ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಡುಪಿ ಮೇಲ್ಸೇತುವೆಗೆ ಪೇಜಾವರರ ಹೆಸರು ನಾಮಕರಣ

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಜೂನ್ 6: ಬೆಂಗಳೂರಿನ ಯಲಹಂಕ ಮೇಲ್ಸೇತುವೆ ನಾಮಕರಣ ಜಟಾಪಟಿಗೆ ಕಾರಣವಾಗಿದೆ. ಅದರ ನಡುವೆ ಉಡುಪಿಯಲ್ಲಿಯೂ ಮೇಲ್ಸೇತುವೆಗಳಿಗೆ ನಾಮಕರಣ ಮಾಡಲಾಗಿದ್ದು, ಚರ್ಚೆಗೆ ಕಾರಣವಾಗಿದೆ.

Recommended Video

ನಿಷಿದ್ಧ ಪದ ಬಳಕೆ ಮಾಡಿ ವಿವಾದಕ್ಕೆ ಸಿಲುಕಿದ ಯುವರಾಜ್ ಸಿಂಗ್ | Oneindia Kannada

ಉಡುಪಿಯ ಕರಾವಳಿ ಬೈಪಾಸ್ ಮೇಲ್ಸೇತುವೆಗೆ ಪೇಜಾವರ ಶ್ರೀಗಳ ಹೆಸರು ನಾಮಕರಣ ಮಾಡಲಾಗಿದೆ. ಉಡುಪಿಯ ರಾಷ್ಟ್ರೀಯ ಹೆದ್ದಾರಿ 66ರ ಕರಾವಳಿ ಬೈಪಾಸ್ ಬಳಿ ಈ ಮೇಲ್ಸೇತುವೆ ಇದೆ. ಇಂದು ಸಂಜೆ ಹೊತ್ತಿಗೆ ಮೇಲ್ಸೇತುವೆ ಮೇಲೆ ಪೇಜಾವರ ವಿಶ್ವೇಶ್ವ ತೀರ್ಥ ಮೇಲ್ಸೇತುವೆ ಎಂಬ ಬೋರ್ಡು ಪ್ರತ್ಯಕ್ಷವಾಗಿದೆ.

Udupi Flyover Named As Pejavara Shree Vishwesha Tirtha

ಮಂಗಳೂರಿನಲ್ಲಿ ರಾಣಿ ಅಬ್ಬಕ್ಕ ಕೋಟಿ-ಚೆನ್ನಯ ಮೊದಲಾದ ಹೆಸರುಗಳನ್ನು ಸೇತುವೆಗಳಿಗೆ ಇಡಲಾಗಿತ್ತು. ಬೆಂಗಳೂರಿನ ಯಲಹಂಕ ಸೇತುವೆ ವಿವಾದದ ಬಳಿಕ ಅಲ್ಲಲ್ಲಿ ಕಂಡು ಬರುತ್ತಿರುವ ವಿದ್ಯಮಾನ ಇದಾಗಿದೆ.

ಉಡುಪಿ ಜಿಲ್ಲೆಯ ಜನರಲ್ಲಿ ಇದು ಅಚ್ಚರಿ ಮೂಡಿಸಿದ್ದು, ಬಲಪಂಥೀಯ ಸಂಘಟನೆಯ ಕಾರ್ಯಕರ್ತರು ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.

English summary
After yelahanka flyover controversy, Udupi flyover named as Pejavara Shree Vishwesha Tirtha flyover.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X