ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅನಾಥ ಶವಗಳ ಆಪತ್ಬಾಂಧವನಿಗೆ ಸ್ಮಶಾನದಲ್ಲೇ ಸನ್ಮಾನ..!

ಉಡುಪಿಯ ಸಾಮಾಜಿಕ ಕಾರ್ಯಕರ್ತ ವಿಶು ಶೆಟ್ಟಿ ಕಳೆದ ಹಲವು ವರ್ಷಗಳಿಂದ ಅನಾಥ ಶವಗಳಿಗೆ ಸಂಸ್ಕಾರ ಮಾಡುತ್ತಾ ಬಂದಿದ್ದಾರೆ. ಇತ್ತೀಚೆಗೆ ಅವರು 50 ನೇ ಶವಸಂಸ್ಕಾರ ಮಾಡಿದ ಹಿನ್ನೆಲೆಯಲ್ಲಿ ಸ್ಮಶಾನದಲ್ಲೇ ಸನ್ಮಾನಿಸಲಾಯಿತು.

By ಶಂಶೀರ್ ಬುಡೋಳಿ
|
Google Oneindia Kannada News

ಉಡುಪಿ, ಮಾರ್ಚ್ 31: ಸ್ಮಶಾನದಲ್ಲಿ ಶವಸಂಸ್ಕಾರ ಮಾಡುವುದನ್ನ ಬಿಟ್ಟರೆ ಮತ್ತೇನನ್ನೂ ಮಾಡಲ್ಲ . ಆದರೆ ಉಡುಪಿಯ ಬೀಡಿನಗುಡ್ಡೆಯ ಹಿಂದೂ ರುದ್ರಭೂಮಿಯಲ್ಲಿ ಸಾಮಾಜಿಕ ಕಾರ್ಯಕರ್ತರೊಬ್ಬರಿಗೆ ಸನ್ಮಾನ ಮಾಡಲಾಯಿತು. ಸ್ಮಶಾನದಲ್ಲಿ ಸನ್ಮಾನ ಮಾಡಿದ್ದು ಯಾಕೆ? ಸನ್ಮಾನ ಮಾಡಿದ್ದು ಯಾರಿಗೆ? ಈ ಎಲ್ಲವನ್ನೂ ತಿಳಿದುಕೊಳ್ಳಬೇಕಿದ್ದರೆ ಮುಂದೆ ಓದಿ.

ಉಡುಪಿಯ ಸಾಮಾಜಿಕ ಕಾರ್ಯಕರ್ತ ವಿಶು ಶೆಟ್ಟಿ ಕಳೆದ ಹಲವು ವರ್ಷಗಳಿಂದ ಅನಾಥ ಶವಗಳಿಗೆ ಸಂಸ್ಕಾರ ಮಾಡುತ್ತಾ ಬಂದಿದ್ದಾರೆ. ಇತ್ತೀಚೆಗೆ ಅವರು 50 ನೇ ಶವಸಂಸ್ಕಾರ ಮಾಡಿದ ಹಿನ್ನೆಲೆಯಲ್ಲಿ ಅವರಿಗೆ ಸ್ಮಶಾನದಲ್ಲೇ ಸನ್ಮಾನ ಮಾಡಲಾಯಿತು.[ಉಡುಪಿಗೆ ಬಂತು ಕೇರಳ ಮಾದರಿಯ ಬೋಟ್ ಹೌಸ್]

ಪೊಲೀಸ್ ಅಧಿಕಾರಿಗಳು, ಸಮಾಜ ಸೇವಕರ ಸಮ್ಮುಖದಲ್ಲಿ ವಿಶು ಶೆಟ್ಟಿಯವರ ವಿಶಿಷ್ಟ ಸನ್ಮಾನ ಕಾರ್ಯಕ್ರಮವನ್ನು ನಡೆಸಲಾಯಿತು.

ಅರ್ಧ ಶತಕ ದಾಟಿದ ಸಂಸ್ಕಾರ

ಅರ್ಧ ಶತಕ ದಾಟಿದ ಸಂಸ್ಕಾರ

ಸಮಾಜ ಸೇವಕ ವಿಶು ಶೆಟ್ಟಿ ಇತ್ತೀಚೆಗೆ ಅಂಬಲಪಾಡಿಯ ಅಪರಿಚಿತ ಗಂಡಸಿನ ಶವಸಂಸ್ಕಾರ ನಡೆಸಿದರು. ಈ ಮೂಲಕ ವಾರಸುದಾರರಿಲ್ಲದ 50 ನೇ ಶವದ ಸಂಸ್ಕಾರವನ್ನು ನೆರವೇರಿಸಿದರು.

50ನೇ ಶವ ಸಂಸ್ಕಾರದ ಹಿಂದಿನ ಕಥೆ

50ನೇ ಶವ ಸಂಸ್ಕಾರದ ಹಿಂದಿನ ಕಥೆ

ಕಳೆದ ಫೆಬ್ರವರಿ 21 ರಂದು ಮಲ್ಪೆಯ ಮುಖ್ಯ ರಸ್ತೆಯ ಬದಿಯಲ್ಲಿ ಸುಮಾರು 55 ವರ್ಷದ ಅಪರಿಚಿತ ವ್ಯಕ್ತಿಯೊಬ್ಬರು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು. ಸಾಮಾಜಿಕ ಕಾರ್ಯಕರ್ತ ವಿಶು ಶೆಟ್ಟಿ ನೀಡಿದ ಮಾಹಿತಿಯ ಮೇರೆಗೆ ಮಲ್ಪೆ ಪೊಲೀಸರು ಇವರನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿದರು. ವ್ಯಕ್ತಿಯನ್ನು ಪರೀಕ್ಷಿಸಿದ ವೈದ್ಯರು ವ್ಯಕ್ತಿ ಮೃತಪಟ್ಟಿರುವ ಬಗ್ಗೆ ಮಾಹಿತಿ ನೀಡಿದರು.[ಉಡುಪಿ: ದೇಶಭಕ್ತಿ ಸಾರಲು ಹೀಗೊಂದು ಸಾಹಸೀ ನಡಿಗೆ]

ಕಾದು ಕಾದು ಸುಸ್ತು

ಕಾದು ಕಾದು ಸುಸ್ತು

ವಾರಸುದಾರರ ಬರುವಿಕೆಗಾಗಿ ಶವವನ್ನು ಜಿಲ್ಲಾಸ್ಪತ್ರೆಯ ಶವಗಾರದಲ್ಲಿಡಲಾಗಿತ್ತು. ಪ್ರಕರಣ ಮಲ್ಪೆ ಠಾಣೆಯಲ್ಲಿ ದಾಖಲಾಗಿತ್ತು. ಪೊಲೀಸರು ಸಂಬಂಧಿಕರ ಆಹ್ವಾನಕ್ಕೆ ಮಾಧ್ಯಮ ಪ್ರಕಟಣೆ ನೀಡಿಯೂ ವ್ಯಕ್ತಿ ಮೃತ ಪಟ್ಟು 37 ದಿನಗಳು ಕಳೆದರೂ ಯಾರು ಬಾರದ ಕಾರಣ ಸಮಾಜಸೇವಕ ವಿಶು ಶೆಟ್ಟಿ ಅವರ ಮುಂದಾಳತ್ವದಲ್ಲಿ ಅಂತಿಮ ಸಂಸ್ಕಾರ ನಡೆಸಲಾಯಿತು.

ವಿದ್ಯಾರ್ಥಿ ದೆಸೆಯಿಂದಲೇ ಆರಂಭ

ವಿದ್ಯಾರ್ಥಿ ದೆಸೆಯಿಂದಲೇ ಆರಂಭ

ವಿದ್ಯಾರ್ಥಿಯಾಗಿರುವಾಗಲೇ ಸಾಮಾಜಿಕ ಕಾರ್ಯಕರ್ತ ವಿಶು ಶೆಟ್ಟಿ ವಾರಸುದಾರರಿಲ್ಲದ, ಎಚ್‌ಐವಿ ಬಾಧಿತರ, ನಿರ್ಗತಿಕರ ಶವಸಂಸ್ಕಾರ ಮಾಡುತ್ತಿದ್ದರು. ಇವರಿಗೆ ಬೀಡಿನಗುಡ್ಡೆಯ ರುದ್ರಭೂಮಿಯ ಶವಸಂಸ್ಕಾರಕಿ ವನಜ ಪೂಜಾರ್ತಿ ಸಹಕಾರ ನೀಡುತ್ತಿದ್ದಾರೆ.

ಸ್ಮಶಾನದಲ್ಲೇ ಸನ್ಮಾನ

ಸ್ಮಶಾನದಲ್ಲೇ ಸನ್ಮಾನ

50 ನೇ ಶವಸಂಸ್ಕಾರ ಮಾಡಿದ ಹಿನ್ನೆಲೆಯಲ್ಲಿ ವಿಶು ಶೆಟ್ಟಿಯವರನ್ನ ಪೊಲೀಸ್ ಅಧಿಕಾರಿಗಳು, ಸಮಾಜ ಸೇವಕರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು. ಒಟ್ಟಿನಲ್ಲಿ ಸ್ಮಶಾನ ವಿಶೇಷ ಕಾರ್ಯಕ್ರಮವೊಂದಕ್ಕೆ ಸಾಕ್ಷಿಯಾಯಿತು.

English summary
Social worker Vishu Shetty felicitated in graveyard here in Udupi’s Beedinagudde from Police department officials and other social workers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X