ಹಿರಿಯ ಯಕ್ಷಗಾನ ಕಲಾವಿದ ವಾಸುದೇವ ಸಾಮಗ ನಿಧನ
ಉಡುಪಿ, ನವೆಂಬರ್ 07: ಯಕ್ಷಗಾನ ಕ್ಷೇತ್ರದಲ್ಲಿ ಸಾಧನೆಗೈದ ಹಿರಿಯ ಕಲಾವಿದ ಮಲ್ಪೆ ವಾಸುದೇವ ಸಾಮಗ (71) ಅವರು ಶನಿವಾರ ಮುಂಜಾನೆ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಇವರಿಗೆ ಈಚೆಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಚಿಕಿತ್ಸೆ ಫಲಕಾರಿಯಾಗದೇ ಶನಿವಾರ ನಿಧನರಾಗಿದ್ದಾರೆ.
ಪ್ರಸಂಗ ಮುಗಿಸಿ ಹೊರಟ ಹೊಸ್ತೋಟ ಮಂಜುನಾಥ ಭಾಗವತರು
ಯಕ್ಷಗಾನದ ಅಪೂರ್ವ ಕಲಾವಿದರಾಗಿದ್ದ ಮಲ್ಪೆ ರಾಮದಾಸ ಸಾಮಗರ ಮಗನಾದ ವಾಸುದೇವ ಸಾಮಗ ಅವರು ಉಡುಪಿಯ ಕೋಟೇಶ್ವರ ನಿವಾಸಿಯಾಗಿದ್ದು, ಅಮೃತೇಶ್ವರಿ ಮೇಳದ ಮೂಲಕ ಯಕ್ಷಗಾನ ವೃತ್ತರಂಗ ಪ್ರವೇಶಿಸಿದ್ದರು. ಧರ್ಮಸ್ಥಳ, ಕದ್ರಿ, ಕರ್ನಾಟಕ ಮೇಳ, ಸಾಲಿಗ್ರಾಮ ಮೇಳದ ಪ್ರಮುಖ ವೇಷಧಾರಿಯಾಗಿ ಜನರ ಮೆಚ್ಚುಗೆ ಗಳಿಸಿದ್ದರು. ಸಂಘಟಕರಾಗಿ, ಯಕ್ಷಗಾನ ಕ್ಷೇತ್ರದಲ್ಲಿ ತಮ್ಮ ವಾಕ್ಪಟುತ್ವದಿಂದಲೇ ಜನಮನ್ನಣೆಗೆ ಪಾತ್ರರಾಗಿದ್ದರು.
ಯಕ್ಷಗಾನ ರಂಗದ ತಾಳಮದ್ದಳೆ ಕ್ಷೇತ್ರದಲ್ಲಿ ಛಾಪು ಮೂಡಿಸಿದ್ದ ಇವರು ಸಂಯಮ ಸಂಸ್ಥೆಯ ಮೂಲಕ ತಾಳಮದ್ದಳೆಗೆ ಹೊಸ ಆಯಾಮ ನೀಡಿದ್ದರು, ವಾಕ್ಚಾತುರ್ಯದಿಂದ ಯಕ್ಷಗನದಲ್ಲಿ ಸಾಮಗೆರ್ ಎಂದು ಪ್ರಸಿದ್ಧಿ ಪಡೆದಿದ್ದರು. ಕುಂದಾಪುರದ ಕೋಟೇಶ್ವರದಲ್ಲಿ ನೆಲೆಸಿದ್ದ ಇವರು ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಇಂದು ನಿಧನರಾಗಿದ್ದಾರೆ.