ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಭುವನ ಮೋಹಿನಿ' ಹಾಡಿಗೆ ಹೆಜ್ಜೆ ಹಾಕಿದ ಯುವತಿ ಈಗ ಸಖತ್ ಫೇಮಸ್!

|
Google Oneindia Kannada News

ಉಡುಪಿ, ಮೇ.20: ಬಡಗತಿಟ್ಟಿನ ಖ್ಯಾತ ಭಾಗವತ ಜನ್ಸಾಲೆ ರಾಘವೇಂದ್ರ ಆಚಾರ್ಯರ 'ಯಾರೆ ನೀನು ಭುವನ ಮೋಹಿನಿ' ಪದ್ಯ ಜನಜನಿತ . ಈ ಹಾಡಿಗೆ ಹೆಜ್ಜೆ ಹಾಕುವುದೆಂದರೆ ಯಕ್ಷ ಕಲಾವಿದರಿಗೆ ಅತೀವ ಸಂತಸ. ಇದೀಗ ಮದುವೆ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಯುವತಿಯೊಬ್ಬಳು ಈ ಹಾಡಿಗೆ ಹೆಜ್ಜೆ ಹಾಕಿದ ವಿಡಿಯೋ ವೈರಲ್ ಆಗಿದೆ.

ಕಲಾರಸಿಕರು ಈ ವಿಡಿಯೋ ನೋಡಿ ನಿಬ್ಬೆರಗಾಗಿದ್ದಾರೆ. ಯಕ್ಷಗಾನ ಬಲ್ಲವರಂತೂ ಮತ್ತೆ ಮತ್ತೆ ಈ ವಿಡಿಯೋ ನೋಡುತ್ತಿದ್ದಾರೆ. ಯಕ್ಷಗಾನದ ಪರಿಚಯ ಇಲ್ಲದವರು ಯಾರೀಕೆ? ಎಂದು ಮೂಗಿನ ಮೇಲೆ ಬೆರಳಿಟ್ಟಿದ್ದಾರೆ? ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಸಖತ್ ಸದ್ದು ಮಾಡುತ್ತಿದೆ.

ವಿವಾದಕ್ಕೆ ಕಾರಣವಾಯ್ತು ಉಡುಪಿಯ ಈ ಮದುವೆವಿವಾದಕ್ಕೆ ಕಾರಣವಾಯ್ತು ಉಡುಪಿಯ ಈ ಮದುವೆ

'ನೀನು ಭುವನ ಮೋಹಿನಿ' ಪದ್ಯಕ್ಕೆ ಯುವತಿ ಹೆಜ್ಜೆಹಾಕಿದ ಪರಿಗೆ ಅಬ್ಬಬ್ಬಾ ಅದೆಂಥಾ ಒನಪು, ಅದೆಂಥಾ ಹುರುಪು...ಎಂದು ವಿಡಿಯೋ ನೋಡಿದ ಕರಾವಳಿಗರು ಉದ್ಘರಿಸುತ್ತಿದ್ದಾರೆ. ನಿಜಕ್ಕೂ 'ಯಾರೇ ನೀನು ಭುವನ ಮೋಹಿನಿ' ಅಂಥ ಕೇಳ್ತಿದ್ದಾರೆ.

ಚಂಡೆ ಮದ್ದಳೆಯ ನಾದಕ್ಕೆ ಸ್ವಲ್ಪವೂ ವಂಚಿಸದೆ, ಲಯಬದ್ದ ಹೆಜ್ಜೆ ಹಾಕಿರುವ ಈ ವಿಡಿಯೋ ಸಖತ್ ವೈರಲ್ ಆಗಿದೆ. ಈ ಭಾಗದಲ್ಲಿ ಹತ್ತರಲ್ಲಿ ಒಬ್ಬರ ವಾಟ್ಸ್ ಅಪ್ ಸ್ಟೇಟಸ್ ನಲ್ಲಿ ಯುವತಿಯ ಯಕ್ಷಗಾನ ನ್ಯತ್ಯ ರಾರಾಜಿಸುತ್ತಿದೆ.

ನೋಡಲು ಎರಡು ಕಣ್ಣು ಸಾಲದು

ನೋಡಲು ಎರಡು ಕಣ್ಣು ಸಾಲದು

ಒಮ್ಮೆ ನೋಡಿದ್ರೆ ಮತ್ತೊಮ್ಮೆ ನೋಡಲೇಬೇಕು ಅನಿಸುವ ಈ ವಿಡಿಯೋ ತುಣುಕಿನಲ್ಲಿ ಕುಣಿದ ಭುವನ ಮೋಹಿನಿ ಹೆಬ್ರಿಯ ವಿಜಯ ಕುಮಾರ್ ಶೆಟ್ಟಿ ಹಾಗೂ ಜಯಂತಿ ಶೆಟ್ಟಿ ದಂಪತಿಯ ಪುತ್ರಿ ಚೈತ್ರಾ ಶೆಟ್ಟಿ(24). ಬಿಎಸ್ ಸಿ ನರ್ಸಿಂಗ್ ಪದವಿ ಪಡೆದು ಮಣಿಪಾಲದಲ್ಲಿ ಕರ್ತವ್ಯದಲ್ಲಿರುವ ಇವರು ಸದ್ಯ ಮಣಿಪಾಲದ ಮಾಹೆ ವಿವಿಯಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದಾರೆ. ಮೇ.15 ರಂದು ಉಡುಪಿಯ ಕಟಪಾಡಿಯ ಕುರ್ಕಾಲಿನ ನೂಜಿಯ ಸಂಬಂಧಿಕರೊಬ್ಬರ ಮನೆಯಲ್ಲಿ ನಡೆದ ಮೆಹೆಂದಿ ಕಾರ್ಯಕ್ರಮದಲ್ಲಿ ಚೈತ್ರಾ ಮನೆಯವರ ಒತ್ತಾಯಕ್ಕೆ ಹೆಜ್ಜೆ ಹಾಕಿದ್ದರು. ಇದನ್ನು ವಿಡಿಯೋ ಮಾಡಿರುವ ಯಕ್ಷಗಾನ ಪ್ರಿಯರು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ಅಭಿಮಾನಿಗಳಿಂದ ಪ್ರಶಂಸೆಯ ಸುರಿಮಳೆ

ಅಭಿಮಾನಿಗಳಿಂದ ಪ್ರಶಂಸೆಯ ಸುರಿಮಳೆ

ಕೆಲವೇ ಗಂಟೆಗಳಲ್ಲಿ ಈ ವಿಡಿಯೋ ಮಾಡಿದ ಮ್ಯಾಜಿಕ್ ಇದ್ಯಲ್ಲ, ಅದು ಈಕೆಯನ್ನು ಮನೆಮಾತಾಗಿಸಿದೆ. ಮೆಹೆಂದಿ ಕಾರ್ಯಕ್ರಮದಲ್ಲಿ ಕುಟುಂಬ ಸದಸ್ಯರ ಮುಂದೆ ಈಕೆ ಈ ಹೆಜ್ಜೆಹಾಕಿದಾಗ ಮನೆಯವರೂ ಚಪ್ಪಾಳೆಯ ಸುರಿಮಳೆಗೈದಿದ್ದಾರೆ. ಯಕ್ಷಗಾನದಲ್ಲಿ 'ಯಾರೇ ನೀನು ಭುವನ ಮೋಹಿನಿ' ಅತ್ಯಂತ ಜನಪ್ರಿಯ ಹಾಡು. 'ಪಾಂಚಜನ್ಯ' ಯಕ್ಷಗಾನ ಪ್ರಸಂಗದಲ್ಲಿ ಬರುವ ಈ ಹಾಡು ಬಡಗುತಿಟ್ಟಿನ 'ಸ್ಟಾರ್ ಭಾಗವತ' ಜನ್ಸಾಲೆ ರಾಘವೇಂದ್ರ ಆಚಾರ್ ಅವರ ಧ್ವನಿಯ ಮೂಲಕ ಪ್ರಸಿದ್ದಿಗೆ ಬಂತು. ಈ ಪ್ರಸಂಗದಲ್ಲಿ ಬರುವ ಕೃಷ್ಣ ಮತ್ತು ಅಸಿಕೆಯ ನಡುವಿನ ಪ್ರೇಮ ಸಲ್ಲಾಪದ ಹಾಡು ಅಭಿಮಾನಿಗಳ ಮೆಚ್ಚಿನ ದೃಶ್ಯವಾಗಿದೆ. ವೃತ್ತಿಪರ ಕಲಾವಿದರಿಗೆ ಸರಿಸಾಟಿಯಾಗುವಂತೆ ಚೈತ್ರಾ ಹೆಜ್ಜೆ ಹಾಕಿದ್ದು ಕಂಡು ಅಭಿಮಾನಿಗಳು ಪ್ರಶಂಸೆಯ ಸುರಿಮಳೆಗೈಯುತ್ತಿದ್ದಾರೆ.

 ಮಂಗಳೂರಿನಲ್ಲಿ ಮೋದಿ ವಿಜಯೋತ್ಸವಕ್ಕಾಗಿ ಯಕ್ಷಗಾನ ಪ್ರದರ್ಶನ ಆಯೋಜನೆ! ಮಂಗಳೂರಿನಲ್ಲಿ ಮೋದಿ ವಿಜಯೋತ್ಸವಕ್ಕಾಗಿ ಯಕ್ಷಗಾನ ಪ್ರದರ್ಶನ ಆಯೋಜನೆ!

ಮಹಿಳಾ ಕಲಾವಿದೆಯರು ಮಿಂಚಿದ್ದಾರೆ

ಮಹಿಳಾ ಕಲಾವಿದೆಯರು ಮಿಂಚಿದ್ದಾರೆ

ಯುವ ಜನಾಂಗಕ್ಕೂ ಈ ಜನಪದ ಕಲೆ ಇಷ್ಟವಾಗ್ತಿದೆ ಅನ್ನೋದು ವಿಶೇಷ. ಆಯಾ ಕಾಲಕ್ಕೆ ತಕ್ಕಂತೆ ಬದಲಾವಣೆಗಳನ್ನು ಮಾಡಿಕೊಂಡ ಅಪರೂಪದ ಕಲೆ ಯಕ್ಷಗಾನ. ಕೇವಲ ಗಂಡು ಕಲೆಯಾಗಿದ್ದ ಈ ಕ್ಷೇತ್ರದಲ್ಲಿ ಮಹಿಳಾ ಕಲಾವಿದೆಯರು ಮಿಂಚಿದ್ದಾರೆ. ಸಾಮಾಜಿಕ ಜಾಲತಾಣಗಳ ಹೊಸ ಹೊಸ ಆಪ್ ಗಳ ಅಬ್ಬರದಲ್ಲಿ ಯಕ್ಷಗಾನ ನೃತ್ಯಗಳು ಕೂಡ ಯುವಜನತೆಯ ಆಕರ್ಷಣೆ ಕೇಂದ್ರ ಬಿಂದುವಾಗಿದೆ ಅಂದರೆ ಸುಳ್ಳಾಗದು.

ಮಧುಮಗಳ ನೃತ್ಯ ವೈರಲ್

ಮಧುಮಗಳ ನೃತ್ಯ ವೈರಲ್

ಈಗೀಗ ಸಾಮಾಜಿಕ ಜಾಲತಾಣಗಳಲ್ಲಿ ಪದೇ ಪದೇ ಯಕ್ಷಗಾನ ಸದ್ದು ಮಾಡ್ತಿದೆ. ಮದುವೆ ಮನೆಯಲ್ಲಿ ಮದುಮಗಳೊಬ್ಬಳು ಹೆಜ್ಜೆ ಹಾಕಿದ್ದು, ಇತ್ತೀಚೆಗೆ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ವೇಷತೊಟ್ಟ ಕಲಾವಿದರ ನಡುವೆ ಜರಿಸೀರೆಯಲ್ಲಿ ಲಯಬದ್ದ ಹೆಜ್ಜೆ ಹಾಕಿದ್ದ ಈ ವಿಡಿಯೋ ಕೂಡ ವೈರಲ್ ಆಗಿತ್ತು. ಸದ್ಯ ಯುವಜನತೆ ಯಕ್ಷಗಾನವನ್ನು ಮಾಡರ್ನ್ ಟ್ರೆಂಡ್ ಗೆ ತಕ್ಕಂತೆ ಬಳಕೆ ಮಾಡುತ್ತಿದ್ದಾರೆ.ಈ‌ ಮೂಲಕ ಯಕ್ಷಗಾನ ಜನಪ್ರಿಯತೆಯ ಹೊಸ ಆಯಾಮ ಕಂಡುಕೊಳ್ಳುತ್ತಿದೆ.

 ವಿವಾದದ ಸುಳಿಯಲ್ಲಿ ಟೀಮ್ ಮೋದಿಯ ಯಕ್ಷಗಾನ ಬಯಲಾಟ ವಿವಾದದ ಸುಳಿಯಲ್ಲಿ ಟೀಮ್ ಮೋದಿಯ ಯಕ್ಷಗಾನ ಬಯಲಾಟ

English summary
The video of Chaithra Shetty gone viral in social media.Chaithra shetty performed yaksha prasanga in a marriage mehendi program.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X