ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಹಿಳಾ ದಿನದ ವಿಶೇಷ: ಸಮುದ್ರದಲ್ಲಿ ಕಯಾಕಿಂಗ್ ಸಾಹಸ ಮೆರೆದ ವಿದ್ಯಾರ್ಥಿನಿಯರು

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಮಾರ್ಚ್ 8: ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಉಡುಪಿಯ ಮಲ್ಪೆ ಕಡಲ ಕಿನಾರೆಯಲ್ಲಿ ಹೆಣ್ಣು ಮಕ್ಕಳಿಗಾಗಿ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಸಮುದ್ರದಲ್ಲಿ ಕಯಾಕಿಂಗ್ ಪಯಣವನ್ನು ದೋಣಿ ಮೂಲಕ ಮಲ್ಪೆಯಿಂದ ಸೈಂಟ್ ಮೇರಿಸ್ ದ್ವೀಪದ ತನಕ ವಿದ್ಯಾರ್ಥಿನಿಯರು ತಮ್ಮ ಸಾಹಸ ಮೆರೆದು ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

ಮಹಿಳಾ ದಿನದ ವಿಶೇಷ: ನೋವು ನುಂಗಿ ನಗುವ ಚೆಲ್ಲುವ ಆಕೆಗೊಂದು ನಮನ..ಮಹಿಳಾ ದಿನದ ವಿಶೇಷ: ನೋವು ನುಂಗಿ ನಗುವ ಚೆಲ್ಲುವ ಆಕೆಗೊಂದು ನಮನ..

ಉಡುಪಿ ಜಿಲ್ಲಾಡಳಿತ, ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ, ಡಾಕ್ಟರ್ ಜಿ.ಶಂಕರ್ ಸರಕಾರಿ ಪ್ರಥಮ ದರ್ಜೆ ಕಾಲೇಜು ಸಹಯೋಗದಲ್ಲಿ ಈ ಸಾಹಸ ದೋಣಿ ಪಯಣ, ಕಯಾಕಿಂಗ್ ಅನ್ನು ಏರ್ಪಡಿಸಲಾಗಿತ್ತು.

Womens Day Special: Students Are Kayaking Adventure At Malpe Sea

ವಿವಿಧ ಕಾಲೇಜಿನ ವಿದ್ಯಾರ್ಥಿನಿಯರು ಕಯಾಕಿಂಗ್ ಸಾಹಸದಲ್ಲಿ ಭಾಗಿಯಾಗಿ ಸಾಹಸದಲ್ಲಿ ತಾವು ಪುರುಷರಿಗೆ ಏನೂ ಕಡಿಮೆ ಇಲ್ಲ ಎಂಬುದನ್ನು ಸಾಬೀತುಪಡಿಸಿದರು. ವಿದ್ಯಾರ್ಥಿನಿಯರಿಗೆ ಮೊದಲೇ ಕಯಾಕಿಂಗ್ ತರಬೇತಿಯನ್ನು ನೀಡಲಾಗಿತ್ತು.

ಮಲ್ಪೆ ಸಮುದ್ರ ತೀರದಿಂದ ಸೈಂಟ್ ಮೇರೀಸ್ ದ್ವೀಪದ ತನಕ ವಿವಿಧ ದೋಣಿಗಳಲ್ಲಿ ವಿದ್ಯಾರ್ಥಿನಿಯರು ಕಯಾಕಿಂಗ್ ನಲ್ಲಿ ಭಾಗಿಯಾಗಿ ದಿನಕ್ಕೆ ವಿಶ್ವ ಮಹಿಳಾ ದಿನಕ್ಕೆ ವಿಶೇಷ ಮೆರಗು ತಂದರು. ಕಯಾಕಿಂಗ್ ಸಾಮಾನ್ಯವಾಗಿ ನದಿಗಳಲ್ಲಿ ನಡೆಯುತ್ತದೆ. ಸಮುದ್ರದಲ್ಲಿ ವಿರಳವಾದ ಈ ಸಾಹಸದಲ್ಲಿ ಭಾಗಿಯಾದ ಮಹಿಳೆಯರ ಸಾಹಸವು ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದೆ.

Womens Day Special: Students Are Kayaking Adventure At Malpe Sea

ಮುಖ್ಯವಾಗಿ ಸಮುದ್ರದ ಬೃಹತ್ ಅಲೆಗಳು ಮತ್ತದರ ಏರಿಳಿತದಲ್ಲಿ ಕಯಾಕಿಂಗ್ ಬಹಳ ಸವಾಲಿನ ಸಾಹಸ. ಆದರೂ ಹೆಣ್ಣು ಮಕ್ಕಳು ಲೈಫ್ ಜಾಕೆಟ್ ಹಾಕಿ ಸಮುದ್ರದಲ್ಲಿ ಸಾಹಸ ಮೆರೆದ ರೀತಿ ನೋಡುಗರ ಹುಬ್ಬೇರಿಸುವಂತೆ ಮಾಡಿತು.

English summary
As part of the International Women's Day, a special event was held for the girls at the Malpe Marina Beach in Udupi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X