ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಾವನ್ನು ಹಿಡಿಯುವ ಸರಳ ವಿಧಾನವನ್ನು ಲೈವ್ ತೋರಿಸಿಕೊಟ್ಟ ಪೇಜಾವರ ಶ್ರೀಗಳು

|
Google Oneindia Kannada News

ಉಡುಪಿ, ಜುಲೈ 30: ತಮ್ಮ ವಿಭಿನ್ನ ಅಭಿರುಚಿಗೆ ಹೆಸರಾಗಿರುವ ಉಡುಪಿಯ ಪೇಜಾವರ ಅಧೋಕ್ಷಜ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳು, ಸರಳವಾಗಿ ಹಾವನ್ನು ಹಿಡಿಯುವುದು ಹೇಗೆ ಎಂದು ತೋರಿಸಿಕೊಟ್ಟಿದ್ದಾರೆ.

Recommended Video

Online Class : ಹಳ್ಳಿ ಶಾಲೆಗೆ ಆನ್ ಲೈನ್ ಶಿಕ್ಷಣ ಅಸಾಧ್ಯ-ಅಸಂಭವ | Oneindia Kannada

ನೀಲಾವರ ಗೋಶಾಲಾ ಮಠದಲ್ಲಿ ಚಾತುರ್ಮಾಸ್ಯ ವೃತದಲ್ಲಿರುವ ಪೇಜಾವರ ಶ್ರೀಗಳು, ಸನ್ಯಾಸತ್ವ, ಧಾರ್ಮಿಕ ಚಟುವಟಿಕೆಯ ಜೊತೆಗೆ, ಕೃಷಿ, ಹೈನುಗಾರಿಕೆಯಲ್ಲೂ ತಮ್ಮನ್ನು ತೊಡಗಿಸಿಕೊಂಡವರು. ಈಗ, ಕಡ್ಡಿಯ ಮೂಲಕ, ಹಾವನ್ನು ಹಿಡಿಯುವುದು ಹೇಗೆ ಎಂದು ಶ್ರೀಗಳು ತೋರಿಸಿಕೊಟ್ಟಿದ್ದಾರೆ.

ಅಯೋಧ್ಯೆಯಲ್ಲಿ 300 ಕೋಟಿ ರೂ. ವೆಚ್ಚದ ರಾಮಮಂದಿರ ನಿರ್ಮಾಣ: ಪೇಜಾವರ ಶ್ರೀಅಯೋಧ್ಯೆಯಲ್ಲಿ 300 ಕೋಟಿ ರೂ. ವೆಚ್ಚದ ರಾಮಮಂದಿರ ನಿರ್ಮಾಣ: ಪೇಜಾವರ ಶ್ರೀ

ಸರಳವಾಗಿ ಮತ್ತು ಯಾವುದೇ ಅಪಾಯವಿಲ್ಲದೇ ಪರಕೆಯ ಕಡ್ಡಿಯಿಂದ, ಪ್ರಾತ್ಯಕ್ಷಿಕೆ ಮೂಲಕ, ಹಾವನ್ನು ಹಿಡಿದು, ಉರಗ ತಜ್ಞರೂ ನಾಚಿಸುವಂತೆ, ಪೇಜಾವರಶ್ರೀಗಳು ಎಲ್ಲರ ಹುಬ್ಬೇರಿಸಿದ್ದಾರೆ.

Udupi Pejawara Swamiji Live Explain: How To Catch The Snake Without Any Risk

ತೆಂಗಿನಕಾಯಿ ಪರಕೆಯ ಕಡ್ಡಿಯ ಕೊನೆಯ ಭಾಗವನ್ನು ಉರುಳಿನ ರೀತಿಯಲ್ಲಿ ಮಾಡಿ, ನಾಗರಹಾವಿನ ಹೆಡೆಯ ಭಾಗಕ್ಕೆ ಅದನ್ನು ಸುತ್ತಿ, ಲೀಲಾಜಾಲವಾಗಿ ಗೋಣಿಚೀಲಕ್ಕೆ ಹಾವನ್ನು, ಗಾಯವಾಗದಂತೆ, ಪೇಜಾವರ ಶ್ರೀಗಳು ತುಂಬಿಸಿದ್ದಾರೆ.

ನೀಲಾವರ ಗೋಶಾಲೆಯ ಪುಷ್ಕರಣಿಯ ಮೆಟ್ಟಿಲಗಳ ಮೇಲೆ ಹಾವು ಹರಿದಾಡುತ್ತಿತ್ತು. ಈ ಹಾವನ್ನು ಕಂಡ ಶ್ರೀಗಳು, ತೆಂಗಿನ ಹಸಿಗರಿಯನ್ನು ಸೀಳಿ, ಕಡ್ಡಿಯ ಕೊನೆಯ ಭಾಗವನ್ನು ಉರುಳಿನಂತೆ ಗಂಟು ಹಾಕಿ, ಹಾವನ್ನು ಚೀಲಕ್ಕೆ ತುಂಬಿಸಿದ್ದಾರೆ. ಶ್ರೀಗಳು ಹಾವು ಹಿಡಿಯುವ ವಿಡಿಯೋ ಈಗ ವೈರಲ್ ಆಗಿದೆ.

ರಾಮ ಮಂದಿರ ನಿರ್ಮಾಣ: ಭಕ್ತರಲ್ಲಿ ಪೇಜಾವರ ಶ್ರೀಗಳು ಮಾಡಿದ ಮನವಿರಾಮ ಮಂದಿರ ನಿರ್ಮಾಣ: ಭಕ್ತರಲ್ಲಿ ಪೇಜಾವರ ಶ್ರೀಗಳು ಮಾಡಿದ ಮನವಿ

ಒಂದು ತಿಂಗಳ ಹಿಂದೆ, ಅಡ್ಡಾಡುತ್ತಿದ್ದ ಹೆಬ್ಬಾವಿನ ಮರಿಯನ್ನು ಶ್ರೀಗಳು ರಕ್ಷಣೆ ಮಾಡಿದ್ದರು. ಹಾವಿನ ಮರಿಯನ್ನು ಹಿಡಿದು ಸಣ್ಣದೊಂದು ಪೈಪ್ ನಲ್ಲಿ ತುಂಬಿಸಿ, ನಂತರ ಅದನ್ನು ಮಠದ ತೋಟಕ್ಕೆ ಪೇಜಾವರ ಶ್ರೀಗಳು ತಂದು ಬಿಟ್ಟಿದ್ದರು.

English summary
Udupi Pejawara Swamiji Live Explain: How To Catch The Snake Without Any Risk.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X