ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೀನುಗಾರಿಕಾ ದೋಣಿ ನಾಪತ್ತೆ : ಪ್ರಮೋದ್ ಮಧ್ವರಾಜ್ ಸ್ಫೋಟಕ ಮಾಹಿತಿ

|
Google Oneindia Kannada News

ಉಡುಪಿ, ಮೇ 03 : ಸುವರ್ಣ ತ್ರಿಭುಜ ದೋಣಿ ನಾಪತ್ತೆ ಪ್ರಕರಣದ ವಿಚಾರದಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಸ್ಫೋಟಕ ಮಾಹಿತಿ ನೀಡಿದ್ದಾರೆ. ನಾಪತ್ತೆ ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದ್ದಾರೆ.

ಮೀನುಗಾರಿಕಾ ಇಲಾಖೆಯ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಈ ಕುರಿತು ಫೇಸ್‌ಬುಕ್‌ನಲ್ಲಿ ಸ್ಟೇಟಸ್ ಹಾಕಿದ್ದಾರೆ. ದೋಣಿ ದುರಂತಕ್ಕೆ ಭಾರತೀಯ ನೌಕಾಪಡೆಯ ಯುದ್ಧ ನೌಕೆ ಕಾರಣ ಎಂದು ಅವರು ಆರೋಪ ಮಾಡಿದ್ದಾರೆ.

ನೌಕಾಪಡೆಯೇ 7 ಮಂದಿ ಮೀನುಗಾರರನ್ನು ಕೊಂದಿದೆ:ಪ್ರಮೋದ್ ಮಧ್ವರಾಜ್ನೌಕಾಪಡೆಯೇ 7 ಮಂದಿ ಮೀನುಗಾರರನ್ನು ಕೊಂದಿದೆ:ಪ್ರಮೋದ್ ಮಧ್ವರಾಜ್

ಲೋಕಸಭಾ ಚುನಾವಣೆಗೂ ಮೊದಲೇ ಈ ಬಗ್ಗೆ ಮೀನುಗಾರರಿಗೆ ಮಾಹಿತಿ ಸಿಕ್ಕಿದ್ದರೂ ಅದನ್ನು ಕೇಂದ್ರ ರಕ್ಷಣಾ ಇಲಾಖೆ ಮತ್ತು ಬಿಜೆಪಿ ನಾಯಕರು ರಾಜಕೀಯ ಲಾಭಕ್ಕಾಗಿ ಮರೆಮಾಚಿ, ಗೌಪ್ಯವಾಗಿ ಇಡುವ ಪ್ರಯತ್ನ ಮಾಡಲಾಗಿತ್ತು ಎಂದು ದೂರಿದ್ದಾರೆ.

Udupi fishing boat missing : Pramod Madhwaraj demands for judicial probe

ದೇಶದ ಪ್ರಧಾನಮಂತ್ರಿಯವರು ತಕ್ಷಣ ಈ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶಿಸಬೇಕಾಗಿ ಕರಾವಳಿಯ ಸಮಸ್ತ ಮೀನುಗಾರರು ಮತ್ತು ಅವರ ಕುಟುಂಬದ ಪರವಾಗಿ ಆಗ್ರಹ ಮಾಡುತ್ತಿದ್ದೇನೆ ಎಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

ಪತ್ತೆಯಾಗದ ಬೋಟ್: ಮೀನುಗಾರರು ಎಲ್ಲಿಗೆ ಹೋದರು?ಪತ್ತೆಯಾಗದ ಬೋಟ್: ಮೀನುಗಾರರು ಎಲ್ಲಿಗೆ ಹೋದರು?

ಬಿಜೆಪಿ ನಾಯಕರಿಗೆ ಮತ್ತು ಕೇಂದ್ರ ಸರಕಾರಕ್ಕೆ ತಾಕತ್ತಿದ್ದರೆ ಸುಪ್ರೀಂ ಕೊರ್ಟ್ ನಿವೃತ್ತ ನ್ಯಾಯಾಧೀಶರ ನೇತೃತ್ವದ ನ್ಯಾಯಾಂಗ ತನಿಖೆಗೆ ಒಪ್ಪಿಸಿ ಈ ವಿಚಾರದ ಸತ್ಯಾಸತ್ಯಗಳನ್ನು ಬಹಿರಂಗಪಡಿಸಬೇಕಾಗಿ ನಾನು ಆಗ್ರಹಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

ಫೇಸ್‌ಬುಕ್ ಪೋಸ್ಟ್

English summary
Karnataka former fishing minister Pramod Madhwaraj demand for judicial probe on Udupi fishing boat missing case. Missing Suvarna Tribhuja boat found after four-and-half months.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X