ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರಾವಳಿಯಲ್ಲಿ ಶುರುವಾಗಿದೆ ಯಂಕ್ಲೆಗ್ ಮೀನ್ ಬೋಡು ಅಭಿಯಾನ

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಏಪ್ರಿಲ್ 09: ಕರಾವಳಿಯ ಜನ ಮೀನು ಪ್ರಿಯರು, ಬಹುಶಃ ಕಡಲು ಹತ್ತಿರ ಇದೆ ಎಂಬ ಕಾರಣವೂ ಇದರ ಹಿಂದೆ ಇರಬಹುದು. ಆದರೆ ಸದ್ಯ ಮೀನು ಪ್ರಿಯರಿಗೆ ಟೈಮ್ ಚೆನ್ನಾಗಿಲ್ಲ. ಈ ಬಾರಿ ಮತ್ಸ್ಯಕ್ಷಾಮದ ಬೆನ್ನಿಗೇ ಲಾಕ್ ಡೌನ್ ಬಂದಿದೆ. ಹೀಗಾಗಿ ಮೀನು ಪ್ರಿಯರಿಗೆ ಭಾರೀ ನಿರಾಸೆಯಾಗಿದೆ.

ಈ ಮಧ್ಯೆ ಸೂಕ್ತ ಸುರಕ್ಷಾ ಕ್ರಮಗಳನ್ನು ಅನುಸರಿಸಿ ಮೀನು ಮಾರಾಟ ಮತ್ತು ಖರೀದಿಗೆ ಅವಕಾಶ ನೀಡಬೇಕು ಎಂಬ ಅಭಿಯಾನ ಉಡುಪಿಯಲ್ಲಿ ಪ್ರಾರಂಭವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಯಂಕ್ಲೆಗ್ ಮೀನ್ ಬೋಡು ( ನಮಗೆ ಮೀನು ಬೇಕು) ಅಭಿಯಾನದ ಮೂಲಕ ಡಿಸಿ ಮೇಲೆ ಒತ್ತಡ ಹೇರುವ ಪ್ರಯತ್ನ ಮೀನು ಪ್ರಿಯರಿಂದ ನಡೆದಿದೆ.

ಹಾಗೆ ನೋಡಿದರೆ ಮೀನುಗಾರಿಕೆಗೆ ಈಗ ನಿಷೇಧ ಇಲ್ಲ. ಐದು ಜನ ಸೇರಿ ಮೀನು ಹಿಡಿಯಬಹುದು ಮತ್ತು ಜನಸಂದಣಿ ಆಗದಂತೆ ಎಚ್ಚರ ವಹಿಸಿ ಮಾರಾಟ ಮಾಡಬಹುದು ಎಂದು ಜಿಲ್ಲಾಧಿಕಾರಿ ಈ ಮೊದಲೇ ಸ್ಪಷ್ಟಪಡಿಸಿದ್ದಾರೆ. ಆದರೂ ಜನರಿಗೆ ಮೀನು ಸಿಗುತ್ತಿಲ್ಲ. ಒಂದೆಡೆ ತರಕಾರಿ ಬೆಲೆ ಗಗನಕ್ಕೇರಿದ್ದರೆ, ಕೋಳಿ ತಿನ್ನಲು ಕೆಲವರು ಹಿಂಜರಿಯುತ್ತಿದ್ದಾರೆ.

 We need Fish: Campaign Start in Coastal Area

ಇನ್ನು ಮಟನ್ ಬೆಲೆ ಮಧ್ಯಮ ವರ್ಗ ಮತ್ತು ಬಡವರಿಗೆ ಎಟುಕುತ್ತಿಲ್ಲ. ಹೀಗಾಗಿ ಮೀನು ಬೇಕು ಅಭಿಯಾನದ ಮೂಲಕ ಡಿಸಿ ಮೇಲೆ ಒತ್ತಡ ಹೇರುವ ಪ್ರಯತ್ನ ನಡೆದಿದೆ. ಗಮನಾರ್ಹ ಸಂಗತಿ ಅಂದರೆ, ಮಲ್ಪೆಯಲ್ಲಿ ಎಂದಿನಂತೆ ಮೀನುಗಾರಿಕೆಗೆ ಅವಕಾಶ ಕೊಟ್ಟಿದ್ದೇ ಆದರೆ ನೂರಾರು ಜನ‌ ಬಂದರಿಗೆ ದೌಡಾಯಿಸುತ್ತಾರೆ.

 We need Fish: Campaign Start in Coastal Area

ಆಗ ಸಾಮಾಜಿಕ ಅಂತರಕ್ಕೆ ಸಮಸ್ಯೆ ಉಂಟಾಗಲಿದೆ ಎಂಬ ಕಾರಣಕ್ಕೆ ಐದೇ ಜನರಿಗೆ ಅವಕಾಶ ಕಲ್ಪಿಸಲಾಗಿದೆ. ಇದರಿಂದಾಗಿ ಜನರಿಗೆ ಮೀನು‌ ಪೂರೈಕೆ ಆಗುತ್ತಿಲ್ಲ, ಜೊತೆಗೆ ಬೋಟ್ ಮಾಲೀಕರಿಗೂ ತಂದಿರುವ ಮೀನು‌ ಮಾರಾಟ ಮಾಡಲು ಕಷ್ಟ ಆಗುತ್ತಿದೆ. ಒಟ್ಟಿನಲ್ಲಿ ಮೀನು ಪ್ರಿಯರಿಗೆ ಕಷ್ಟವೋ ಕಷ್ಟ.

English summary
Fish lovers have tried to pressure DC on the social network Yankleg Mean Bodu (We Need Fish).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X