ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಣ್ಣು ಕಾಣದಿದ್ದರೇನಂತೆ, ಚೆಸ್ ಬೋರ್ಡ್ ಮೇಲೆ ಇವರೇ ಚಾಂಪಿಯನ್

ಇತ್ತೀಚೆಗೆ ಮಣಿಪಾಲದಲ್ಲಿ ಅಂಧರ ಏಷ್ಯಾ ಪೆಸಿಫಿಕ್‌ ಚೆಸ್‌ ಪಂದ್ಯಾವಳಿ ನಡೆದಿತ್ತು. ಇದರಲ್ಲಿ ಕರ್ನಾಟಕದ ಕಿಶನ್ ಗಂಗೊಳ್ಳಿ 7 ಅಂಕಗಳೊಂದಿಗೆ ಅಗ್ರಸ್ಥಾನಿಯಾಗಿ ಹೊರಹೊಮ್ಮಿ ಪ್ರಶಸ್ತಿ ಬಾಚಿಕೊಂಡಿದ್ದಾರೆ.

By ಐಸಾಕ್ ರಿಚರ್ಡ್ಸ್
|
Google Oneindia Kannada News

ಉಡುಪಿ, ಏಪ್ರಿಲ್ 3: ಸಾಧನೆಗೆ ನ್ಯೂನ್ಯತೆಗಳು ಅಡ್ಡಿಯಲ್ಲ ಎಂಬುದನ್ನು ಹಲವಾರು ಜನರು ನಿರೂಪಿಸಿದ್ದಾರೆ. ಅವರದೇ ಸಾಲಿನಲ್ಲಿ ನಿಲ್ಲುವ ಕಥೆ ಉಡುಪಿಯ ಕಿಶನ್ ಗಂಗೊಳ್ಳಿಯದ್ದು. ಕಣ್ಣು ಕುರುಡಾದರೂ ಈತ ಜನರೆಲ್ಲಾ ಕಣ್ಣು ತೆರೆದು ನೋಡುವ ಸಾಧನೆಯನ್ನು ಇವರು ಮಾಡಿದ್ದಾರೆ.

ಇತ್ತೀಚೆಗೆ ಮಣಿಪಾಲದಲ್ಲಿ ಅಂಧರ ಏಷ್ಯಾ ಪೆಸಿಫಿಕ್‌ ಚೆಸ್‌ ಪಂದ್ಯಾವಳಿ ನಡೆದಿತ್ತು. ಇದರಲ್ಲಿ ಕರ್ನಾಟಕದಿಂದ ಕಿಶನ್ ಗಂಗೊಳ್ಳಿ ಕೂಡಾ ಭಾಗವಹಿಸಿದ್ದಾರೆ. ಈ ಅಂಧರ ಚೆಸ್ ಪಂದ್ಯಾವಳಿಯಲ್ಲಿ ಕಿಶನ್‌ 7 ಅಂಕಗಳೊಂದಿಗೆ ಅಗ್ರಸ್ಥಾನಿಯಾಗಿ ಹೊರಹೊಮ್ಮಿ ಪ್ರಶಸ್ತಿ ಬಾಚಿಕೊಂಡಿದ್ದಾರೆ.[ಉಡುಪಿ: ಆಸ್ಪತ್ರೆ ಸೇರಿದ ಗರ್ಭಿಣಿಯನ್ನು ಕೆಲಸದಿಂದ ಕಿತ್ತೊಗೆದ ಕಾಲೇಜು]

ಈ ಮೂಲಕ 50 ಸಾವಿರ ರೂಪಾಯಿ ನಗದು ಹಾಗೂ ಚಿನ್ನದ ಪದಕವನ್ನು ಕಿಶನ್ ಕೊರಳೇರಿಸಿಕೊಂಡಿದ್ದಾರೆ. ಅಂಧ ಮಗನ ಚೆಸ್ ಪ್ರತಿಭೆ ಗುರುತಿಸಿ, ಪ್ರೋತ್ಸಾಹಿಸಿದ ಕಿಶನ್ ತಾಯಿ ಈತನ ಚದುರಂಗದಲ್ಲಿ ಸಾಧನೆಯ ನಡೆಗೆ ಮುನ್ನುಡಿ ಬರೆದಿದ್ದಾರೆ.

ನಾಲ್ಕು ಬಾರಿ ರಾಷ್ಟ್ರೀಯ ಚಾಂಪಿಯನ್

ನಾಲ್ಕು ಬಾರಿ ರಾಷ್ಟ್ರೀಯ ಚಾಂಪಿಯನ್

ಭಾರತದ ಆಟಗಾರರಾದ ಕಿಶನ್ ಗಂಗೊಳ್ಳಿ ಅಂಧರ ಏಷ್ಯನ್ ಚೆಸ್ ಚಾಂಪಿಯನ್ ಶಿಪ್ನಲ್ಲಿ ಚಿನ್ನದ ಪದಕ ಜಯಿಸಿದ್ದಾರೆ. ಆದರೆ ಇದೊಂದೇ ಇವರ ಸಾಧನೆಯಲ್ಲ. ಈ ಹಿಂದೆಯೂ ಚದುರಂಗ ಕ್ರೀಡೆಯಲ್ಲಿ ನಾಲ್ಕು ಬಾರಿ ಅಂಧರ ರಾಷ್ಟ್ರೀಯ ಚಾಂಪಿಯನ್ ಕಿರೀಟವನ್ನು ಕಿಶನ್ ಮುಡಿಗೇರಿಸಿಕೊಂಡಿದ್ದರು.

ಕುಂದಾಪುರ ಹುಟ್ಟೂರು

ಕುಂದಾಪುರ ಹುಟ್ಟೂರು

ಕಿಶನ್ ಗಂಗೊಳ್ಳಿ ಮೂಲತಃ ಕುಂದಾಪುರ ತಾಲೂಕು ಗಂಗೊಳ್ಳಿಯವರು. ಕಿಶನ್ ತಂದೆ ಕೆನರಾ ಬ್ಯಾಂಕ್ ಉದ್ಯೋಗಿ ರವೀಂದ್ರ. ಸದ್ಯ ಅವರೀಗ ಶಿವಮೊಗ್ಗದ ವಿನೋಬಾ ನಗರದಲ್ಲಿ ನೆಲೆಸಿದ್ದಾರೆ. ತಾಯಿ ಶಿವಮೊಗ್ಗದಲ್ಲಿ ಬ್ಯೂಟೀಶಿಯನ್ ಆಗಿದ್ದಾರೆ.[ಉಡುಪಿ ಡಿಸಿ, ಎಸಿ ಕೊಲೆ ಯತ್ನ, ಬಂಧಿತರ ಸಂಖ್ಯೆ 13ಕ್ಕೆ ಏರಿಕೆ]

ರ್ಯಾಂಕ್ ವಿದ್ಯಾರ್ಥಿ

ರ್ಯಾಂಕ್ ವಿದ್ಯಾರ್ಥಿ

ಹುಟ್ಟಿನಿಂದಲೇ ಅಂಧರಾದ ಕಿಶನ್ ಶಿವಮೊಗ್ಗದ ಕುವೆಂಪು ವಿವಿ ಯಿಂದ ಇಕನಾಮಿಕ್ಸ್ ನಲ್ಲಿ ಎಂ. ಎ ಪದವಿಯನ್ನು ಎರಡನೇ ರಾಂಕ್ ನೊಂದಿಗೆ ಪಡೆದ ಪ್ರತಿಭಾವಂತ ವಿದ್ಯಾರ್ಥಿ. ಕಲಿಕೆಯಲ್ಲಾಗಲಿ, ಚೆಸ್ ನಲ್ಲಾಗಲಿ ಅವರಿಗೆ ಅಂಧತ್ವ ಎಂದೂ ಅಡ್ಡಿಯಾಗಿ ಪರಿಣಮಿಸಿಲ್ಲ.

 ಕಿಶನ್ ಸಾಧನೆ

ಕಿಶನ್ ಸಾಧನೆ

2013ರಿಂದ 2017ರ ವರೆಗೆ ಸತತ ನಾಲ್ಕು ಬಾರಿ ಚೆಸ್ ನಲ್ಲಿ ಅಂಧರ ರಾಷ್ಟ್ರೀಯ ಚಾಂಪಿಯನ್ ಶಿಪ್ ಗೆದ್ದವರು ಕಿಶನ್. 2012 ರಲ್ಲಿ ಚೆನ್ನೈ ನಲ್ಲಿ ನಡೆದ ಚೆಸ್ ಒಲಂಪಿಯಾಡ್ ನಲ್ಲಿ ದೇಶವನ್ನು ಪ್ರತಿನಿಧಿಸುವ ಮೂಲಕ ಚಿನ್ನದ ಪದಕ ಜಯಿಸಿದ ದೇಶದ ಏಕೈಕ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ಕಿಶನ್ ಹೇಳುವುದೇನು?

ಕಿಶನ್ ಹೇಳುವುದೇನು?

ಈ ಬಗ್ಗೆ ಪ್ರತಿಕ್ರಿಯಿಸಿದ ಕಿಶನ್, ಟೂರ್ನಿ ಕಠಿಣ ಸ್ಪರ್ಧೆಯಿಂದ ಕೂಡಿದ್ದರಿಂದ ಗೆಲುವು ಸುಲಭವಾಗಿರಲಿಲ್ಲ. ಇದೇ ವರ್ಷದ ಜೂನ್ ತಿಂಗಳಿನಲ್ಲಿ ನಡೆಯುವ ಚೆಸ್ ಒಲಂಪಿಯಾಡ್ನಲ್ಲಿ ಭಾಗವಹಿಸಿ ಪದಕ ಗೆಲ್ಲುವುದು ನನ್ನ ಮುಂದಿನ ಗುರಿ. ಇದಕ್ಕಾಗಿ ಕಠಿಣ ಅಭ್ಯಾಸ ಮಾಡುತ್ತಿದ್ದೇನೆ. ಮುಂದೆಯೂ ಕ್ರೀಡಾ ಬದುಕಿನಲ್ಲಿ ಬಹಳಷ್ಟು ಸಾಧನೆಯನ್ನು ಮಾಡಲು ಇಚ್ಛಿಸಿದ್ದೇನೆ. ನನ್ನೆಲ್ಲಾ ಸಾಧನೆಗೆ ನನ್ನ ತಂದೆ ತಾಯಿ ಆಶೀರ್ವಾದ ಹಾಗೂ ಪ್ರೋತ್ಸಾಹ ಕಾರಣ ಎಂದು ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.

English summary
Kishan Gangolli emerges champion in IBCA Asian Chess Championship held in Manipal. Kishan was victorious with seven points in eight rounds to pocket prize money of Rs 50,000.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X