ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಕ್ರಾಸನ ರೇಸ್ ನಲ್ಲಿ ವಿಶ್ವದಾಖಲೆ ಬರೆದ ಉಡುಪಿಯ ತನುಶ್ರೀ

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಫೆಬ್ರವರಿ 23: ಸರಣಿ ದಾಖಲೆಗಳ ಸರದಾರಿಣಿ ತನುಶ್ರೀ ಪಿತ್ರೋಡಿಗೆ ಮತ್ತೊಂದು ಗರಿ ಮುಡಿಗೇರಿದ್ದು, 100 ಮೀಟರ್ ಓಟವನ್ನು ಚಕ್ರಾಸನದ ಮೂಲಕ ಕ್ರಮಿಸಿ ವಿಶ್ವದಾಖಲೆ ಬರೆದಿದ್ದಾರೆ.

ಉಡುಪಿಯ ಉದ್ಯಾವರದಲ್ಲಿ ನಡೆದ ಚಕ್ರಾಸನ ರೇಸ್ ನಲ್ಲಿ ಭಾಗವಹಿಸುವುದರ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ಐದನೇ ಬಾರಿ ತನುಶ್ರಿ ತಮ್ಮ ಹೆಸರನ್ನು ದಾಖಲಿಸಿದ್ದಾರೆ. ಇಟಲಿಯ ರೋಮ್ ನಗರದಲ್ಲೂ ಪ್ರದರ್ಶನ ನೀಡಿ ತನುಶ್ರೀ ಸೈ ಎನಿಸಿಕೊಂಡಿದ್ದಳು.

ಉಡುಪಿಯಲ್ಲಿ ಶಾಹಿನ್ ಬಾಗ್ ಮಾದರಿ ಧರಣಿಗೆ ಅನುಮತಿ‌ ಇಲ್ಲಉಡುಪಿಯಲ್ಲಿ ಶಾಹಿನ್ ಬಾಗ್ ಮಾದರಿ ಧರಣಿಗೆ ಅನುಮತಿ‌ ಇಲ್ಲ

ಈ ಹಿಂದೆ ತಾನೇ ನಾಲ್ಕು ವಿಶ್ವ ದಾಖಲೆಗಳನ್ನು ಬರೆದಿದ್ದ ತನುಶ್ರೀ ಪಿತ್ರೋಡಿಯವರಿಂದ ಈಗ ಮತ್ತೊಂದು ದಾಖಲೆ ನಿರ್ಮಾಣಗೊಂಡಿದೆ.

Udupi Tanushree Who Wrote The World Record In Chakrasana Race

2017ರಲ್ಲಿ ನಿರಾಲಂಬ ಚಕ್ರಾಸನವನ್ನು ಒಂದು ನಿಮಿಷದಲ್ಲಿ 19 ಬಾರಿ ಮಾಡಿ ದಾಖಲೆ, 2018-19 ರಲ್ಲಿ ಜಿಮ್ನಾಸ್ಟಿಕ್ ನಲ್ಲಿ ಮತ್ತೆರಡು ದಾಖಲೆ ಬರೆದು ಸುದ್ದಿಯಾಗಿದ್ದ ಪುಟ್ಟ ಪೋರಿ.

ಪೇಜಾವರ ಮಠದಿಂದ ರಾಮಮಂದಿರ ನಿರ್ಮಾಣಕ್ಕೆ 5 ಲಕ್ಷ ಆರಂಭಿಕ ದೇಣಿಗೆಪೇಜಾವರ ಮಠದಿಂದ ರಾಮಮಂದಿರ ನಿರ್ಮಾಣಕ್ಕೆ 5 ಲಕ್ಷ ಆರಂಭಿಕ ದೇಣಿಗೆ

2019 ರಲ್ಲಿ ಒಂದು ನಿಮಿಷಕ್ಕೆ 61 ಧನುರಾಸನ ರೋಲ್ ಮಾಡಿ ನಾಲ್ಕನೇ ದಾಖಲೆ ಮಾಡಿದ್ದರು. ಈ ಐತಿಹಾಸಿಕ ದಾಖಲೆಗೆ ಸಾಕ್ಷಿಯಾದ ಉಡುಪಿ ಜಿಲ್ಲೆಯ ಜನರು ಸಾಕ್ಷಿಯಾಗಿದ್ದಾರೆ.

Udupi Tanushree Who Wrote The World Record In Chakrasana Race

ತನುಶ್ರೀ ಸಾಧನೆಗೆ ಗಣ್ಯರಿಂದ ಅಭಿನಂದನೆಯ ಸುರಿಮಳೆ ಬಂದಿವೆ. ""ವಿಶ್ವದಲ್ಲೇ ಉಡುಪಿಯ ಹೆಸರನ್ನು ತನುಶ್ರಿ ಎತ್ತಿಹಿಡಿದಿದ್ದಾಳೆ'' ಎಂದು ಮಾಜಿ ಸಚಿವ ಪ್ರಮೋದ ಮಧ್ವರಾಜ್ ಅಭಿನಂದಿಸಿದ್ದಾರೆ.

ನೃತ್ಯ ಮತ್ತು ಯೋಗದಲ್ಲಿ ವಿಶೇಷ ಸಾಧನೆ ಮಾಡಿರುವ ತನುಶ್ರಿಗೆ "ಯೋಗರತ್ನ' ಬಿರುದನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ನೀಡಿದ್ದಾರೆ.

English summary
Tanushree Pitrodi wrote the world record by running the 100-meter run in Udupi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X