ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರಾವಳಿ ಮೀನುಗಾರರ ಬೇಡಿಕೆಗೆ ಸಚಿವರು ಏನಂದರು?

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಮಾರ್ಚ್ 31: "ಕರಾವಳಿಯ ಮೀನುಗಾರರು ಸಂಕಷ್ಟದಲ್ಲಿದ್ದಾರೆ. ಮೀನುಗಾರರು ಪ್ಯಾಕೇಜ್ ಘೋಷಣೆಗೆ ಬೇಡಿಕೆಯಿರಿಸಿದ್ದಾರೆ. ಈಗ ರೇಷನ್ ಸಹಿತ ಮೂಲ ವ್ಯವಸ್ಥೆಯನ್ನಷ್ಟೇ ಮಾಡಬಹುದು" ಎಂದು ಉತ್ತರಿಸಿದ್ದಾರೆ ಮೀನುಗಾರಿಕೆ ಮತ್ತು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ.

ಉಡುಪಿಯಲ್ಲಿ ಇಂದು ಮಾತನಾಡಿದ ಅವರು, "ವೈಯಕ್ತಿಕವಾಗಿ ತೆರಳಿ ಮೀನು ಹಿಡಿಯಬಹುದೇ ಎಂದು ಮೀನುಗಾರರು ಕೇಳುತ್ತಿದ್ದಾರೆ. ಸಾಂಪ್ರದಾಯಿಕ ಮೀನುಗಾರಿಕೆ ನಡೆಸಲು ಬೇಡಿಕೆ ಇದೆ. ಸಚಿವೆ ಶಶಿಕಲಾ ಜೊಲ್ಲೆ ಕೂಡ ಮೀನುಗಾರರಿಗೆ ನೆರವು ಕೇಳಿದ್ದಾರೆ. ಒಬ್ಬೊಬ್ಬರೇ ತೆರಳಿ‌ ಮೀನುಗಾರಿಕೆ ನಡೆಸಲು ಅವಕಾಶ ಕೋರಿದ್ದಾರೆ. ಇಲಾಖೆಯ ಮೂಲಕ ಮಾರುಕಟ್ಟೆ ಮಾಡಬೇಕು ಎಂದಿದ್ದಾರೆ. ಈ ಕುರಿತು ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ಮಾಡಲಾಗುವುದು. ಸದ್ಯಕ್ಕೆ ಯಾವುದೇ ತೀರ್ಮಾನ ಕೈಗೊಂಡಿಲ್ಲ" ಎಂದು ಹೇಳಿದರು.

ಕೊರೊನಾ ಎಮರ್ಜೆನ್ಸಿ: ನಾಳೆ 24 ಸಾವಿರ ವೈದ್ಯಕೀಯ ಸಿಬ್ಬಂದಿಗೆ ರಜೆ?ಕೊರೊನಾ ಎಮರ್ಜೆನ್ಸಿ: ನಾಳೆ 24 ಸಾವಿರ ವೈದ್ಯಕೀಯ ಸಿಬ್ಬಂದಿಗೆ ರಜೆ?

ಸರ್ಕಾರ ನೆರವು ನೀಡುತ್ತದೆ, ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಸಹಕರಿಸಿ ಎಂದು ಮನವಿ ಮಾಡಿದ ಅವರು, "ದ.ಕ ಜಿಲ್ಲೆಯಲ್ಲಿ‌ ಮೂರು ದಿನ‌ ಕಟ್ಟುನಿಟ್ಟಿನ ಕರ್ಫ್ಯೂ ಪಾಲಿಸಲಾಗಿದೆ. ದಿನಸಿ, ಹಾಲು ಖರೀದಿಗೆ ಅವಕಾಶ ನೀಡಲಾಗಿದೆ. ಒತ್ತಡ ಹೆಚ್ಚಾಗಿ ಜನರು ಹೊರ ಬಂದಿರುವುದು ನಿಜ. ಇದರಿಂದ ಸಮಸ್ಯೆಯಾಗಿದೆ. ಇನ್ನು ಮುಂದೆ ಶಾಂತಿಯುತ ವಹಿವಾಟಿಗೆ ಕ್ರಮ ಕೈಗೊಳ್ಳಲಾಗುವುದು" ಎಂದರು.

We Didnt Took Any Decision Regarding Fishing In Lockdown Time Said Kota Srinivasa Pujari

ರಾಜ್ಯದ ಎಲ್ಲಾ ಎ ದರ್ಜೆ ದೇವಸ್ಥಾನದ ಮೂಲಕ ಊಟೋಪಚಾರ ಮಾಡುವ ವಿಚಾರವಾಗಿ ಪ್ರತಿಕ್ರಿಯಿಸಿ, ಇದು ಕೇವಲ ಆದೇಶವಲ್ಲ, ಅಧಿಕಾರಿಗಳಿಗೆ ಸೂಚನೆಯನ್ನೂ ನೀಡಿದ್ದೇನೆ. ಅಂಬಲಪಾಡಿ, ಕೊಲ್ಲೂರು, ಮಂದಾರ್ತಿ, ಕಟೀಲು, ಕದ್ರಿ ದೇವಸ್ಥಾನದಿಂದ ಸಹಾಯ ನೀಡಲಾಗುತ್ತಿದೆ. ರಾಜ್ಯಾದ್ಯಂತ ಮುಜರಾಯಿ ದೇವಸ್ಥಾನಗಳು ಉಚಿತ ಊಟಕ್ಕೆ ವ್ಯವಸ್ಥೆ ಮಾಡಿಕೊಂಡಿವೆ" ಎಂದರು.

English summary
There is a request from fishermen to fishing in this lock time. But we have to discuss about this said minister kota srinivas pujari in udupi
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X