ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಡುಪಿಯ ಮಲ್ಪೆ ಬೀಚಿನಲ್ಲಿ ಸ್ಟಿಂಗ್ ರೇ ಮೀನುಗಳ ಹಾವಳಿ

|
Google Oneindia Kannada News

ಉಡುಪಿ, ಸೆಪ್ಟೆಂಬರ್ 27: ಮಲ್ಪೆ ಕಡಲ ತಡಿಗೆ ಭೇಟಿ ನೀಡುವ ಪ್ರವಾಸಿಗರು ಸಮುದ್ರಕ್ಕೆ ಇಳಿಯುವ ಮುನ್ನ ಎರಡು ಬಾರಿ ಯೋಚನೆ ಮಾಡುವಂಥ ಪರಿಸ್ಥಿತಿ ಸೃಷ್ಟಿಯಾಗಿದೆ. ಇದಕ್ಕೆ ಕಾರಣ ಕಡಲ ತಡಿಯಲ್ಲಿ ಕಾಣಿಸಿಕೊಂಡಿರುವ ತೊರಕೆ ಮೀನು ಅಥವಾ ಸ್ಟಿಂಗ್ ರೇ ಮೀನು.

ಕಡಲಿಗೆ ಇಳಿಯುವ ಮುನ್ನ ಮುಂಜಾಗ್ರತೆ ವಹಿಸದಿದ್ದರೆ ತೊರಕೆ ಮೀನಿನ ಮುಳ್ಳು ಚುಚ್ಚಿಸಿಕೊಳ್ಳಬೇಕಾದೀತು. ಈಗಾಗಲೇ ಕಳೆದ ಎರಡು ದಿನಗಳಿಂದ ಮಲ್ಪೆ ಬೀಚಿನಲ್ಲಿ ನೀರಾಟ ಆಡಲು ಇಳಿದವರಿಗೆ ತೊರಕೆ ಮೀನು ಅಥವಾ ಸ್ಟಿಂಗ್ ರೇ ಮೀನು ತನ್ನ ಇಂಜೆಕ್ಷನ್ ರುಚಿ ತೋರಿಸಿದೆ.

ತೊರಕೆ ಮೀನಿನ ದಾಳಿ

ತೊರಕೆ ಮೀನಿನ ದಾಳಿ

ಸಣ್ಣ ಗಾತ್ರದ ತೊರಕೆ ಮೀನು ಮಲ್ಪೆ ಕಡಲ ತಡಿಗೆ ಬಂದಿದೆ. ಈ ಮೀನುಗಳು ಬಾಲದಲ್ಲಿರುವ ಮುಳ್ಳಿನಿಂದ ನೀರಿಗಿಳಿಯುವ ಪ್ರವಾಸಿಗರನ್ನು ಚುಚ್ಚುತ್ತಿವೆ. ಮಂಗಳವಾರ ಮಲ್ಪೆ ಬೀಚ್ ನಲ್ಲಿ ಸುಮಾರು ಎಂಟು ಮಂದಿ ತೊರಕೆ ಮೀನಿನ ಮುಳ್ಳು ಚುಚ್ಚಿ ಗಾಯಗೊಂಡಿದ್ದಾರೆ. ಗಾಯಗೊಂಡವರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ತೆರಳಿದ್ದಾರೆ.

ಸಂತಾನೋತ್ಪತಿಗಾಗಿ ಕಡಲ ತಡಿಗೆ

ಸಂತಾನೋತ್ಪತಿಗಾಗಿ ಕಡಲ ತಡಿಗೆ

ಸಾಮಾನ್ಯವಾಗಿ ಆಳ ಸಮುದ್ರದಲ್ಲಿ ಕಂಡು ಬರುವ ಈ ಮೀನು ಸಂತಾನೋತ್ಪತ್ತಿಗಾಗಿ ಈ ಅವಧಿಯಲ್ಲಿ ಕಡಲ ತಡಿಗೆ ಬರುತ್ತದೆ. ಅದರಂತೆ ಈ ವರ್ಷವೂ ಸಾಕಷ್ಟು ಸಂಖ್ಯೆಯಲ್ಲಿ ಮೀನುಗಳು ತೀರ ಸೇರಿವೆ.ಇನ್ನು ಒಂದು ವಾರದವರೆಗೆ ಈ ಮೀನುಗಳು ಸಮುದ್ರ ಕಿನಾರೆಯಲ್ಲಿ ಇರುತ್ತವೆ ಎನ್ನುತ್ತಾರೆ ತಜ್ಞರು.

ಚೂಪಾದ ಬಾಲದಿಂದ ದಾಳಿ

ಚೂಪಾದ ಬಾಲದಿಂದ ದಾಳಿ

ತೊರಕೆ ಮೀನು ಬಾಲದ ಮುಳ್ಳಿನಿಂದ ಚುಚ್ಚಿದಾಗ ವಿಪರೀತ ರಕ್ತ ಸ್ರಾವವಾಗುತ್ತದೆ ಹಾಗೂ ತುಂಬಾ ನೋವು ಕೂಡಾ ಉಂಟಾಗುತ್ತದೆ. ತೊರಕೆ ಮೀನಿನ ಮುಳ್ಳು ನಂಜಿನ ಗುಣವುಳ್ಳದ್ದರಿಂದ ಮೀನಿನ ಮುಳ್ಳು ಚುಚ್ಚಿದ ಬಳಿಕ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.

ಕಣ್ಣಿಗೆ ಕಾಣಿಸುವುದಿಲ್ಲ

ಕಣ್ಣಿಗೆ ಕಾಣಿಸುವುದಿಲ್ಲ

ಎರಡು ವರ್ಷಗಳ ಹಿಂದೆ ಇದೇ ರೀತಿಯಲ್ಲಿ ತೊರಕೆ ಮೀನುಗಳು ಪ್ರವಾಸಿಗರಿಗೆ ಮುಳ್ಳು ಚುಚ್ಚಿ ಗಾಯಗೊಳಿಸಿದ್ದವು. ಈ ತೊರಕೆ ಮೀನುಗಳ ಬಣ್ಣ ಹಾಗೂ ಮರಳಿನ ಬಣ್ಣ ಒಂದೇ ರೀತಿ ಗೋಚರಿಸುವ ಕಾರಣ ನೀರಿಗಿಳಿದು ಆಟವಾಡುವ ಪ್ರವಾಸಿಗರು ಕಾಲಿನಡಿಯಲ್ಲಿ ಸಂಚರಿಸುವ ತೊರಕೆ ಮೀನಿನ ಅರಿವಿಲ್ಲದೆ ಮೆಟ್ಟಿ ಮುಳ್ಳನ್ನು ಚುಚ್ಚಿಸಿಕೊಳ್ಳುತಿದ್ದಾರೆ.

ಈ ಹಿನ್ನೆಲೆಯಲ್ಲಿ ಕರಾವಳಿಯ ಕಡಲ ತಡಿಗೆ ಬರುವ ಪ್ರವಾಸಿಗರು ಮುಂಜಾಗ್ರತೆ ವಹಿಸಬೇಕಾಗಿದೆ.

English summary
For the last two days, Stingray fishes attacking on tourists in Malpe Beach, Udupi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X