ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

30 ವರ್ಷಗಳ ನಂತರ ಉಡುಪಿಯಲ್ಲಿ ಮತ್ತೆ ಕಾಣಿಸಿಕೊಂಡ ಮಂಗನ ಕಾಯಿಲೆ

|
Google Oneindia Kannada News

ಉಡುಪಿ, ಜನವರಿ 11: ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ಮಂಗನ ಕಾಯಿಲೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಈ ನಡುವೆ ಮಲೆನಾಡಿನ ಅಂಚಿನಲ್ಲಿರುವ ಕರಾವಳಿ ಭಾಗಕ್ಕೂ ಮಂಗನಕಾಯಿಲೆ ಹಬ್ಬಿರುವ ಭೀತಿ ವ್ಯಕ್ತವಾಗಿದೆ.

ಶಿವಮೊಗ್ಗ ಜಿಲ್ಲೆಗೆ ತಾಗಿಕೊಂಡಿರುವ ಗ್ರಾಮಗಳಲ್ಲಿ ಮೃತ ಮಂಗಗಳ ಶವ ಪತ್ತೆಯಾಗಿದೆ. ಉಡುಪಿ ಜಿಲ್ಲೆಯ ಗಡಿ ಭಾಗವಾದ ಶಿರೂರಿನಲ್ಲಿ ಎರಡು ಮಂಗಗಳ ಶವ ಮತ್ತು ಶಿವಮೊಗ್ಗ ಜಿಲ್ಲೆಗೆ ತಾಗಿಕೊಂಡಿರುವ ಸಿದ್ದಾಪುರದಲ್ಲಿ ಒಂದು ಹೆಣ್ಣು ಮಂಗದ ಶವ ಪತ್ತೆಯಾಗಿದೆ. ಇದು ಸ್ಥಳೀಯ ಜನರಲ್ಲಿ ಆತಂಕ ಮೂಡಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಗೂ ಹಬ್ಬಿದ ಮಂಗನಕಾಯಿಲೆಯ ಭೀತಿದಕ್ಷಿಣ ಕನ್ನಡ ಜಿಲ್ಲೆಗೂ ಹಬ್ಬಿದ ಮಂಗನಕಾಯಿಲೆಯ ಭೀತಿ

ಶಿರೂರು ಮೇಲ್ಪಂಕ್ತಿ ಎಂಬಲ್ಲಿ ಎರಡು ಮಂಗಗಳ ಶವ ದೊರೆತಿದೆ. ಒಂದು ಶವ ಸಂಪೂರ್ಣ ಕೊಳೆತು ಹೋಗಿದ್ದು, ಇನ್ನೊಂದು ಕೋತಿಯ ದೇಹದ ಕೆಲವು ಭಾಗಗಳನ್ನು ಆರೋಗ್ಯಾಧಿಕಾರಿಗಳು ಸಂಗ್ರಹಿಸಿ ಹೆಚ್ಚಿನ ಪರೀಕ್ಷೆಗೆ ಶಿವಮೊಗ್ಗಕ್ಕೆ ಕಳುಹಿಸಿದ್ದಾರೆ.

Udupi is on high alert following the death of monkey

ಮಂಗನಕಾಯಿಲೆಗೆ ಕಾರಣಗಳು, ಮುಂಜಾಗ್ರತಾ ಕ್ರಮಗಳುಮಂಗನಕಾಯಿಲೆಗೆ ಕಾರಣಗಳು, ಮುಂಜಾಗ್ರತಾ ಕ್ರಮಗಳು

ಇನ್ನು ಸಿದ್ದಾಪುರದ ಜೆಎಂಜೆ ಗ್ಯಾರೇಜ್ ಪಕ್ಕದಲ್ಲಿ ನಾಲ್ಕು‌ ವರ್ಷ ಪ್ರಾಯದ ಹೆಣ್ಣು ಮಂಗವೊಂದು ಕಿವಿಯಲ್ಲಿ ರಕ್ತಸ್ರಾವವಾಗಿ ಮೃತಪಟ್ಟ ರೀತಿ ಪತ್ತೆಯಾಗಿತ್ತು. ಮಂಗನ ಶವವನ್ನು ಇಲಾಖೆಯ ಸಿಬ್ಬಂದಿ ತಪಾಸಣೆಗೆ ಬೇಕಾದ ಭಾಗಗಳನ್ನು ಸಂಗ್ರಹಿಸಿ, ಶಿವಮೊಗ್ಗದ ಲ್ಯಾಬ್ ಗೆ ಕಳುಹಿಸಿದ್ದಾರೆ. ಮರಣೋತ್ತರ ಪರೀಕ್ಷೆ ವರದಿ ಬಳಿಕ ಈ ಕುರಿತು ಸ್ಪಷ್ಟ ಮಾಹಿತಿ ಲಭ್ಯವಾಗಲಿದೆ. ಅಲ್ಲದೇ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತ ಮಂಗಗಳನ್ನು ದಹಿಸಲಾಗಿದೆ.

Udupi is on high alert following the death of monkey

ಉಜಿರೆಯಲ್ಲಿ ಮಂಗನ ಕಳೆಬರಹ ಪತ್ತೆ: ಹೆಚ್ಚಿತು ಮಂಗನ ಕಾಯಿಲೆ ಭೀತಿಉಜಿರೆಯಲ್ಲಿ ಮಂಗನ ಕಳೆಬರಹ ಪತ್ತೆ: ಹೆಚ್ಚಿತು ಮಂಗನ ಕಾಯಿಲೆ ಭೀತಿ

ಉಡುಪಿ ಜಿಲ್ಲೆಯ ಕೆಎಂಸಿ ಆಸ್ಪತ್ರೆಯಲ್ಲಿ 42 ಮಂಗನ ಕಾಯಿಲೆ ಶಂಕಿತ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದು, ಅದರಲ್ಲಿ 14 ಮಂದಿಗೆ ಕಾಯಿಲೆ ಇರುವುದು ದೃಢಪಟ್ಟಿದೆ. ಸುಮಾರು 1989 ರಲ್ಲಿ ಅಂದರೆ 30 ವರ್ಷಗಳ ಹಿಂದೆ ಉಡುಪಿ ಜಿಲ್ಲೆಯಲ್ಲಿ ಮಂಗನ‌ ಕಾಯಿಲೆ ಕಾಣಿಸಿಕೊಂಡಿತ್ತು.

English summary
Udupi is on high alert following the death of monkey.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X