ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾಡುಪ್ರಾಣಿ ಕಾಟ ತಪ್ಪಿಸಲು ಮೇಷ್ಟ್ರು ಮಾಡಿದ ಸೂಪರ್ ಐಡಿಯಾ

By ಉಡುಪಿ ಪ್ರತಿನಿಧಿ
|
Google Oneindia Kannada News

ಮಂಗಳೂರು, ಅಕ್ಟೋಬರ್ 10: ಅವರು ವೃತ್ತಿಯಲ್ಲಿ ಶಿಕ್ಷಕ. ಪ್ರವೃತ್ತಿಯಲ್ಲಿ ಪ್ರಗತಿಪರ ಕೃಷಿಕ. ಕಾಡಂಚಿನ ಗ್ರಾಮದಲ್ಲಿ ವಾಸವಾಗಿದ್ದ ಮೇಷ್ಟ್ರಿಗೆ ತನ್ನ ಬೆಳೆಗಳು ಕಾಡು ಪ್ರಾಣಿಗಳ ಪಾಲಾಗುತ್ತಿರೋದು ಚಿಂತೆಯನ್ನುಂಟು ಮಾಡಿತ್ತು. ಕಾಡು ಪ್ರಾಣಿಗಳ ಕಾಟವನ್ನು ತಪ್ಪಿಸಲು ಹಲವಾರು ಪ್ರಯೋಗಗಳನ್ನು ಮಾಡಿದ್ದರು.

ಕಷ್ಟವಾದರೂ ಇಷ್ಟಪಟ್ಟು ಬೆಳೆದ ಬೆಳೆ, ಕಾಡು ಪ್ರಾಣಿಗಳ ಹಾವಳಿಗೆ ಹಾಳಾಗಿ ಹೋಗುತ್ತಿತ್ತು. ಹಾಗಂತ ಸಿಡಿಮದ್ದು ಸಿಡಿಸಿ, ಪರಿಸರ ಮಾಲಿನ್ಯ ಮಾಡೋಕೆ ಮೇಷ್ಟ್ರಿಗೆ ಇಷ್ಟವಿಲ್ಲ, ಗುಂಡಿಕ್ಕಿ ಕೊಲ್ಲುವುದಕ್ಕೂ ಪಾಪ ಪ್ರಜ್ಞೆ. ಹೀಗಾಗಿ ಕಾಡು ಪ್ರಾಣಿಗಳ ಉಪಟಳ ದೂರ ಮಾಡೋಕೆ ಮೇಷ್ಟ್ರು ಹೊಸತೊಂದು ಉಪಾಯ ಕಂಡುಕೊಂಡಿದ್ದಾರೆ. ಕಾಡು ಪ್ರಾಣಿ ಓಡಿಸಲು ಹಳ್ಳಿ ಮೇಸ್ಟ್ರು ಮಾಡಿದ ಐಡಿಯಾ ಫಲಕೊಟ್ಟಿದೆ.

ಮುಂಗಾರು ಹಂಗಾಮಿನ ರೈತರ ಬೆಳೆ ಸಮಿಕ್ಷೆ ಆ್ಯಪ್ ಬಿಡುಗಡೆ ಮುಂಗಾರು ಹಂಗಾಮಿನ ರೈತರ ಬೆಳೆ ಸಮಿಕ್ಷೆ ಆ್ಯಪ್ ಬಿಡುಗಡೆ

ಉಡುಪಿ ಜಿಲ್ಲೆಯ ಗಿಳಿಯಾರು‌ ನಿವಾಸಿ ಗೋವಿಂದ ರಾವ್, ಶಾಲೆಗೆ ಹೋದರೆ ಬಳಪ ಹಿಡಿಯುವ ಶಿಕ್ಷಕ. ಮನೆಯಲ್ಲಿದ್ದರೆ ತಲೆಗೆ ಮುಟ್ಟಾಲೆ ಇಟ್ಟು, ಪಂಚೆ ಬಿಗಿದು, ಬೆನ್ನು ಬಗ್ಗಿಸಿ ಕೆಲಸ ಮಾಡುವ ಕೃಷಿಕ. ಮಾಬುಕಳ ಹಂಗಾರಕಟ್ಟೆಯ ಚೇತನಾ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕರಾಗಿರುವ ಗೋವಿಂದ ರಾವ್ ಬಿಡುವು ಸಿಕ್ಕಾಗಲೆಲ್ಲ ತಮ್ಮ ಹೊಲದಲ್ಲಿ ಬೆವರು ಸುರಿಸುತ್ತಾರೆ.

ಬೆಳೆ ನಾಶ ಮಾಡುವ ಕಾಡುಹಂದಿ ಬೇಟೆಗೆ ಅನುಮತಿ ನೀಡಿದ ಹೈಕೋರ್ಟ್ ಬೆಳೆ ನಾಶ ಮಾಡುವ ಕಾಡುಹಂದಿ ಬೇಟೆಗೆ ಅನುಮತಿ ನೀಡಿದ ಹೈಕೋರ್ಟ್

ಭತ್ತದ ಕೃಷಿಯಲ್ಲಿ ಖುಷಿ ಕಾಣುತ್ತಾರೆ. ಆದರೆ ಬೆಳೆದ ಬೆಳೆ ಕಾಡು ಪ್ರಾಣಿಗಳ ಉಪಟಳದಿಂದ ಹಾಳಾಗಿ ಹೋಗುತ್ತಿತ್ತು. ಇದಕ್ಕಾಗಿ ಶಿಕ್ಷಕ ಗೋವಿಂದ ರಾವ್ ಹೊಸ ಉಪಾಯ ಕಂಡುಕೊಂಡಿದ್ದಾರೆ. ಪಟಾಕಿ, ಗುಂಡು ಅಂತಾ ಪ್ರಾಣಿಗಳಿಗೆ ಹಿಂಸೆ ನೀಡದೇ ಉಪಾಯದಿಂದ ಪ್ರಾಣಿ ಓಡಿಸುವ ಯೋಚನೆ ಮಾಡಿದ್ದಾರೆ.

 ವಿಶ್ವ ಪ್ರಾಣಿ ಕಲ್ಯಾಣ ದಿನ: ಇತಿಹಾಸ, ಮಹತ್ವ, ಉದ್ದೇಶದ ಬಗ್ಗೆ ಮಾಹಿತಿ ವಿಶ್ವ ಪ್ರಾಣಿ ಕಲ್ಯಾಣ ದಿನ: ಇತಿಹಾಸ, ಮಹತ್ವ, ಉದ್ದೇಶದ ಬಗ್ಗೆ ಮಾಹಿತಿ

ಏನಿದು ಮೇಷ್ಟ್ರು ಮಾಡಿದ ಉಪಾಯ

ಏನಿದು ಮೇಷ್ಟ್ರು ಮಾಡಿದ ಉಪಾಯ

ತೆಂಗಿನ ಮರದ ನಡುವೆ ದಾರ ಕಟ್ಟಿ ಅದರಕ್ಕೆ ಪ್ಲಾಸ್ಟಿಕ್ ಡಬ್ಬ ನೇತು ಹಾಕಿ, ರಾತ್ರಿ ವೇಳೆ ಎರಡು ಲೈಟ್‌ನ್ನು ಆನ್ ಮಾಡಿ ಡಬ್ಬದ ಒಳಗೆ ಇಡ್ತಾರೆ. ಅದು ಗಾಳಿಗೆ ಸುತ್ತಾ ತಿರುಗೋದರಿಂದ ಪ್ರಾಣಿಗಳು ಲೈಟ್ ಕಂಡು, ಯಾರೋ ಬಂದರು ಅಂತ ಗದ್ದೆಗೆ ಇಳಿಯುವ ಸಾಹಸ ಮಾಡೋದಿಲ್ಲ. ಇಷ್ಟೇ ಅಲ್ಲ ಇದರ ಜೊತೆ ಎರಡು ಸ್ಪೀಕರ್‌ನಲ್ಲಿ ಹುಲಿ, ಆನೆ, ಚಿರತೆ, ನಾಯಿ ಹೀಗೆ ವಿವಿಧ ಪ್ರಾಣಿಗಳ ಕೂಗುವ ಶಬ್ದವನ್ನು ಜೋರಾಗಿ ಇಡುತ್ತಾರೆ. ಇದರಿಂದ ಕಾಡು ಪ್ರಾಣಿಗಳ ಇವರ ಗದ್ದೆಗೆ ಇಳಿಯೋದೆ ಇಲ್ಲ.

ಅಪ್ಪನ ಉಪಾಯಕ್ಕೆ ಮಗನ ಸಾಥ್

ಅಪ್ಪನ ಉಪಾಯಕ್ಕೆ ಮಗನ ಸಾಥ್

ಗೋವಿಂದ ರಾವ್ ಹೊಸ ಉಪಾಯಕ್ಕೆ ಮಗ ಆಯುಷ್ಯನ ಸಾಥ್ ಇದೆ. ತಂದೆ ಜೊತೆ ರಾತ್ರಿ ವೇಳೆ ಗದ್ದೆಗೆ ತೆರಳಿ ಲೈಟ್, ಸ್ಪೀಕರ್ ಇಡೋಕೆ ಸಹಾಯ ಮಾಡುತ್ತಾನೆ. ಲೈಟ್, ಸ್ಪೀಕರ್ ಒಮ್ಮೆ ಚಾರ್ಜ್ ಮಾಡಿದ್ರೆ 8 ಗಂಟೆ ಬರುತ್ತದೆ. ಮಾರನೇ ದಿನ ಬೆಳಗ್ಗೆ ಮತ್ತೆ ಗದ್ದೆಗೆ ಹೋಗಿ ಲೈಟ್ ಮತ್ತು ಸ್ಪೀಕರ್‌ಗಳನ್ನು ಮನೆಗೆ ತಂದು ಅಯುಷ್ಯ್ ಚಾರ್ಜ್‌ಗೆ ಇಡುತ್ತಾನೆ.

ಕಾಡುಕೋಣ ಸೇರಿದಂತೆ ಪ್ರಾಣಿ ಕಾಟವಿಲ್ಲ

ಕಾಡುಕೋಣ ಸೇರಿದಂತೆ ಪ್ರಾಣಿ ಕಾಟವಿಲ್ಲ

ಮೇಷ್ಟ್ರು ಗೋವಿಂದ ರಾವ್ ಅವರ ಈ ವಿನೂತನ ಉಪಾಯದಿಂದ ಹೊಲದಲ್ಲಿ ಕಾಡುಪ್ರಾಣಿಗಳ ಉಪಟವಿಲ್ಲ. ಬೆಳೆ ಸಮೃದ್ಧವಾಗಿ ಬೆಳೆಯುತ್ತಿದೆ. ಕಾಡುಕೋಣ, ಕಾಡುಹಂದಿ, ಕಡವೆಗಳ ಕಾಟ ಈಗ ಬೆಳೆಗಳಿಗಿಲ್ಲ. ಹೀಗಾಗಿ ಮೇಷ್ಟ್ರೂ ನೆಮ್ಮದಿಯಲ್ಲಿ ರಾತ್ರಿ ಮನೆಯಲ್ಲಿ ಮಲಗುವಂತಾಗಿದೆ.

Recommended Video

ಚೀನಾ ಮತ್ತು ಭಾರತದ ನಡುವೆ ಯುದ್ಧವಾದ್ರೆ ಭಾರತ ಸೋಲೋದು ಗ್ಯಾರಂಟಿ!! | Oneindia Kannada
ಇತರ ಕೃಷಿಕರಿಗೆ ಮಾದರಿ

ಇತರ ಕೃಷಿಕರಿಗೆ ಮಾದರಿ

ಕಾಡಂಚಿನ ಗ್ರಾಮಗಳಲ್ಲಿ ಬೆಳೆಗಳನ್ನು ಪ್ರಾಣಿಗಳಿಂದ ಉಳಿಸಿಕೊಳ್ಳುವುದು ಎಷ್ಟು ಕಷ್ಟ ಎಂದು ಕೃಷಿಕರಿಗೆ ಗೊತ್ತು. ಪ್ರೌಢ ಶಾಲಾ ಶಿಕ್ಷಕ ಗೋವಿಂದ ರಾವ್ ಹೊಸ ಉಪಾಯ ಈಗ ಹಳ್ಳಿಯಲ್ಲಿ ಫೇಮಸ್ ಆಗಿದೆ. ಇತರೆ ಕೃಷಿಕರು ಇದನ್ನೇ ಅಳವಡಿಕೆ ಮಾಡಿಕೊಳ್ಳಲು ಪ್ಲಾನ್ ಮಾಡುತ್ತಿದ್ದಾರೆ. ನೀವು ಕೃಷಿಕರಾಗಿದ್ದರೆ ಕಾಡುಪ್ರಾಣಿ ಉಪಟಳದಿಂದ ಬೇಸತ್ತಿದ್ದರೆ ಇದನ್ನು ನೀವು ಒಮ್ಮೆ ಟ್ರೈ ಮಾಡಿ ನೋಡಿ.

English summary
Udupi district Giliyar village high school teacher Govind Rao unique idea to protect crops from wild animals.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X