನಾಯಿತಿಗೆ ಮನವಿ, ಹೋರಾಟದ ಎಚ್ಚರಿಕೆಉಡುಪಿ; ಟೋಲ್‌ ವಿನಾಯಿತಿಗೆ ಮನವಿ, ಹೋರಾಟದ ಎಚ್ಚರಿಕೆ

ಉಡುಪಿಯ 'ಸ್ಯಾಂಡ್ ಥೀಂ' ತಂಡದ ಕಲಾವಿದರಾದ ಹರೀಶ್ ಸಾಗಾ, ಜೈ ನೇರಳಕಟ್ಟೆ, ಪ್ರಸಾದ್ ಈ ಆಕರ್ಷಕ ಸಂದೇಶ ನೀಡುವ ಮರಳು ಶಿಲ್ಪ ರಚಿಸಿ ಮೆಚ್ಚುಗೆಗೆ ಪಾತ್ರರಾದರು.

ಮದ್ಯದ ಬಾಟಲಿಯ ಮಧ್ಯೆ ಸಿಲುಕಿದ ಮಗು ಕಣ್ಣೀರು ಹಾಕುತ್ತಾ ಸಹಾಯಕ್ಕಾಗಿ ಹಾತೊರಿಯುತ್ತಿರುವುದು. ಅಲ್ಲದೆ, ಒಡೆದ ಗಾಜಿನ ಬಾಟಲಿಯಂತೆ ಛಿದ್ರಗೊಂಡಂತೆ ಮತ್ತು ಇನ್ನೊಬ್ಬಳು ಬಾಲೆ ಹತಾಶೆಯಾಗಿ ಕುಳಿತಿರುವ ದೃಶ್ಯ ಒಂದು ಕಡೆಯಾದರೆ, ಸಮಾಜ, ಕುಟುಂಬ, ಶಾಲೆ, ಗೆಳೆಯರಿಂದ ಮಾನಸಿಕ ಸ್ಥೈರ್ಯದ ಅವಶ್ಯಕತೆಯ ದೃಢ ನಿರ್ಧಾರದ ಕಲ್ಪನೆಯನ್ನು ಕಲ್ಲುಗಳ ಮೂಲಕ ಬಿಂಬಿಸಿ, "ನೀ ಒಬ್ಬಂಟಿಯಲ್ಲ' ಎನ್ನುವ ಪ್ರತಿಬಿಂಬವನ್ನು 3.5 ಅಡಿ ಎತ್ತರ ಮತ್ತು 7 ಅಡಿ ಅಗಲದೊಂದಿಗೆ ರಚಿಸಲಾಗಿತ್ತು.

ಈ ಕಲಾಕೃತಿಗೆ "ನೀನು ಒಂಟಿಯಲ್ಲ' ಎಂಬ ಶೀರ್ಷಿಕೆ ನೀಡಿದ್ದು ಅರ್ಥಪೂರ್ಣ ಸಂದೇಶವನ್ನು ನೋಡುಗರಿಗೆ ನೀಡಿತು.

English summary
Awarness to people with the message 'You are not alone' in Malpe Beach, Udupi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X