ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋರ್ಟ್ ಮೆಟ್ಟಿಲೇರಿದ ಹಾಜಿ ಅಬ್ದುಲ್ಲಾ ಆಸ್ಪತ್ರೆ ಖಾಸಗೀಕರಣ

ಉಡುಪಿ ನಗರದ ಹಾಜಿ ಅಬ್ದುಲ್ಲಾ ಆಸ್ಪತ್ರೆಯನ್ನು ರಾಜ್ಯ ಸರ್ಕಾರ 'ಅಭಿವೃದ್ಧಿ' ಹೆಸರಲ್ಲಿ ಅನಿವಾಸಿ ಉದ್ಯಮಿ ಬಿ.ಆರ್.ಶೆಟ್ಟಿಯವರಿಗೆ ಜಮೀನು ಸಹಿತ ನೀಡಿತ್ತು. ಇದರ ವಿರುದ್ಧ ಅಬ್ದುಲ್ಲಾ ವಂಶಸ್ಥರು ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ.

By ಶಂಶೀರ್ ಬುಡೋಳಿ
|
Google Oneindia Kannada News

ಉಡುಪಿ, ಮಾರ್ಚ್ 30: ಇಲ್ಲಿನ ಹಾಜಿ ಅಬ್ದುಲ್ಲಾ ಸ್ಮಾರಕ ಸರ್ಕಾರಿ ಮಹಿಳೆಯರ ಮತ್ತು ಮಕ್ಕಳ ಆಸ್ಪತ್ರೆ ಖಾಸಗೀಕರಣ ವಿವಾದ ಮತ್ತೊಂದು ತಿರುವು ಪಡೆದುಕೊಂಡಿದೆ.

ಉಡುಪಿ ನಗರದ ಹೃದಯ ಭಾಗವಾದ ಕವಿ ಮುದ್ದಣ ಮಾರ್ಗದಲ್ಲಿರುವ ಈ ಆಸ್ಪತ್ರೆಯನ್ನು ರಾಜ್ಯ ಸರ್ಕಾರ 'ಅಭಿವೃದ್ಧಿ' ಹೆಸರಲ್ಲಿ ಅನಿವಾಸಿ ಉದ್ಯಮಿ ಬಿ.ಆರ್.ಶೆಟ್ಟಿಯವರಿಗೆ ಜಮೀನು ಸಹಿತ ನೀಡಿತ್ತು. ಇದರ ವಿರುದ್ಧ ಹಾಜಿ ಅಬ್ದುಲ್ಲಾರ ವಂಶಸ್ಥರಾದ ಖುರ್ಷಿದ್ ಅಹಮ್ಮದ್ ಹಾಗೂ ಕೆಲ ಸಾರ್ವಜನಿಕರು ಉಡುಪಿಯ ಪ್ರಿನ್ಸಿಪಲ್ ಸಿವಿಲ್ ನ್ಯಾಯಾಲಯದಲ್ಲಿ ದಾವೆ ದಾಖಲಿಸಿದ್ದಾರೆ.[ಉಡುಪಿ ಜಿಲ್ಲಾಸ್ಪತ್ರೆಯ ಮಾನಸಿಕ ಅಸ್ವಸ್ಥ ಘಟಕಕ್ಕೆ ಬೇಕಿದೆ ಕಾಯಕಲ್ಪ]

ಖುರ್ಷಿದ್ ಅಹಮ್ಮದ್ ಹಾಗೂ ಸಾರ್ವಜನಿಕರು ಜಂಟಿಯಾಗಿ ಸಲ್ಲಿಸಿದ ದಾವೆಯ ಮೇಲೆ ವಕೀಲರ ವಾದವನ್ನು ಮಾರ್ಚ್ 27ರಂದು ಆಲಿಸಿದ ಪ್ರಿನ್ಸಿಪಲ್ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶೆ ಮಿಲನ , ಪ್ರಕರಣದ ವಿಚಾರಣೆಗೆ ಆದೇಶಿಸಿದ್ದಾರೆ. ನ್ಯಾಯಾಲಯದಿಂದ ಇನ್ನು ಕೆಲವೇ ದಿನಗಳಲ್ಲಿ ಸರಕಾರಕ್ಕೆ ಹಾಗೂ ಉದ್ಯಮಿ ಬಿ.ಆರ್.ಶೆಟ್ಟಿಯವರಿಗೆ ನೊಟೀಸ್ ಜಾರಿಯಾಗಲಿದೆ.

ಹಾಜಿ ಅಬ್ದುಲ್ಲಾರ ಆಸ್ಪತ್ರೆ

ಹಾಜಿ ಅಬ್ದುಲ್ಲಾರ ಆಸ್ಪತ್ರೆ

ಆಗರ್ಭ ಶ್ರೀಮಂತ, ಮಹಾದಾನಿಗಳೂ ಆಗಿದ್ದ ಹಾಜಿ ಅಬ್ದುಲ್ಲಾ ಸಾಹೇಬರು ಬಡವರಿಗಾಗಿ ಉಚಿತ ಚಿಕಿತ್ಸೆ ನೀಡಲು ಈ ಆಸ್ಪತ್ರೆ ನಿರ್ಮಿಸಿ ಭೂಮಿ ಸಹಿತ ಆಸ್ಪತ್ರೆ ಕಟ್ಟಡವನ್ನು ಅಂದಿನ ಮದ್ರಾಸ್ ಸರಕಾರಕ್ಕೆ ದಾನ ಮಾಡಿದ್ದರು. ಈ ಸಂದರ್ಭದಲ್ಲಿ ಉಡುಪಿ ತಾಲೂಕು ಬೋರ್ಡ್ ಮತ್ತು ಮದ್ರಾಸ್ ಸರಕಾರದ ಮಧ್ಯೆ ಒಂದು ಒಪ್ಪಂದ (ಇಂಡೆಂಚರ್) ಆಗಿತ್ತು.[ಉಡುಪಿ ಜಿಲ್ಲೆಯಲ್ಲಿ ಅಂಗವಿಕಲರ ಕಷ್ಟಗಳನ್ನು ಕೇಳೋರೇ ಇಲ್ಲವಾ?]

ಒಪ್ಪಂದ ಉಲ್ಲಂಘನೆ

ಒಪ್ಪಂದ ಉಲ್ಲಂಘನೆ

ಪ್ರಸ್ತುತ ರಾಜ್ಯ ಸರಕಾರ ಬಿ.ಆರ್.ಶೆಟ್ಟಿಯವರಿಗೆ ಜಮೀನು ಸಹಿತ ಆಸ್ಪತ್ರೆಯನ್ನು ಹಸ್ತಾಂತರಿಸುವ ಪ್ರಕ್ರಿಯೆಯಲ್ಲಿ ಈ ಮೂಲ ಒಪ್ಪಂದವನ್ನು ಕಡೆಗಣಿಸಲಾಗಿದೆ ಮತ್ತು ಉಲ್ಲಂಘಿಸಲಾಗಿದೆ ಎಂದು ದಾವೆಯಲ್ಲಿ ಉದಾಹರಣೆ ಮತ್ತು ದಾಖಲೆ ಸಹಿತ ವಾದಿಸಲಾಗಿದೆ.

ಒಪ್ಪಂದದ ಉಲ್ಲಂಘನೆ ಹೇಗೆ?

ಒಪ್ಪಂದದ ಉಲ್ಲಂಘನೆ ಹೇಗೆ?

ಮೂಲ ಒಪ್ಪಂದದ ಪ್ರಕಾರ ಆಸ್ಪತ್ರೆಯ ಹೆಸರನ್ನು ಬದಲಾಯಿಸುವಂತಿಲ್ಲ. ಹೊಸ ಕಟ್ಟಡವನ್ನು ಜಮೀನಿನ ಬೇರೆ ಸ್ಥಳದಲ್ಲಿ ನಿರ್ಮಿಸುವಂತಿಲ್ಲ. ವಾಣಿಜ್ಯ ಉದ್ದೇಶಕ್ಕೆ ಉಪಯೋಗಿಸಲು ಅವಕಾಶವೇ ಇಲ್ಲ. ಆದರೆ ಬಿ.ಆರ್.ಶೆಟ್ಟಿಯವರು ಈಗಾಗಲೇ ಆಸ್ಪತ್ರೆಗೆ ತಮ್ಮ ತಾಯಿಯ ಹೆಸರನ್ನಿಟ್ಟಿದ್ದಾರೆ. ಸದ್ಯ ನಿರ್ಮಿಸಲಿರುವ ಆಸ್ಪತ್ರೆ ಕಟ್ಟಡದಲ್ಲಿ 400 ಬೆಡ್ ನ ಆಸ್ಪತ್ರೆಯನ್ನು ವಾಣಿಜ್ಯ ಉದ್ಧೇಶಕ್ಕೆ ಉಪಯೋಗಿಸಲಾಗುವುದೆಂದು ಶೆಟ್ಟಿಯವರು ಘೋಷಿಸಿದ್ದಾರೆ.

ಬೇರೆಡೆ ಆಸ್ಪತ್ರೆ ಕಟ್ಟಡ

ಬೇರೆಡೆ ಆಸ್ಪತ್ರೆ ಕಟ್ಟಡ

ಇಷ್ಟೇ ಅಲ್ಲ, ಆಸ್ಪತ್ರೆ ಕಟ್ಟಡವನ್ನು ಪ್ರಸ್ತುತ ಆಸ್ಪತ್ರೆ ಇರುವ ಸ್ಥಳಕ್ಕಿಂತ ಹೊರತಾದ ಪ್ರತ್ಯೇಕ ಸ್ಥಳದಲ್ಲಿ ನಿರ್ಮಿಸುತ್ತಿದ್ದಾರೆ. ಈ ಎಲ್ಲಾ ಅಂಶಗಳನ್ನು ಮುಂದಿರಿಸಿಕೊಂಡು ಹಾಜಿ ಅಬ್ದುಲ್ಲಾ ಸಾಹೇಬರ ವಂಶಸ್ಥರಾದ ಖುರ್ಷಿದ್ ಹಾಗೂ ಇತರರು ನ್ಯಾಯಾಲಯದಲ್ಲಿ ದಾವೆ ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹಾಜಿ ಅಬ್ದುಲ್ಲಾ ವಂಶಸ್ಥರು

ಹಾಜಿ ಅಬ್ದುಲ್ಲಾ ವಂಶಸ್ಥರು

ಖುರ್ಷಿದ್ ರ ಪರವಾಗಿ ಉಡುಪಿಯ ಖ್ಯಾತ ನ್ಯಾಯವಾದಿ ಎನ್.ಕೃಷ್ಣಯ್ಯ ಆಚಾರ್ಯ ವಾದಿಸಿದ್ದಾರೆ. ಖುರ್ಷಿದ್ , ಹಾಜಿ ಅಬ್ದುಲ್ಲ ಸಾಹೇಬರ ವಂಶಸ್ಥರ ಪೈಕಿ ಪ್ರಸ್ತುತ ಇರುವವರಲ್ಲಿ ಅತ್ಯಂತ ಹಿರಿಯರು. ಹಾಜಿ ಅಬ್ದುಲ್ಲಾರವರ ಜೀವನ ಸಾಧನೆಯನ್ನು ಬಿಂಬಿಸುವ ಪುಸ್ತಕವನ್ನು ಸಹ ಇವರು ಪ್ರಕಟಿಸಿ ಇನ್ನಷ್ಟು ಮಾಹಿತಿಯನ್ನ ಜನರಿಗೆ ಪರಿಚಯಿಸಿದ್ದಾರೆ.

English summary
Haaji Abdullah family members filed a complaint against Karnataka government and Dr. B R Shetty regarding the transfer of controversial Haaji Abdullah Memorial Child and Women Hospital, Udupi to private person.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X