ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೇಂದ್ರ ಬಜೆಟ್ ಸಾಮಾನ್ಯ ಜನರಲ್ಲಿ ವಿಶ್ವಾಸ ಮೂಡಿಸಿದೆ: ಕೋಟ ಶ್ರೀನಿವಾಸ

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಜನವರಿ 01: ಈ ಬಾರಿಯ ಕೇಂದ್ರ ಬಜೆಟ್ ದೇಶದ ಸಾಮಾನ್ಯ ಜನರಲ್ಲಿ ವಿಶ್ವಾಸ ಮೂಡಿಸಿದೆ, ಗ್ರಾಮೀಣಾಭಿವೃದ್ಧಿಗೆ ಒಂದು ಕಾಲು ಲಕ್ಷ ಕೋಟಿ ರೂ, ನೀಡಿರುವುದು ಐತಿಹಾಸಿಕ ದಾಖಲೆ ಎಂದು ಮೀನುಗಾರಿಕೆ, ಬಂದರು ಮತ್ತು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಕೇಂದ್ರ ಬಜೆಟ್ ಕುರಿತು ಉಡುಪಿಯಲ್ಲಿ ಪ್ರತಿಕ್ರಿಯೆ ನೀಡಿರುವ ಸಚಿವರು, ಆಯುಷ್ಮಾನ್ ಭಾರತ್ ಯೋಜನೆಯಡಿ 112 ಜಿಲ್ಲೆಯಲ್ಲಿ ಆಸ್ಪತ್ರೆ ತೆರೆಯಲಾಗುತ್ತಿದೆ, ಕಿಸಾನ್ ರೈಲು ಬಿಡುಗಡೆ ಮಾಡಿದ್ದು ಸ್ವಾಗತಾರ್ಹ ಎಂದರು.

"ಕೇಂದ್ರ ಬಜೆಟ್ ಪ್ರಧಾನಮಂತ್ರಿ ನರೇಂದ್ರ ಮೋದಿಗೆ ನಿರಾಸೆ'

ಕಾಶ್ಮೀರಕ್ಕೆ 37 ಸಾವಿರ ಕೋಟಿ‌ ಮೀಸಲಿರಿಸಲಾಗಿದ್ದು, ಕಾಶ್ಮೀರದ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಇದು ಅನುಕೂಲವಾಗಲಿದೆ. 370 ರದ್ದತಿಯಿಂದ ಜನರ ಮೇಲೆ ಆಗುವ ಪರಿಣಾಮಕ್ಕೆ ಅನುಕೂಲವಾಗಲಿದೆ. ಒಟ್ಟಾರೆ ಇದೊಂದು ದೂರಗಾಮಿ ಬಜೆಟ್ ಎಂದು ಬಣ್ಣಿಸಿದರು.

Union Budget Gave Confidence To The Common People: Kota Srinivasa

ನರೇಂದ್ರ ಮೋದಿಯವರ ಸರ್ಕಾರ ಜನಪರ ಬಜೆಟ್ ನೀಡಿದೆ. ದೇಶದ ಬರಗಾಲ ಪೀಡಿತ ಪ್ರದೇಶಗಳಲ್ಲಿ ನೀರಿನ ಮೂಲ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ. ಇದರೊಂದಿಗೆ ಬಜೆಟ್ ನಲ್ಲಿ ರಾಷ್ಟ್ರೀಯ ಭದ್ರತೆಗೆ ಒತ್ತು‌ಕೊಡಲಾಗಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಯಾವ ಇಲಾಖೆಗೆ ಎಷ್ಟು ಕೊಟ್ಟರು ನಿರ್ಮಲಾ ಸೀತಾರಾಮನ್ಯಾವ ಇಲಾಖೆಗೆ ಎಷ್ಟು ಕೊಟ್ಟರು ನಿರ್ಮಲಾ ಸೀತಾರಾಮನ್

ಇದೇ ಸಂದರ್ಭದಲ್ಲಿ ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಮಾತನಾಡಿದ ಪೂಜಾರಿ, ಸಿಎಂ ಯಡಿಯೂರಪ್ಪ ಅವರು ಕೇಂದ್ರ ನಾಯಕರ ಜೊತೆ ಸಮಾಲೋಚನೆ ಮಾಡುತ್ತಿದ್ದಾರೆ. ಅವರ ತೀರ್ಮಾನವನ್ನು ನಾವೆಲ್ಲಾ ಒಟ್ಟಾಗಿ, ಒಂದಾಗಿ ಸ್ವಾಗತ ಮಾಡುತ್ತೇವೆ ಎಂದರು.

Union Budget Gave Confidence To The Common People: Kota Srinivasa

""ಸುಭದ್ರ ಸರ್ಕಾರವೊಂದೇ ನಮ್ಮ ಮುಂದಿನ ಗುರಿ, ಸೋತವರಿಗೆ ಸ್ಥಾನಮಾನ ಕೊಡುವ ಬಗ್ಗೆ ಶ್ರೀನಿವಾಸ ಪೂಜಾರಿ ಏನು ಹೇಳೋಕೆ ಸಾಧ್ಯ? ಅದನ್ನು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್, ಸಿಎಂ ಯಡಿಯೂರಪ್ಪ ತೀರ್ಮಾನ ಮಾಡ್ತಾರೆ. ಶೀಘ್ರವೇ ಎಲ್ಲಾ ಸಮಸ್ಯೆ ಪರಿಹಾರ ಆಗುವ ವಿಶ್ವಾಸ ಇದೆ'' ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

English summary
Minister Kota Srinivasa Poojary said in Udupi, this time the Union Budget has given confidence to the general public of the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X