ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಡುಪಿಗೆ ಶೀಘ್ರದಲ್ಲೇ 24 ಗಂಟೆಯೂ ನೀರು ಸರಬರಾಜು

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಆಗಸ್ಟ್ 22: ಉಡುಪಿ ನಗರಕ್ಕೆ ದಿನದ ಇಪ್ಪತ್ತನಾಲ್ಕು ಗಂಟೆಯೂ ನೀರು ಕೊಡುವ ಯೋಜನೆಗೆ ಸರ್ಕಾರ ಅನುಮೋದನೆ ನೀಡಿದೆ. ಮೂರು ಹಂತಗಳ 270 ಕೋಟಿ ಯೋಜನೆಗೆ ಅನುಮೋದನೆ ನೀಡಿರುವುದಾಗಿ ತಿಳಿದುಬಂದಿದೆ.

ಮೊದಲನೆಯದಾಗಿ ವರಾಹಿಯಿಂದ ನೀರು ಸಂಸ್ಕರಣಾ ಘಟಕಕ್ಕೆ ನೀರು ಕೊಂಡೊಯ್ಯುವ (119.5 ಕೋಟಿ), ಘಟಕದಲ್ಲಿ ನೀರಿನ ಸಂಸ್ಕರಣೆ ಮಾಡುವ (47.58 ಕೋಟಿ), ಆ ನೀರನ್ನು ಉಡುಪಿಗೆ ದಿನದ ಇಪ್ಪತ್ತನಾಲ್ಕು ಗಂಟೆಯೂ ಹರಿಸುವ (103 ಕೋಟಿ) ಹಂತಗಳನ್ನು ಈ ಯೋಜನೆ ಒಳಗೊಂಡಿದೆ.

 ನದಿಗಳ ಪರಸ್ಪರ ಸಂಪರ್ಕಕ್ಕೆ ಡಿಪಿಆರ್ ಸಿದ್ಧ: ಯೋಜನೆ ಏನು? ನದಿಗಳ ಪರಸ್ಪರ ಸಂಪರ್ಕಕ್ಕೆ ಡಿಪಿಆರ್ ಸಿದ್ಧ: ಯೋಜನೆ ಏನು?

ಕುಂದಾಪುರದಲ್ಲಿನ ವರಾಹಿ ನೀರನ್ನು ನೀರು ಸಂಸ್ಕರಣಾ ಘಟಕಕ್ಕೆ 38.5 ಕಿಲೋ ಮೀಟರ್ ಪೈಪ್ ಲೈನ್ ಮೂಲಕ ತೆಗೆದುಕೊಂಡು ಹೋಗಲಾಗುತ್ತದೆ. ಸಂಸ್ಕರಣಾ ಘಟಕದಲ್ಲಿ ನೀರು ಸಂಸ್ಕರಣೆ ನಡೆದ ನಂತರ ಇಡೀ ಉಡುಪಿಗೆ ಅದನ್ನು ಹರಿಸಲಾಗುತ್ತದೆ.

Udupi Will Get Full Day Water Supply Shortly

ಮಂಗಳೂರಿನಲ್ಲಿ ನಾಲ್ಕು ದಿನಗಳಿಂದ ನೀರಿಲ್ಲ, ಜನಪ್ರತಿನಿಧಿಗಳೂ ಪತ್ತೆ ಇಲ್ಲಮಂಗಳೂರಿನಲ್ಲಿ ನಾಲ್ಕು ದಿನಗಳಿಂದ ನೀರಿಲ್ಲ, ಜನಪ್ರತಿನಿಧಿಗಳೂ ಪತ್ತೆ ಇಲ್ಲ

35 ವಾರ್ಡ್ ಗಳ ವ್ಯಾಪ್ತಿಯಲ್ಲಿ, 17 ವಲಯಗಳ 18,737 ಮನೆಗಳಿಗೆ ನೀರು ಸರಬರಾಜು ವ್ಯವಸ್ಥೆಯನ್ನು ಈ ಯೋಜನೆ ಒಳಗೊಂಡಿದೆ. ಎಲ್ಲಾ ಸಂಪರ್ಕಕ್ಕೂ ಮೀಟರ್ ಅಳವಡಿಕೆ ಮಾಡಲಾಗುವುದು. ಈ ಯೋಜನೆಯ ಕಾಂಟ್ರಾಕ್ಟನ್ನು ಎರಡು ಸಂಸ್ಥೆಗಳಿಗೆ ನೀಡಲಾಗಿದ್ದು, ಮಳೆಗಾಲ ಮುಗಿಯುತ್ತಿದ್ದಂತೆ ಯೋಜನಾ ಕಾರ್ಯ ಆರಂಭವಾಗಲಿದೆ. 2022ಕ್ಕೆ ಕಾಮಗಾರಿ ಮುಗಿಯುವ ಅಂದಾಜಿದೆ.

English summary
The government has approved the project of providing water to the Udupi city for twenty-four hours a day. The three-phase project has been approved for Rs 270 crore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X