ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನೀರಿನಿಂದ ಟೇಕಾಫ್, ಲ್ಯಾಂಡ್ ಆಗಬಲ್ಲ ಪುಟಾಣಿ ಸೀ ಪ್ಲೇನ್!

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಫೆಬ್ರವರಿ 26: ಉಡುಪಿ ಜಿಲ್ಲೆಯ ಹೆಜಮಾಡಿಯ ಉತ್ಸಾಹಿ ತರುಣ ತರುಣಿಯರ ತಂಡವು ದೇಶದ ಮೊಟ್ಟಮೊದಲ ಮೈಕ್ರೋ ಸೀ ಪ್ಲೇನ್ ಒಂದನ್ನು ತಯಾರಿಸಿ ಗಮನ ಸೆಳೆದಿದೆ. ಇದು ನೆಲದಿಂದ ಆಕಾಶಕ್ಕೆ ಚಿಮ್ಮುವ ವಿಮಾನ ಅಲ್ಲ, ಬದಲಾಗಿ ನೀರಿನಿಂದ ಟೇಕಾಫ್ ಆಗಿ ಮರಳಿ ನೀರಿಗೆ ಬಂದು ಲ್ಯಾಂಡ್ ಆಗುವ ಮೈಕ್ರೋ ಸಿ ಪ್ಲೇನ್.

ಇಂಜಿರಿಂಗ್ ಓದುತ್ತಿರುವ ಮತ್ತು ಇಂಜಿನಿಯರಿಂಗ್ ಕಲಿತ ವಿದ್ಯಾರ್ಥಿಗಳು ಇದರ ರೂವಾರಿಗಳು. ಇದನ್ನು ತಯಾರಿಸಲು ಈ ತಂಡವು ಬಹಳಷ್ಟು ಶ್ರಮ ಪಟ್ಟಿದೆ. ಸಮಾನಮನಸ್ಕ ಯುವಕ-ಯುವತಿಯರು ಪುಷ್ಪರಾಜ್ ಅಮೀನ್ ಎಂಬುವರ ನೇತೃತ್ವದಲ್ಲಿ ವರ್ಷಗಳ ಕಾಲ ಸಂಶೋಧನೆ ಮಾಡಿ ಈ ಪುಟಾಣಿ ಸೀ ಪ್ಲೇನ್ ನ್ನು ತಯಾರಿಸಿದ್ದಾರೆ.

ವಿಶೇಷ: ಪ್ರವಾಸಿಗರ ಫೇವರಿಟ್ ತಾಣ ಮಲ್ಪೆಯ ಸೀ ವಾಕ್ವಿಶೇಷ: ಪ್ರವಾಸಿಗರ ಫೇವರಿಟ್ ತಾಣ ಮಲ್ಪೆಯ ಸೀ ವಾಕ್

ಹೆಜಮಾಡಿಯಲ್ಲಿ ಇದರ ಹಾರಾಟವು ಯಶಸ್ವಿಯಾಗಿ ನಡೆದಿದೆ. ದ್ವೀಪದಿಂದ ದ್ವೀಪಕ್ಕೆ ಚಿಮ್ಮಬಲ್ಲ ಈ ಪ್ಲೇನ್‌ನ ತೂಕ 120 ಕೆ.ಜಿ. ಸದ್ಯ ಇದು ಪೈಲೆಟ್ ರಹಿತ ವಿಮಾನ. ಇದರಲ್ಲಿ ಒಬ್ಬರಿಗೆ ಮಾತ್ರ ಕೂತು ಹಾರಲು ಅವಕಾಶವಿದೆ. ಇದರ ಬಗ್ಗೆ ಇನ್ನಷ್ಟು ಸಂಶೋಧನೆಗಳು ಆದರೆ ಮತ್ತಷ್ಟು ಅಭಿವೃದ್ಧಿ ಮಾಡುವ ಅವಕಾಶವಿದ್ದು, ಕರಾವಳಿಯ ಟೂರಿಸಂಗೆ ಹೊಸ ಭಾಷ್ಯ ಬರೆಯುವ ಎಲ್ಲಾ ಲಕ್ಷಣಗಳಿವೆ.

ಇಂಗ್ಲೆಂಡ್: ಮೇ.17ರವರೆಗೂ ಅಂತಾರಾಷ್ಟ್ರೀಯ ವಿಮಾನ ಸಂಚಾರಕ್ಕೆ ನಿರ್ಬಂಧ ಇಂಗ್ಲೆಂಡ್: ಮೇ.17ರವರೆಗೂ ಅಂತಾರಾಷ್ಟ್ರೀಯ ವಿಮಾನ ಸಂಚಾರಕ್ಕೆ ನಿರ್ಬಂಧ

Udupi Youths Invented Seaplane Which Fly And Land In Water

ಆದರೆ, ಸದ್ಯ ಈ ತಂಡಕ್ಕೆ ಇನ್ನಷ್ಟು ಸಂಶೋಧನೆ ಮಾಡಲು ಹಣಕಾಸು ಮತ್ತು ಜಾಗದ ಅಗತ್ಯವಿದೆ. ಈಗಾಗಲೇ ಲಕ್ಷಾಂತರ ರೂಪಾಯಿ ವೆಚ್ಚವಾಗಿದೆ. ಇನ್ನಷ್ಟು ವೆಚ್ಚ ಮಾಡಲು ಇವರ ಬಳಿ ಹಣವಿಲ್ಲ. ಸರ್ಕಾರ ನಮಗೆ ಪ್ರೋತ್ಸಾಹ ನೀಡಬೇಕು, ತಂಡ ನಿರೀಕ್ಷೆ ಮಾಡುತ್ತಿದೆ.

ಎಂಜಿನ್ ಫೇಲ್, ಬಿಡಿ ಭಾಗಗಳು ಕಳಚಿದರೂ ವಿಮಾನ ಸುರಕ್ಷಿತ ಲ್ಯಾಂಡಿಂಗ್ ಎಂಜಿನ್ ಫೇಲ್, ಬಿಡಿ ಭಾಗಗಳು ಕಳಚಿದರೂ ವಿಮಾನ ಸುರಕ್ಷಿತ ಲ್ಯಾಂಡಿಂಗ್

ಪುಷ್ಪರಾಜ್ ಅಮೀನ್ ಎಂಬುವರ ನೇತೃತ್ವದಲ್ಲಿ ಯುವ ಇಂಜಿನಿಯರ್‌ಗಳಾದ ವಿನಯ. ಯು, ವಸುರಾಜ್ ಅಮಿನ್, ಅಭಿಷೇಕ್, ಉತ್ಸವ ಉಮೇಶ್, ರೇಶ್ಮಾ, ಶಯನಿ ರಾವ್, ಅಶ್ವಿನಿ ರಾವ್ ಈ ಮೈಕ್ರೋ ಸೀ ಪ್ಲೇನ್ ತಯಾರು ಮಾಡಿದ್ದಾರೆ.

Udupi Youths Invented Seaplane Which Fly And Land In Water

Recommended Video

ಬೆಲೆ ಏರಿಕೆ ಖಂಡಿಸಿ ಭಾರತ ಬಂದ್-ದೇಶದ 1,500 ಪಟ್ಟಣಗಳಲ್ಲಿ ನಡೆಯುತ್ತಿರುವ ಬಂದ್ | Oneindia Kannada

ಇದರ ರೆಕ್ಕೆಗಳು 35 ಅಡಿ ಇದ್ದು, 33 ಎಚ್ ಪಿ ಇಂಜಿನ್ ಸಾಮರ್ಥ್ಯವನ್ನು ಹೊಂದಿದೆ. ಅಲ್ಯುಮಿನಿಯಂ, ಫಾಮ್, ನೈಲನ್ ಬಟ್ಟೆ ಮತ್ತಿತರ ಪರಿಕರಗಳಿಂದ ಇದನ್ನು ತಯಾರಿಸಲಾಗಿದೆ. ದ್ವೀಪದಿಂದ ದ್ವೀಪಕ್ಕೆ ಹಾರುವ ಸಾಮರ್ಥ್ಯ ಇದಕ್ಕಿದೆಯಾದರೂ, ಸದ್ಯ ಅನುಮತಿ ಸಿಕ್ಕಿಲ್ಲ.

English summary
Udupi district Hejamadi based youths invented the seaplane which can fly and land in water. Team ready to develop it but need money and place.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X