ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಸ್ಟ್ರೇಲಿಯಾದಲ್ಲಿನ ಕೃಷ್ಣ ಬೃಂದಾವನ ಸಂಸ್ಥೆಗೆ 4.4 ಲಕ್ಷ ಡಾಲರ್ ನೀಡಿದ ವಿಕ್ಟೋರಿಯಾ ಸರ್ಕಾರ

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಸೆಪ್ಟೆಂಬರ್ 17: ಆಸ್ಟ್ರೇಲಿಯಾದಲ್ಲಿರುವ ಉಡುಪಿ ಪುತ್ತಿಗೆ ಮಠದ ಕೃಷ್ಣ ಬೃಂದಾವನ ಸಂಸ್ಥೆಗೆ ವಿಕ್ಟೋರಿಯಾ ರಾಜ್ಯ ಸರಕಾರವು 4.4 ಲಕ್ಷ ಡಾಲರ್ ಅನುದಾನ ಬಿಡುಗಡೆ ಮಾಡಿದೆ.

ಆಸ್ಟ್ರೇಲಿಯಾದಲ್ಲಿರುವ ಉಡುಪಿ ಪುತ್ತಿಗೆ ಮಠವು ಸಮಾಜಕ್ಕೆ ಸಲ್ಲಿಸಿದ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಈ 4.4 ಲಕ್ಷ ಡಾಲರ್ ಅನುದಾನವನ್ನು ಬಿಡುಗಡೆಗೊಳಿಸಲಾಗಿದೆ.

ಧೋ...ಎನ್ನುವ ಮಳೆಯಲ್ಲೇ ವಿಟ್ಲಪಿಂಡಿ ಉತ್ಸವ ಸಂಪನ್ನ: ಮಠದ ಸಿಬ್ಬಂದಿಗೆ ಮಾತ್ರ ಅವಕಾಶಧೋ...ಎನ್ನುವ ಮಳೆಯಲ್ಲೇ ವಿಟ್ಲಪಿಂಡಿ ಉತ್ಸವ ಸಂಪನ್ನ: ಮಠದ ಸಿಬ್ಬಂದಿಗೆ ಮಾತ್ರ ಅವಕಾಶ

ಭಾರತೀಯ ಕರೆನ್ಸಿಯಲ್ಲಿ ಈ ಅನುದಾನದ ಮೊತ್ತ ಎರಡು ಕೋಟಿ ರುಪಾಯಿ ಆಗಿದೆ‌. ಕೊರೊನಾ ಹಾವಳಿಯ ಸಂದರ್ಭದಲ್ಲಿ ಪುತ್ತಿಗೆ ಮಠವು ಕೈಗೊಂಡ ಸೇವಾ ಕಾರ್ಯಗಳನ್ನು ಪರಿಗಣಿಸಿ ಈ ಅನುದಾನ ನೀಡಲಾಗಿದೆ ಎಂದು ತಿಳಿದುಬಂದಿದೆ.

The Victoria Government Has Given Rs.2 Crore To Krishna Brindavana Institute In Australia

ಆಸ್ಟ್ರೇಲಿಯಾದಲ್ಲಿ ಕಾಡ್ಗಿಚ್ಚು ಆದಾಗಲೂ ಕೃಷ್ಣ ಮಠ ಸ್ಪಂದಿಸಿತ್ತು. ಇದನ್ನು ಗಮನಿಸಿದ ವಿಕ್ಟೋರಿಯಾ ರಾಜ್ಯ ಸರಕಾರ, ಪುತ್ತಿಗೆ ಮಠಕ್ಕೆ ಸೇರಿದ ಸಂಸ್ಥೆಯ ಕಟ್ಟಡ ನಿರ್ಮಾಣ ಮತ್ತಿತರ ಮೂಲಭೂತ ಸೌಕರ್ಯವನ್ನು ಅಭಿವೃದ್ಧಿಪಡಿಸಲು ಅನುದಾನವನ್ನು ನೀಡಿದೆ.

The Victoria Government Has Given Rs.2 Crore To Krishna Brindavana Institute In Australia

Recommended Video

Worlds Longest Tunnel - Atal Tunnel ಇದೆ ನೋಡಿ ಜಗತ್ತಿನ ಅತಿ ಉದ್ದದ ಸುರಂಗ ಮಾರ್ಗ | Oneindia Kannada

ಒಂದು ಸಣ್ಣ ಸಮುದಾಯ ಸಲ್ಲಿಸಿದ ಸೇವೆಯನ್ನು ಗಮನಿಸಿ ಇಷ್ಟು ದೊಡ್ಡ ಮೊತ್ತವನ್ನು ಸರ್ಕಾರ ನೀಡಿರುವುದು ಇದೇ ಮೊದಲು. ಗೂಗಲ್ ನಲ್ಲಿ ಸರ್ಕಾರದ ಅಧಿಕೃತ ಪ್ರತಿನಿಧಿಗಳು ಈ ವಿಚಾರವನ್ನು ಪ್ರಕಟಿಸಿದ್ದಾರೆ ಎಂದು ಉಡುಪಿ ಮಠದ ಮೂಲಗಳು ತಿಳಿಸಿವೆ.

English summary
The Victoria State Government has released a grant of Rs.2 Crore to the Krishna Brindavana, a Udupi Puttige in Australia.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X