ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಿರಿಯ ಪತ್ರಕರ್ತ ಎಂ.ವಿ.ಕಾಮತ್ ವಿಧಿವಶ

|
Google Oneindia Kannada News

ಉಡುಪಿ, ಅ.9 : ಹಿರಿಯ ಪತ್ರಕರ್ತ ಪ್ರಸಾರ ಭಾರತಿ ಮಾಜಿ ಅಧ್ಯಕ್ಷ ಎಂ.ವಿ ಕಾಮತ್ ಅವರು ಮಣಿಪಾಲ್ ಆಸ್ಪತ್ರೆಯಲ್ಲಿ ಗುರುವಾರ ಬೆಳಗ್ಗೆ ನಿಧನರಾಗಿದ್ದಾರೆ. ಕೆಲವು ದಿನಗಳಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.

94 ವರ್ಷದ ಎಂ.ವಿ.ಕಾಮತ್ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು. ಅವರನ್ನು ಕೆಲವು ದಿನಗಳ ಹಿಂದೆ ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಗುರುವಾರ ಮುಂಜಾನೆ 6.30ರ ಸುಮಾರಿಗೆ ಅವರು ನಿಧನರಾಗಿದ್ದಾರೆ ಎಂದು ಕುಟುಂಬ ವರ್ಗದವರು ಹೇಳಿದ್ದಾರೆ.

M.V. Kamath

ಪದ್ಮಭೂಷಣ ಪ್ರಶಸ್ತಿ ವಿಜೇತರಾಗಿದ್ದ ಎಂ.ವಿ.ಕಾಮತ್ 40ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. 'Narendra Modi - The Architect of a Modern State' ಅವರ ಇತ್ತೀಚಿನ ಪುಸ್ತಕ. 2004ರಲ್ಲಿ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

1967-69ರ ವರೆಗೆ 'The Sunday Times (India)' ಸಂಪಾದಕರಾಗಿ, 1969-78ರವರೆಗೆ ಟೈಮ್ಸ್‌ ಆಫ್ ಇಂಡಿಯಾದ ವಾಷಿಂಗ್ಟನ್ ಪ್ರತಿನಿಧಿಯಾಗಿ ಎಂ.ವಿ.ಕಾಮತ್ ಕಾರ್ಯನಿರ್ವಹಿಸಿದ್ದರು.

1921 ರಂದು ಉಡುಪಿಯಲ್ಲಿ ಜನಿಸಿದ ಅವರು, ಭೌತಶಾಸ್ತ್ರ ಹಾಗೂ ರಾಸಯನಶಾಸ್ತ್ರ ವಿಷಯದಲ್ಲಿ ಬಿಎಸ್ಸಿ ಪದವಿಯನ್ನು ಪೂರ್ಣಗೊಳಿಸಿದರು. ಪ್ರಾರಂಭದ ಐದು ವರ್ಷಗಳ ಕಾಲ ರಾಸಯನಶಾಸ್ತ್ರ ಕ್ಷೇತ್ರದಲ್ಲಿ ತಮ್ಮ ಸೇವೆಯನ್ನು ಸಲ್ಲಿಸಿದ ಅವರು ನಂತರ ಮಾಧ್ಯಮ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ್ದರು. ಉದಯವಾಣಿ ಪತ್ರಿಕೆಯಲ್ಲಿ 'ಪ್ರಚಲಿತ' ಎಂಬ ಅಂಕಣ ಬರೆಯುತ್ತಿದ್ದರು.

English summary
Veteran journalist and former chairman of Prasar Bharati MV Kamath (94) died on Thursday morning in Manipal Karnataka. He was hospitalized for the past few days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X