ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಶ್ವ ಪ್ರವಾಸೋದ್ಯಮ ದಿನ: ಮಲ್ಪೆ ಬೀಚ್ ನಲ್ಲಿ ಸ್ವಚ್ಛತಾ ಕಾರ್ಯಕ್ರಮ

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಸೆಪ್ಟೆಂಬರ್ 27: ಉಡುಪಿಯ ಪ್ರಸಿದ್ಧ ಪ್ರವಾಸಿ ತಾಣ ಮಲ್ಪೆ ಬೀಚ್ ನಲ್ಲಿ ಇಂದು ವಿಶ್ವ ಪ್ರವಾಸೋದ್ಯಮ ದಿನವನ್ನು ಆಚರಿಸಲಾಯಿತು. ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಉಡುಪಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಮಲ್ಪೆ ಅಭಿವೃದ್ಧಿ ಸಮಿತಿ, ನೆಹರು ಯುವ ಕೆಂದ್ರ ಮತ್ತು ಕರಾವಳಿ ಪ್ರವಾಸೋದ್ಯಮ ಸಂಘಟನೆ, ಮತ್ತು ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಇವರ ಸಹಯೋಗದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಪ್ರವಾಹದ ಬಳಿಕ ಉಡುಪಿಯಲ್ಲಿ ಭೂಕುಸಿತದ ಭೀತಿ: ಅಪಾರ್ಟ್ ಮೆಂಟ್ ತೆರವು ಮಾಡಲು ಸೂಚನೆಪ್ರವಾಹದ ಬಳಿಕ ಉಡುಪಿಯಲ್ಲಿ ಭೂಕುಸಿತದ ಭೀತಿ: ಅಪಾರ್ಟ್ ಮೆಂಟ್ ತೆರವು ಮಾಡಲು ಸೂಚನೆ

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು, "ಉಡುಪಿ ಜಿಲ್ಲೆ ಪ್ರವಾಸೊದ್ಯಮಕ್ಕೆ ಹೇಳಿ ಮಾಡಿಸಿದ ಜಿಲ್ಲೆ. ಆದರೆ ಇಲ್ಲಿನ ಪ್ರವಾಸೋದ್ಯಮದ ಅವಕಾಶಗಳನ್ನು ನಾವು ಪೂರ್ಣ ಪ್ರಮಾಣದಲ್ಲಿ ಬಳಕೆ ಮಾಡಿಲ್ಲ' ಎಂದರು.

Udupi: World Tourism Day Celebration In Malpe Beach

ಉಡುಪಿ ಜಿಲ್ಲೆಗೆ ಬರುವ ಪ್ರವಾಸಿಗರಿಗೆ ಪ್ರವಾಸಿ ಸ್ಥಳಗಳಲ್ಲಿ ಉತ್ತಮ ಅನುಭವವನ್ನು ನೀಡುವಂತಾಗಬೇಕು. ಕೆಟ್ಟ‌ ಅನುಭವಗಳು ಪ್ರವಾಸಿಗರಿಗೆ ಆಗದಂತೆ ನಾವು ನೋಡಿಕೊಳ್ಳಬೇಕಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.

Udupi: World Tourism Day Celebration In Malpe Beach

ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಟ್ಟಾರ್ ರತ್ನಾಕರ್ ಹೆಗ್ಡೆ ಮಾತನಾಡಿ, "ಕರಾವಳಿಯಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸಲು ಹಲವಾರು ಅವಕಾಶಗಳಿವೆ. ವಿಶ್ವದಲ್ಲಿ ಸಣ್ಣ ಸಣ್ಣ ದೇಶಗಳು ಕೂಡಾ ಪ್ರವಾಸೋದ್ಯಮವನ್ನು ತಮ್ಮ ಅದಾಯದ ಮೂಲವನ್ನಾಗಿ ಮಾಡಿ ಕೊಂಡಿವೆ. ನಮ್ಮಲ್ಲಿ ರಾಜಕಾರಣ ಮತ್ತು ರಾಜಕೀಯದ ನಡುವೆ ಪ್ರವಾಸೋದ್ಯಮ ಎಂಬುದು ಬಡವಾಗಿದೆ' ಎಂದರು.

Udupi: World Tourism Day Celebration In Malpe Beach

Recommended Video

Virat , Rohit ಮುಖಾಮುಖಿ, ಗೆಲುವು ಯಾರಿಗೆ ? | Oneindia Kannada

ವಿಶ್ವ ಪ್ರವಾಸೋದ್ಯಮ ದಿನ ಕಾರ್ಯಕ್ರಮದ ಭಾಗವಾಗಿ ಮಲ್ಪೆ ಬೀಚ್ ನಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.

English summary
World Tourism Day was celebrated today at Malpe Beach, a popular tourist destination of Udupi. Udupi District Collector G. Jagadeesh inaugurated the programe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X