ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆನ್ಲೈನ್ ಮದ್ಯ ಮಾರಾಟಕ್ಕೆ ವೈನ್ ಮರ್ಚಂಟ್ಸ್ ವಿರೋಧ

|
Google Oneindia Kannada News

ಉಡುಪಿ, ಜುಲೈ 30: ಆನ್ ಲೈನ್ ನಲ್ಲಿ ಮದ್ಯ ಮಾರಾಟ ಮಾಡುವ ಬಗ್ಗೆ ಅಬಕಾರಿ ಆಯುಕ್ತರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪ್ರಸ್ತಾವಿತ ವ್ಯವಸ್ಥೆ ವಿರುದ್ಧ ಕರ್ನಾಟಕ ಫೆಡರೇಶನ್ ಆಫ್ ವೈನ್ ಮರ್ಚಂಟ್ಸ್ ಅಸೋಸಿಯೇಷನ್ ಪ್ರತಿನಿಧಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Recommended Video

ಎಲ್ಲರ ಮನೆ ಸೇರಲಿ ಮಹಾಲಕ್ಷ್ಮಿ | Oneindia Kannada

ಆನ್ ಲೈನ್ ಮದ್ಯ ಪೂರೈಕೆಯನ್ನು ಸದ್ಯಕ್ಕೆ ಬೆಂಗಳೂರಿನಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲು ಅಬಕಾರಿ ಇಲಾಖೆ ಮುಂದಾಗಿದೆ. ನಂತರ ಸರ್ಕಾರಿ ಸ್ವಾಮ್ಯದ ಎಂಎಸ್ಐಎಲ್ ಮಳಿಗೆ ಮೂಲಕ ಜಿಲ್ಲಾ ಕೇಂದ್ರಗಳಲ್ಲಿ ಪೂರೈಕೆ ಬಗ್ಗೆ ಚರ್ಚೆ ನಡೆಸಲಾಗಿದೆ.

ಆದರೆ, ಕೊವಿಡ್ 19 ರ ಸಮಸ್ಯೆ ವ್ಯಾಪಕವಾಗಿರುವ ಈ ಸಂದರ್ಭದಲ್ಲಿ ಈ ಪ್ರಸ್ತಾವದ ಅಗತ್ಯ ಖಂಡಿತವಾಗಿಯೂ ಇರುವುದಿಲ್ಲ ಎಂದು ವೈನ್ ಮರ್ಚಂಟ್ಸ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಗೋವಿಂದರಾಜ್ ಹೆಗ್ಡೆ ಪ್ರತಿಕ್ರಿಯಿಸಿದ್ದಾರೆ.

ಮನೆ ಬಾಗಿಲಿಗೆ ಮದ್ಯ ಪೂರೈಕೆ, ಕರ್ನಾಟಕದ ಯೋಜನೆಮನೆ ಬಾಗಿಲಿಗೆ ಮದ್ಯ ಪೂರೈಕೆ, ಕರ್ನಾಟಕದ ಯೋಜನೆ

ಕೊವಿಡ್ 19 ರ ಸಮಸ್ಯೆಯಿಂದ ತೊಂದರೆಗೆ ಒಳಗಾಗಿರುವ ಮಧ್ಯಮ ವರ್ಗದ ಉದ್ದಿಮೆದಾರರು ತೀವ್ರ ಸಂಕಷ್ಟದಲ್ಲಿದ್ದಾರೆ. ಅವರ ಒಳಿತಿಗಾಗಿ ದೇಶದಲ್ಲಿಯೇ ಮೊನೊಪಾಲಿ ವ್ಯವಸ್ಥೆಯನ್ನು ನಿಲ್ಲಿಸಬೇಕಾಗಿರುವ ಈ ಸಂದರ್ಭದಲ್ಲಿ ಮದ್ಯ ಉದ್ಯಮದಲ್ಲಿ ಆನ್ ಲೈನ್ ಪದ್ಧತಿ ಬೇಡ. ಇಡೀ ದೇಶದಲ್ಲಿ ಎಲ್ಲಿಯೂ ಇಲ್ಲದ ವ್ಯವಸ್ಥೆ ಬಗ್ಗೆ ಕರ್ನಾಟಕದಲ್ಲಿ ಯಾಕೆ ತುರ್ತಾಗಿ ಜಾರಿಗೊಳಿಸಲು ಸರ್ಕಾರ ಉದ್ದೇಶಿಸಿದೆ ಎಂದು ಗೋವಿಂದರಾಜ್ ಹೆಗ್ಡೆ ಪ್ರಶ್ನಿಸಿದ್ದಾರೆ.

18 ರೀತಿಯ ಸನ್ನದುಗಳಿವೆ

18 ರೀತಿಯ ಸನ್ನದುಗಳಿವೆ

ಈ ದೇಶದಲ್ಲಿ ವಿವಿಧ ರಾಜ್ಯಗಳಲ್ಲಿ ಅಬಕಾರಿಗೆ ಸಂಬಂಧಿಸಿದ ವಿವಿಧ ರೀತಿಯ ಕಾನೂನು/ವ್ಯವಸ್ಥೆಗಳು ಇರುತ್ತದೆ. ಕರ್ನಾಟಕದಲ್ಲಿ 18 ರೀತಿಯ (category)ಸನ್ನದುಗಳಿವೆ. ಆನ್ ಲೈನ್ ಪ್ರಾರಂಭ ಮಾಡಿದರೆ ಸಿಎಲ್ 9, ಸಿಎಲ್ 7, ಸಿಎಲ್ 4 ಇತ್ಯಾದಿ ಆಹಾರದೊಂದಿಗೆ ಮದ್ಯ ಸರಬರಾಜು ಮಾಡುವ ಇತರ ಸನ್ನದುದಾರರ ಪಾಡು ಏನು? ಸರ್ಕಾರ ಎಲ್ಲಾ ವರ್ಗದವರ ಹಿತ ಕಾಯುವ ಅವಶ್ಯಕತೆ ಇಲ್ಲವೇ? ಒಂದು APPನಲ್ಲಿ ಮದ್ಯ, ಒಂದು Appನಲ್ಲಿ ಫುಡ್ ಖರೀದಿಸಿದರೆ ಉಳಿದ ವರ್ಗದವರು ಏನು ಮಾಡಬೇಕು, ಇದು illegal(ನಕಲಿ)ನವರಿಗೆ ಒಳ್ಳೆಯ ಅವಕಾಶವಲ್ಲವೇ? ಕರ್ನಾಟಕದಲ್ಲಿ ಅತೀ ಹೆಚ್ಚು ಸನ್ನದು ಶುಲ್ಕ ನಗರದ ಸಿಎಲ್ 7 ನವರು 862500 ರು ಪಾವತಿಸುತ್ತಾರೆ.

ವೈನ್ ಮರ್ಚಂಟ್ ಎತ್ತಿರುವ ಪ್ರಶ್ನೆಗಳು, ಅಂಶಗಳು

ವೈನ್ ಮರ್ಚಂಟ್ ಎತ್ತಿರುವ ಪ್ರಶ್ನೆಗಳು, ಅಂಶಗಳು

* ಸನ್ನದುದಾರರಿಗೆ ಅನ್ವಯಿಸುವ ಅಬಕಾರಿ ಕಾಯ್ದೆಗಳನ್ನು ಅಳವಡಿಸಲು ಸಾಧ್ಯವಿಲ್ಲ.
* ಇಡೀ ದೇಶದಲ್ಲಿ ಎಲ್ಲಿಯೂ ಇಲ್ಲದ ವ್ಯವಸ್ಥೆ ಬಗ್ಗೆ ಕರ್ನಾಟಕದಲ್ಲಿ ಯಾಕೆ ತುರ್ತಾಗಿ ಜಾರಿಗೊಳಿಸಲು ಸರ್ಕಾರ ಉದ್ದೇಶಿಸಿದೆ?
* ಅಬಕಾರಿ ಕಾಯ್ದೆಯಲ್ಲಿ ಇದಕ್ಕೆ ಅವಕಾಶ ಮುಖ್ಯವಾಗಿ ಇಲ್ಲ.
* ಯಾವ ವಯಸ್ಸಿನ ಗ್ರಾಹಕ ಖರೀದಿಸುತ್ತಾನೆ ಎಂದು ಹೇಳಲು ಆಗುವುದಿಲ್ಲ. 18 ವರ್ಷ ಆಗದವರು ಖರೀದಿಸಬಹುದು.

ಮದ್ಯ ಜೀವನಾವಶ್ಯಕ ವಸ್ತುವಲ್ಲ

ಮದ್ಯ ಜೀವನಾವಶ್ಯಕ ವಸ್ತುವಲ್ಲ

* ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ನಡೆಯಬಹುದು.
* ಮದ್ಯ ಜೀವನಾವಶ್ಯಕ ವಸ್ತು ಅಲ್ಲ.
* ಖರೀದಿಯ ಮಿತಿಯ ಮೇಲೆ ಹತೋಟಿ ಇರಲ್ಲ.
* ಮದ್ಯದ ದರಗಳಲ್ಲಿ ವ್ಯತ್ಯಾಸ ಖಂಡಿತ ಬರುತ್ತದೆ. ಡೆಲಿವರಿ ಬಾಯ್ಸ್ ಹೆಚ್ಚು ದರ ವಿಧಿಸುತ್ತಾರೆ. ಒಂದು ವೇಳೆ ಎಂ. ಆರ್ ಪಿ ದರದಲ್ಲಿ ನೀಡಿದರೆ ಅವರಿಗೆ ಏನು ಲಾಭ?

ಅಭಿಪ್ರಾಯಗಳನ್ನು ಸಂಗ್ರಹಿಸಿ

ಅಭಿಪ್ರಾಯಗಳನ್ನು ಸಂಗ್ರಹಿಸಿ

ಈ ಸಂದರ್ಭದಲ್ಲಿ ಮದ್ಯಪಾನ ಸಂಯಮ ಮಂಡಳಿಯ ಅಭಿಪ್ರಾಯವನ್ನು ಪಡೆದುಕೊಳ್ಳಬೇಕು. ರಾಜ್ಯ ಮಹಿಳಾ ಒಕ್ಕೂಟಗಳ ಅಭಿಪ್ರಾಯವನ್ನು ಪಡೆದುಕೊಳ್ಳಬೇಕು.

ಆನ್ ಲೈನ್ ಪದ್ಧತಿಯಲ್ಲಿ ಗ್ರಾಹಕರಿಗೆ ಮದ್ಯ ಸರಬರಾಜು ಮಾಡಲು ಸರ್ಕಾರ ಉದ್ದೇಶಿಸಿರುವ ವ್ಯವಸ್ಥೆಯನ್ನು ರಾಜ್ಯ ಮದ್ಯ ಮಾರಾಟಗಾರರ ಒಕ್ಕೂಟ ವಿರೋಧಿಸುತ್ತದೆ ಮತ್ತು ಸರ್ಕಾರ ಅದನ್ನು ಜಾರಿಗೆ ತರಬಾರದಾಗಿ ವಿನಂತಿಸುತ್ತದೆ ಎಂದು ಪ್ರಧಾನ ಕಾರ್ಯದರ್ಶಿ ಬಿ ಗೋವಿಂದರಾಜ್ ಹೆಗ್ಡೆ ಅವರು ಪ್ರಕಟಣೆಯಲ್ಲಿ ಹೇಳಿದ್ದಾರೆ.

English summary
Federation of Wine Merchants Association has opposed Online liquor sale proposal by Excise department said General secretary Govindraj Hegde.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X