ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶೀರೂರು ಮಠದ ಉತ್ತರಾಧಿಕಾರಿಯಾಗಿ ಬರಲು ವಟುಗಳ ನಿರಾಸಕ್ತಿ ?

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಜುಲೈ.22: ಶೀರೂರು ಮಠದ ಆಡಳಿತಕ್ಕೆ ಐವರು ಸದಸ್ಯರ ಸಮಿತಿ ರಚಿಸಲಾಗುತ್ತದೆ. ಮಠದ ಆಡಳಿತ ವ್ಯವಸ್ಥಿತವಾಗಿ ನಡೆಸುವ ಸಲುವಾಗಿ ಸೋದೆ ವಿಶ್ವವಲ್ಲಭ ಶ್ರೀಗಳ ನೇತೃತ್ವದಲ್ಲಿ ಸಮಿತಿ ರಚನೆಯಾಗಲಿದೆ. ಇದರಲ್ಲಿ ಶೀರೂರು ಮಠದ ವಿದ್ವಾಂಸರನ್ನೂ ಸೇರಿಸಲಾಗುತ್ತದೆ.

ಈಗ ಆಷಾಢ ಮಾಸವಾದ ಕಾರಣ ಶಿಷ್ಯ ಸ್ವೀಕಾರಕ್ಕೆ ತೊಡಕಾಗಿದೆ. ಆಷಾಢದ ಬಳಿಕವೇ ಶಿಷ್ಯ ಸ್ವೀಕಾರ ಪ್ರಕ್ರಿಯೆ ಆರಂಭಿಸಲಾಗುವುದು ಅಂತ ಶೀರೂರು ಮಠದ ದ್ವಂದ್ವ ಮಠವಾದ ಸೋದೆ ಮಠ ಸ್ಪಷ್ಟಪಡಿಸಿದೆ. ಈಗಾಗಲೇ ವಟುವಿನ ಜಾತಕ ಪರಿಶೀಲನೆ ನಡೆಯುತ್ತಿದ್ದು, ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಉತ್ತರಾಧಿಕಾರಿ ನೇಮಕ ನಡೆಯಲಿದೆ.

ತಮ್ಮ ಜೀವಿತಾವಧಿಯಲ್ಲೇ ಉತ್ತರಾಧಿಕಾರಿ ಆಯ್ಕೆ ಮಾಡಿದ್ದ ಶೀರೂರು ಶ್ರೀತಮ್ಮ ಜೀವಿತಾವಧಿಯಲ್ಲೇ ಉತ್ತರಾಧಿಕಾರಿ ಆಯ್ಕೆ ಮಾಡಿದ್ದ ಶೀರೂರು ಶ್ರೀ

ಸೋಮವಾರ ಈ ಸಮಿತಿ ರಚನೆ ಸಾಧ್ಯತೆಯಿದ್ದು , ಸದ್ಯ ಶೀರೂರುಮಠದ ನಿರ್ವಹಣೆಯ ಜವಾಬ್ದಾರಿಯನ್ನು ಸೋದೆ ವಿಶ್ವವಲ್ಲಭ ಶ್ರೀಗಳು ವಹಿಸಿಕೊಂಡಿದ್ದಾರೆ. ಗಮನಾರ್ಹ ಸಂಗತಿ ಅಂದ್ರೆ ಉತ್ತರಾಧಿಕಾರಿಯಾಗಿ ಬರಲು ಹಲವರು ನಿರಾಸಕ್ತಿ ತೋರುತ್ತಿದ್ದಾರಂತೆ.

Vatus seem to be disinterested in coming as the inheritor to the Shiruru mutt

ಶೀರೂರು ಶ್ರೀ ಸಾವು: ಕೃಷ್ಣ.. ಕೃಷ್ಣಾ.. ಮತ್ತೊಂದು ಆಡಿಯೋ ವೈರಲ್ಶೀರೂರು ಶ್ರೀ ಸಾವು: ಕೃಷ್ಣ.. ಕೃಷ್ಣಾ.. ಮತ್ತೊಂದು ಆಡಿಯೋ ವೈರಲ್

ಇದಕ್ಕೆ ಕಾರಣ ಶೀರೂರು ಮಠದ ಆರ್ಥಿಕ ಸ್ಥಿತಿ. ಆರ್ಥಿಕ ನಷ್ಟದಲ್ಲಿರುವ ಮಠವನ್ನು ಮುನ್ನಡೆಸುವುದು ಅಷ್ಟು ಸುಲಭವಂತೂ ಅಲ್ಲ. ಒಟ್ಟಾರೆ ಚಾತುರ್ಮಾಸ್ಯದ ನಂತರ ಉತ್ತರಾಧಿಕಾರಿ ನೇಮಕ ನಡೆಯಲಿದ್ದು, ಯಾರಾಗಲಿದ್ದಾರೆ ಉತ್ತರಾಧಿಕಾರಿ ಎಂಬ ಕುತೂಹಲ ಹೆಚ್ಚುತ್ತಿದೆ.

English summary
Vatus seem to be disinterested in coming as the inheritor to the Shiroor mutt. This is because of the economic status of the Shiroor mutt.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X