ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರಾವಳಿಯ ಗಂಡು ಕಲೆಯನ್ನು ಅಮೆರಿಕದಲ್ಲಿ ಪಸರಿಸಲಿರುವ ಕಲಾವಿದರು

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಜುಲೈ.31: ಯಕ್ಷಗಾನ ಕರಾವಳಿಯ ಗಂಡು ಕಲೆ, ಕರಾವಳಿ ಭಾಗದ ಜನರಿಗೆ ಆರಾಧನಾ ಕಲೆ. ಅದೆಷ್ಟೋ ಜೀವಗಳು ಯಕ್ಷಗಾನಕ್ಕಾಗಿ ಮುಡಿಪಾಗಿವೆ. ಕೇವಲ ಹಳ್ಳಿಗಳಲ್ಲಿ ಪುರಾಣಗಳ ಕಥೆಗಳನ್ನು ಸಾರುವ ಯಕ್ಷಗಾನ ಇಂದು ವಿಶ್ವ ಮಟ್ಟದಲ್ಲೆಯೇ ತನ್ನ ಛಾಪು ಮೂಡಿಸಿದೆ ಎಂದರೆ ಹೆಮ್ಮೆಯ ವಿಷಯವೇ ಸರಿ.

ಹೌದು, ಜಿಲ್ಲೆ, ರಾಜ್ಯ ಹಾಗೂ ದೇಶೀಯ ಮಟ್ಟವಲ್ಲದೆ, ದುಬಾಯಿ, ಕತ್ತರ್ ಸೇರಿದಂತೆ ಅನೇಕ ವಿದೇಶಿ ರಾಷ್ಟ್ರಗಳಲ್ಲೂ ಕಂಪು ಪಸರಿಸಿರುವ ಯಕ್ಷಗಾನದಲ್ಲಿ ಅನೇಕ ರೀತಿಯ ಮೇಳಗಳಿವೆ. ಅದರಲ್ಲೂ ಬಡುಗು ತಿಟ್ಟು ಹಾಗೂ ತೆಂಕು ತಿಟ್ಟು ಅತ್ಯಂತ ಪ್ರಸಿದ್ಧ.

ಯಕ್ಷಗಾನ ಪ್ರಿಯರೆ, ವೆಬ್‌ಸೈಟ್‌ಲ್ಲಿ ಸಿಗಲಿವೆ 5 ಸಾವಿರ ಯಕ್ಷಗಾನ ಪ್ರಸಂಗಯಕ್ಷಗಾನ ಪ್ರಿಯರೆ, ವೆಬ್‌ಸೈಟ್‌ಲ್ಲಿ ಸಿಗಲಿವೆ 5 ಸಾವಿರ ಯಕ್ಷಗಾನ ಪ್ರಸಂಗ

ಬಡಗು ತಿಟ್ಟು ಒಂದು ರೀತಿಯ ಶೈಲಿಯನ್ನು ಇಟ್ಟುಕೊಂಡರೆ, ತೆಂಕು ತಿಟ್ಟಿನಲ್ಲಿ ಇನ್ನೊಂದು ರೀತಿಯ ಶೈಲಿಯನ್ನು ಕಾಣಬಹುದು. ಕೇವಲ ಹಳ್ಳಿಗಳಲ್ಲಿ ಆರಾಧಾನಾ ಕಲೆಯಾಗಿದ್ದ ಯಕ್ಷಗಾನ ಇಂದು ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದೆ.

Yakshagana is performing in America

ಅಂದಹಾಗೆ ಜಗತ್ತಿನಲ್ಲಿ ದೊಡ್ಡಣ್ಣ ಎಂದೇ ಪ್ರಖ್ಯಾತಿ ಹೊಂದಿರುವ ಅಮೇರಿಕ ದೇಶದಲ್ಲಿ ಮೊದಲ ಬಾರಿಗೆ ಯಕ್ಷಗಾನದ ಕಂಪು ಹರಡಿತು. ಅಲ್ಲಿನ ಹ್ಯೂಸ್ಟನ್ ಕೃಷ್ಣವೃಂದಾವನದಲ್ಲಿ ಬೆಳುವಾಯಿ ಶ್ರೀ ಯಕ್ಷದೇವ ಮಿತ್ರ ಕಲಾ ಮಂಡಳಿಯಿಂದ ಬಯಲುರಂಗ ಮಂಟಪದಲ್ಲಿ 'ಶ್ರೀ ದೇವಿ ಮಹಾತ್ಮೆ' ಯಕ್ಷಗಾನವನ್ನು ನಡೆಸಿ ಭಾರತದ ಕಲಾ ಶ್ರೀಮಂತಿಕೆಯನ್ನೂ ಜಗತ್ತಿನೆದುರು ತೋರ್ಪಡಿಸಲಾಗಿದೆ.

ಯಕ್ಷರಂಗದ ಧ್ರುವತಾರೆ ಪಟ್ಲ ಸತೀಶ್ ಶೆಟ್ಟಿ ಅವರ ಸುಶ್ರಾವ್ಯ ಭಾಗವತಿಕಿಗೆ ಅಮೇರಿಕಾದ ಮಂದಿ ಫುಲ್ ಫಿದಾ ಆಗಿದ್ದರು.

Yakshagana is performing in America

ಪಟ್ಲ ಸತೀಶ್ ಶೆಟ್ಟಿ ಅವರ ತೆಂಕುತಿಟ್ಟಿನ ಕಲೆಯನ್ನು ಮುನ್ನಡೆಸುವಲ್ಲಿ ಯಶಸ್ಸಾದರೆ, ಇತ್ತ ಬಡಗತಿಟ್ಟಿನ ಅತ್ಯಂತ ಸರಳ ಹಾಗೂ ಸಜ್ಜನ ಯಕ್ಷ ಗುರು ಎಂದೇ ಪ್ರಸಿದ್ಧಿ ಪಡೆದಿರುವ ಬನ್ನಂಜೆ ಸಂಜೀವ ಸುವರ್ಣ ಅವರು ಬಡಗು ತಿಟ್ಟಿನ ಕಲೆಗೆ ಹೆಚ್ಚು ಪ್ರಾಧಾನ್ಯತೆ ನೀಡುತ್ತಾರೆ.

ಇದೀಗ ಮತ್ತೊಮ್ಮೆ ಯಕ್ಷಗಾನದ ಕಂಪನ್ನು ಪಸರಿಸಲು ದೇವಾನಂದ ಭಟ್ ಬೆಳುವಾಯಿ ನೇತೃತ್ವ ತಂಡದವರಾದ ಪದ್ಮನಾಭ ಉಪಾದ್ಯಾಯ, ಲಕ್ಷ್ಮೀನಾರಾಯಣ ಸಮಗ, ಚಂದ್ರಶೇಖರ ಧರ್ಮಸ್ಥಳ, ಮಹೇಶ್ ಮಣಿಯಾಣಿ, ಮೋಹನ ಬೆಳ್ಳಿಪ್ಪಾಡಿ, ಪ್ರಶಾಂತ್ ಶೆಟ್ಟಿ ನೆಲ್ಯಾಡಿ, ಸೇರಿದಂತೆ ತೆಂಕುತಿಟ್ಟಿನ ಯುವ ಅಗ್ರಮಾನ್ಯ ಕಲಾವಿದರ ತಂಡ ಜುಲೈ.29 ರಂದು ಅಮೇರಿಕಕ್ಕೆ ಹೋಗಿರುವುದು ಸಂತಸದ ವಿಷಯ.

English summary
Devanand Bhat Beluvayi led group has gone to the United States to show Yakshagana's art. This art showcased in the state and country level as well as in Dubai and kather.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X