ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಡಿಯೋ; ಹಿಜಾಬ್ ತೆಗೆಯೋಲ್ಲ ಹಠ ಹಿಡಿದ ಉಡುಪಿ ವಿದ್ಯಾರ್ಥಿನಿಯರು!

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಜನವರಿ 27; ಉಡುಪಿಯ ಸರ್ಕಾರಿ ಮಹಿಳಾ ಪದವಿಪೂರ್ವ ಕಾಲೇಜಿನ ಹಿಜಾಬ್ ವಿವಾದ ಮತ್ತೊಂದು ಹಂತಕ್ಕೆ ತಲುಪಿದೆ. ವಿದ್ಯಾರ್ಥಿನಿಯರ ಭವಿಷ್ಯದ ದೃಷ್ಟಿಯಿಂದ ಆನ್‌ಲೈನ್ ಕ್ಲಾಸ್ ನಡೆಸಿ, ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲು ಅಭಿವೃದ್ಧಿ ಮಂಡಳಿಯ ಅವಕಾಶ ಕಲ್ಪಿಸಿದೆ. ಆದರೆ ಮುಸ್ಲಿಂ ವಿದ್ಯಾರ್ಥಿನಿಯರು ಮಾತ್ರ ನಮಗೆ ಆನ್‌ಲೈನ್ ಕ್ಲಾಸ್‌ ಬೇಡ, ನಾವು ಹಿಜಾಬ್ ಧರಿಸಿಯೇ ತರಗತಿಗೆ ಹಾಜರಾಗಬೇಕೆಂದು ಪಟ್ಟು‌ ಹಿಡಿದಿದ್ದಾರೆ.

ಉಡುಪಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಹಿಜಾಬ್ ವಿವಾದ ಈಗ ಮತ್ತೊಂದು ಆಯಾಮ ಪಡೆದುಕೊಂಡಿದೆ. ಅತ್ತ 6 ಮಂದಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್‌ಗೆ ಅವಕಾಶ ಬೇಕೆ ಬೇಕು ಎಂದು ಹಠಕ್ಕೆ ಬಿದಿದ್ದಾರೆ. ಇತ್ತ ಕಾಲೇಜು ಅಭಿವೃದ್ಧಿ ಮಂಡಳಿ ಯಾವುದೇ ಕಾರಣಕ್ಕೂ ಪಾಠ ಮಾಡುವಾಗ ಹಿಜಾಬ್‌ ಧರಿಸುವುದಕ್ಕೆ ಅವಕಾಶ ಇಲ್ಲ ಅಂತ ಕಡ್ಡಿ ಮುರಿದ ಹಾಗೆ ಹೇಳಿದೆ.

ಹೀಗಾಗಿ ವಿವಾದ ಮತ್ತಷ್ಟು ಜಟಿಲವಾಗುತ್ತಿದೆ. ಇದೇ ವಿಚಾರವಾಗಿ ಮುಸ್ಲಿಂ ಮುಖಂಡ ಜಿ. ಎ. ಭಾವ ಜೊತೆ ಸಭೆ ನಡೆಸಿದ ಶಾಲಾ ಅಭಿವೃದ್ಧಿ ಮಂಡಳಿ ಅಧ್ಯಕ್ಷ, ಸ್ಥಳೀಯ ಶಾಸಕ ರಘಪತಿ ಭಟ್ ಹಿಜಾಬ್ ಬೇಕೆನ್ನುವ 6 ವಿದ್ಯಾರ್ಥಿನಿಯರಿಗೆ ಆನ್ ಲೈನ್ ಕ್ಲಾಸ್ ನಡೆಸುವ ತೀರ್ಮಾನ ಕೈಗೊಂಡಿದ್ದಾರೆ. ವಿದ್ಯಾರ್ಥಿನಿಯರ ಭವಿಷ್ಯದ ದೃಷ್ಟಿಯಿಂದ ದ್ವಿತೀಯ ಪಿಯುಸಿ ಮಹತ್ವದ ಘಟ್ಟವಾಗಿದ್ದು, ಹೀಗಾಗಿ ಆನ್‌ಲೈನ್ ಕ್ಲಾಸ್ ನಡೆಸಿ ಪರೀಕ್ಷೆಗೆ ಹಾಜರಾಗಲು ಅವಕಾಶ ಕಲ್ಪಿಸಲಾಗಿದೆ.

ಹಿಜಾಬ್ ಬೇಕೆನ್ನುವವರಿಗೆ ಶಾಸಕ ರಘುಪತಿ ‌ಭಟ್ ಸಲಹೆಹಿಜಾಬ್ ಬೇಕೆನ್ನುವವರಿಗೆ ಶಾಸಕ ರಘುಪತಿ ‌ಭಟ್ ಸಲಹೆ

Udupi Hijab Controversy Muslim Students Rejects Online Class Option

ಆದರೆ ಕ್ಲಾಸ್‌ನಲ್ಲಿ ಹಿಜಾಬ್ ಧರಿಸಿ ಪಾಠ ಕೇಳುದಕ್ಕೆ ಅವಕಾಶ ನೀಡಬೇಕು ಎನ್ನುವ ವಿದ್ಯಾರ್ಥಿನಿಯರು ಮಾತ್ರ ಆನ್‌ಲೈನ್ ಕ್ಲಾಸ್‌ಗೆ ಒಪ್ಪುತ್ತಿಲ್ಲ. ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ವಿದ್ಯಾರ್ಥಿನಿಯರು, ಶಾಲಾಭಿವೃದ್ಧಿ ಸಮಿತಿ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಹಿಜಾಬ್ ನಮ್ಮ ಸಂವಿಧಾನಾತ್ಮಕ ಹಕ್ಕು, ನಾವು ಹಿಜಾಬ್ ಹಾಕಿ ಕಾಲೇಜಿಗೆ ಹೋಗುತ್ತೇವೆ. ನಮಗೆ ಯಾವುದೇ ಆನ್‌ಲೈನ್ ಕ್ಲಾಸ್‌ಗಳು ಬೇಡ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಉಡುಪಿಯಲ್ಲಿ ಹಿಜಾಬ್ ವಿವಾದ; ಕಾಲೇಜು ವಿರುದ್ಧ ಪ್ರತಿಭಟನೆಗಿಳಿದ ವಿದ್ಯಾರ್ಥಿನಿಯರುಉಡುಪಿಯಲ್ಲಿ ಹಿಜಾಬ್ ವಿವಾದ; ಕಾಲೇಜು ವಿರುದ್ಧ ಪ್ರತಿಭಟನೆಗಿಳಿದ ವಿದ್ಯಾರ್ಥಿನಿಯರು

ಹಿಜಬ್ ಗಾಗಿ ಹೋರಾಟ‌ ನಡೆಸುತ್ತಿರುವ ಮುಸ್ಲಿಂ ವಿದ್ಯಾರ್ಥಿನಿಯರಾದ ಮುಸ್ಕಾನ್ ಹಾಗೂ ಆಲಿಯಾ ಆಕ್ಷೇಪ ವ್ಯಕ್ತಪಡಿಸಿದ್ದು, "ಆನ್‌ಲೈನ್ ಕ್ಲಾಸ್ ಹೆಸರಲ್ಲಿ ಮತ್ತೆ ತಾರತಮ್ಯ ಮಾಡಬೇಡಿ. ಸರಕಾರಿ ಕಾಲೇಜಿನಲ್ಲಿ ನಮಗೆ ನಮ್ಮ ಹಕ್ಕು ಸಿಗದಿದ್ದರೆ ನಾವು ಬೇರೆಡೆ ಅದನ್ನು ನಿರೀಕ್ಷಿಸಲು ಹೇಗೆ ಸಾಧ್ಯ?. ನಮ್ಮಲ್ಲಿ ವಿಜ್ಞಾನ ವಿಭಾಗ ವಿದ್ಯಾರ್ಥಿಗಳು ಇರುವುದರಿಂದ ನಮಗೆ ಆನ್‌ಲೈನ್ ಕ್ಲಾಸ್‌ನಲ್ಲಿ ಲ್ಯಾಬ್ ಅಟೆಂಡ್ ಮಾಡಲು ಆಗುವುದಿಲ್ಲ. ನಮಗೆ ಒಂದು ತಿಂಗಳ ತರಗತಿ ನಷ್ಟ ಆಗಿದೆ. ಕಾಲೇಜಿನ ಉಳಿದ ಮುಸಲ್ಮಾನ ವಿದ್ಯಾರ್ಥಿನಿಯರು ಹಿಜಬ್ ಧರಿಸಲು ಸಿದ್ಧರಿದ್ದಾರೆ. ಆದರೆ ನಮ್ಮ ಮೇಲೆ ನಡೆಯುತ್ತಿರುವ ದೌರ್ಜನ್ಯದಿಂದ ಅವರು ಭಯ ಗೊಂಡಿದ್ದಾರೆ" ಎಂದು ಹೇಳಿದ್ದಾರೆ.

ಕಾಲೇಜಿನಲ್ಲಿ ಸ್ಕಾರ್ಫ್ ಧರಿಸುವುದು ಅಶಿಸ್ತು; ಶಿಕ್ಷಣ ಸಚಿವ ಬಿ. ಸಿ. ನಾಗೇಶ್ಕಾಲೇಜಿನಲ್ಲಿ ಸ್ಕಾರ್ಫ್ ಧರಿಸುವುದು ಅಶಿಸ್ತು; ಶಿಕ್ಷಣ ಸಚಿವ ಬಿ. ಸಿ. ನಾಗೇಶ್

ಒಟ್ಟಿನ್ನಲ್ಲಿ ಉಡುಪಿ ಪದವಿ ಪೂರ್ವ ಕಾಲೇಜಿನ ಹಿಬಾಜ್ ವಿವಾದ ಬೇರೆ ಬೇರೆ ಆಯಾಮ ಪಡೆಯುತ್ತಿದೆ. ವಿವಾದ ತಣ್ಣಗಾಗದೇ ಹೆಚ್ಚುತ್ತಲೇ ಇರುವುದರಿಂದ ಇತರೆ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ ಸರ್ಕಾರ ಆದಷ್ಟು ಬೇಗ ಸ್ಪಷ್ಟ ತೀರ್ಮಾನ ಕೈಗೊಂಡು ವಿವಾದಕ್ಕೆ ಇತಿಶ್ರೀ ಹಾಡಬೇಕಿದೆ.

Recommended Video

ಕರ್ನಾಟಕದ ಐವರು ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿ ಗೌರವ | Oneindia Kannada

English summary
Udupi college Muslim students hijab controversy. Students rejected the online class option and demand for offline class and the said will attend class with hijab.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X