ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸೌದಿ ಅರೇಬಿಯಾದಲ್ಲಿ ಉಡುಪಿ ಮೂಲದ ನರ್ಸ್ ನಿಗೂಢ ಸಾವು

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಜುಲೈ.27: ಸೌದಿ ಅರೇಬಿಯಾದ ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿದ್ದ ಶಿರ್ವ ಮೂಲದ ಮಹಿಳೆ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಹೆಝಲ್ ಜೋತ್ಸ್ನಾ ಕ್ವಾಡ್ರಸ್ (28) ನಿಗೂಢವಾಗಿ ಮೃತಪಟ್ಟ ಮಹಿಳೆ. ಇವರು ಸೌದಿ ಅರೇಬಿಯಾದ ಆರೋಗ್ಯ ಇಲಾಖೆಯ ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿದ್ದರು.

ಕಳೆದ 6 ವರ್ಷಗಳಿಂದ ಹೆಝಲ್ ಅಲ್ ಮಿಕ್ವಾ ಜನರಲ್ ಎಂಬ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಅವರು, ಜುಲೈ.19ರಂದು ಊರಲ್ಲಿರುವ ಪತಿ ಅಶ್ವಿನ್ ಮಥಾಯಸ್ ಜೊತೆ ದೂರವಾಣಿಯಲ್ಲಿ ಮಾತನಾಡಿದ್ದರು.

ಕನ್ನಡಿಗರಿಗೆ ಉರುಳಾಗುತ್ತಿದೆ ಸೌದಿ ಯುವರಾಜನ ಸುಧಾರಣಾ ಕ್ರಮ!ಕನ್ನಡಿಗರಿಗೆ ಉರುಳಾಗುತ್ತಿದೆ ಸೌದಿ ಯುವರಾಜನ ಸುಧಾರಣಾ ಕ್ರಮ!

ಅದೇ ಕೊನೆ. ನಂತರ ಹೆಝಲ್ ಮನೆಯವರ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಅದಾಗಿ ಎರಡು ದಿನಗಳ ಬಳಿಕ ಅವರ ಸಹೋದ್ಯೋಗಿಯೊಬ್ಬರು ಮಹಿಳೆ ಸಾವನ್ನಪ್ಪಿದ ವಿಷಯವನ್ನು ಮನೆಯವರಿಗೆ ತಿಳಿಸಿದ್ದಾರೆ. ಆದರೆ ಈ ಸಾವು ಹೇಗೆ ಸಂಭವಿಸಿದೆ ಮತ್ತು ಯಾವಾಗ ಸಂಭವಿಸಿದೆ ಎಂಬ ಬಗ್ಗೆ ಪತಿ ಅಶ್ವಿನ್ ಗೂ ಮಾಹಿತಿ ಇಲ್ಲ.

Udupi origin nurse dies in Saudi Arabia

ಸೌದಿಯಲ್ಲಿ ವಾಸಿಸುತ್ತಿದ್ದ ಉತ್ತರ ಕನ್ನಡ ಜನ ಮರಳಿ ತವರಿಗೆ!ಸೌದಿಯಲ್ಲಿ ವಾಸಿಸುತ್ತಿದ್ದ ಉತ್ತರ ಕನ್ನಡ ಜನ ಮರಳಿ ತವರಿಗೆ!

ಈ ಸಂಬಂಧ ಅಶ್ವಿನ್, ಎಮ್ಮೆಲ್ಸಿ ಐವನ್ ಡಿಸೋಝಾ ಮತ್ತು ಉಡುಪಿ ಶಾಸಕ ರಘುಪತಿ ಭಟ್, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ರನ್ನು ಸಂಪರ್ಕಿಸಿದ್ದಾರೆ. ಉಡುಪಿ ಡಿಸಿ ಪ್ರಿಯಾಂಕಾ ಮೇರಿ ಅವರಿಗೂ ಮಾಹಿತಿ ನೀಡಲಾಗಿದ್ದು, ಮುಂದಿನ ಪ್ರಕ್ರಿಯೆಗೆ ಪ್ರಯತ್ನ ನಡೆಯುತ್ತಿದೆ.

English summary
Udupi origin nurse dies in Saudi Arabia. He was a nurse in a Saudi Arabia hospital. She was working in the Hazel al-Mikwa General hospital for the last 6 years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X