ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಕುಮಾರ ಸ್ವಾಮೀಜಿಗಳ ನಿಕಟ ಸಂಬಂಧ ಸ್ಮರಿಸಿದ ಪೇಜಾವರ ಶ್ರೀ

|
Google Oneindia Kannada News

Recommended Video

Siddaganga Swamiji : ಸಿದ್ದಗಂಗಾ ಶ್ರೀಗಳಿಗೆ ಸಂತಾಪ ಸೂಚಿಸಿದ ಉಡುಪಿ ಮಠದ ಪೇಜಾವರ ತೀರ್ಥರು | Oneindia Kannada

ಉಡುಪಿ, ಜನವರಿ 21: ಸೋಮವಾರ ಲಿಂಗೈಕ್ಯರಾದ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರೊಂದಿಗೆ ವೈಯಕ್ತಿಕವಾಗಿ ನಿಕಟ ಸಂಪರ್ಕ ಹೊಂದಿದ್ದನ್ನು ಉಡುಪಿಯ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಸ್ಮರಿಸಿಕೊಂಡಿದ್ದಾರೆ.

ಸಿದ್ದಗಂಗಾ ಶ್ರೀಗಳ ಅಲುವಿಕೆಗೆ ಸಂತಾಪ ವ್ಯಕ್ತಪಡಿಸಿ ಅವರು ವಿಡಿಯೋದಲ್ಲಿ ದುಃಖ ಹಂಚಿಕೊಂಡಿದ್ದಾರೆ.

ಹುಟ್ಟಿದ ಊರಿನಿಂದ 25 ವರ್ಷ ದೂರವಿದ್ದ ಸಿದ್ದಗಂಗಾ ಸ್ವಾಮೀಜಿಹುಟ್ಟಿದ ಊರಿನಿಂದ 25 ವರ್ಷ ದೂರವಿದ್ದ ಸಿದ್ದಗಂಗಾ ಸ್ವಾಮೀಜಿ

'ಸಿದ್ದಗಂಗಾ ಮಠದ ಹಿರಿಯ ಯತಿಗಳಾದ ಶಿವಕುಮಾರ ಸ್ವಾಮೀಜಿ ಅವರ ಅಗಲುವಿಕೆಯಿಂದ ಎಲ್ಲ ಕನ್ನಡಿಗರಿಗೂ ಅತ್ಯಂತ ದುಃಖವಾಗಿದೆ. ಅವರು 110 ವರ್ಷ ಬದುಕಿದ್ದರು. ಅಷ್ಟು ವರ್ಷ ಅವರ ಸೇವೆ ದೊರಕಿದೆ. ಆದರೂ ಕನ್ನಡಿಗರಿಗೆ ತೃಪ್ತಿಯಿಲ್ಲ. ಅವರು ಇನ್ನೂ ಬದುಕಿರಬೇಕಿತ್ತು. ಜನರಿಗೆ ಅವರ ಮೇಲೆ ಇರುವ ಅಭಿಮಾನವಿದು. ಅಂತಹ ಸೇವೆಯನ್ನು ಅವರು ಮಾಡಿದ್ದಾರೆ. ಅವರ ಸೇವೆ ಅದ್ಭುತ. ಅವರ ಕಾರ್ಯ ಎಲ್ಲ ಮಠಾಧೀಶರಿಗೂ ಮಾದರಿ. ಅಂತಹ ಸೇವೆಯನ್ನು ಲಕ್ಷಾಂತರ ಮಕ್ಕಳಿಗೆ ಒದಗಿಸಿಕೊಟ್ಟಿದ್ದಾರೆ, ಅವರು ದೊಡ್ಡ ಕರ್ಮಯೋಗಿಗಳು' ಎಂದು ಪೇಜಾವರ ಶ್ರೀಗಳು ಸ್ಮರಿಸಿದ್ದಾರೆ.

udupi pejavara vishvesha Thirtha swamiji condolence for siddaganga Shivakumar swamijis death

ಮೂರು ಹೊತ್ತೂ ಬಹುಶಃ ಆಧ್ಯಾತ್ಮಿಕ ಸಾಧನೆ ಮತ್ತು ಸಾಮಾಜಿಕ ಸಾಧನೆ ಎರಡನ್ನೂ ಮಾಡಿಕೊಂಡು 110 ವರ್ಷ ಬದುಕಿದ್ದೇ ದೊಡ್ಡ ಪವಾಡ. ನಮಗೂ ಅವರಿಗೂ ಬಹಳ ವರ್ಷಗಳ ನಿಕಟ ಸಂಬಂಧ ಇತ್ತು. ಮೊದಲು ನಾನೇ ಅವರ ಸಾಧನೆಗಳನ್ನು ಕೇಳಿ ಸಿದ್ದಗಂಗಾ ಮಠಕ್ಕೆ ತೆರಳಿ ಅಲ್ಲಿನ ಚಟುವಟಿಕೆಗಳನ್ನು ಕಂಡು ಅವರನ್ನು ಭೇಟಿ ಮಾಡಿದ್ದೆ.

ತ್ರಿವಿಧ ದಾಸೋಹಿ ಶಿವಕುಮಾರ ಸ್ವಾಮೀಜಿಗಳ ಬದುಕಿನ ಹಾದಿತ್ರಿವಿಧ ದಾಸೋಹಿ ಶಿವಕುಮಾರ ಸ್ವಾಮೀಜಿಗಳ ಬದುಕಿನ ಹಾದಿ

ನಮ್ಮ ಮಠಕ್ಕೆ ಎರಡನೆಯ ಪರ್ಯಾಯದ ವೇಳೆಯಲ್ಲಿ ವಿಶ್ವ ಹಿಂದೂ ಪರಿಷತ್ ಕಾರ್ಯಕ್ರಮಕ್ಕೆ ಬಂದು ಭಾಗವಹಿಸಿದ್ದರು. ಉಡುಪಿಯ ಕೃಷ್ಣ ಮಠದ ಕಾರ್ಯಕ್ರಮದಲ್ಲಿ ಲಿಂಗಾಯತ ಸ್ವಾಮೀಜಿಗಳು ಭಾಗವಹಿಸಿದ್ದು ಅದೇ ಮೊದಲು.

ಹಿಂದಿನ ಸುತ್ತೂರು ಸ್ವಾಮೀಜಿಗಳ ಪರ್ಯಾಯದ ಅವಧಿಯಲ್ಲಿ ಬಂದಿದ್ದರು, ನಮಗೂ ಅವರಿಗೂ ಸಿದ್ದಗಂಗಾ ಮಠ, ಉಡುಪಿ ಹಾಗೂ ಬೇರೆಡೆ ವಿವಿಧ ಸಂದರ್ಭಗಳಲ್ಲಿ ಭೇಟಿಯಾಗಿದೆ. ನಮ್ಮ ಹಾಗೂ ಅವರ ನಡುವೆ ವಿಶೇಷ ನಿಕಟವಾದ ಸಂಬಂಧವಿತ್ತು. ವಿಶೇಷ ಪ್ರೀತಿ ಅಭಿಮಾನವೂ ಇತ್ತು. ಅದನ್ನೆಲ್ಲ ಸ್ಮರಿಸುತ್ತಿದ್ದೇವೆ. ಅವರು ಮಾಡಿದ ಸೇವೆಯನ್ನೂ ಕೂಡ ಸ್ಮರಿಸುತ್ತೇವೆ.

ಲಿಂಗೈಕ್ಯ 'ನಡೆದಾಡುವ ದೇವರು' ಶ್ರೀಗಳನ್ನು ಸ್ಮರಿಸಿದ ಟ್ವಿಟ್ಟಿಗರುಲಿಂಗೈಕ್ಯ 'ನಡೆದಾಡುವ ದೇವರು' ಶ್ರೀಗಳನ್ನು ಸ್ಮರಿಸಿದ ಟ್ವಿಟ್ಟಿಗರು

ನಮ್ಮನ್ನು ಅಗಲಿದರೂ ಅವರು ಮಾಡಿದ ಸೇವೆ ಎಲ್ಲ ಕನ್ನಡಿಗರೂ ಮಠಾಧಿಪತಿಗಳೂ ಮಾದರಿಯನ್ನಾಗಿ ಪಡೆಯಬೇಕು ಎನ್ನುತ್ತೇನೆ ಎಂದು ವಿಶ್ವೇಶ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

English summary
Udupi Pejavaar Mutt Vishvesha Thirtha Swamiji expressed his condolence for the sad demise of Siddaganga Shivakumara swamiji on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X