ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೀನುಗಾರರ ನಾಪತ್ತೆ ಪ್ರಕರಣ:ಸಿಎಂ ಮನೆ ಮುಂದೆ ಪ್ರತಿಭಟನೆಗೆ ನಿರ್ಧರಿಸಿದ ಮೀನುಗಾರರು

|
Google Oneindia Kannada News

ಉಡುಪಿ ಫೆಬ್ರವರಿ 27: ಮೀನುಗಾರರ ನಾಪತ್ತೆ ಪ್ರಕರಣ ಇನ್ನೂ ನಿಗೂಢವಾಗಿದೆ. ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ 7 ಜನ ಮೀನುಗಾರರು ನಾಪತ್ತೆಯಾಗಿ ಎರಡು ತಿಂಗಳು ಕಳೆದಿದ್ದರೂ ಇದುವರೆಗೆ ಮೀನುಗಾರರ ಸುಳಿವಾಗಲಿ, ಕಣ್ಮರೆಯಾಗಿರುವ ಸುವರ್ಣ ತ್ರಿಭುಜ ಬೋಟ್ ಬಗ್ಗೆಯಾಗಲಿ ಒಂದೇ ಒಂದು ಕುರುಹು ಪತ್ತೆಯಾಗಿಲ್ಲ.

ಅತ್ತ ಕಾಣೆಯಾದ 7 ಮಂದಿ ಮೀನುಗಾರರ ಮನೆಯವರು ಆತಂಕದಲ್ಲಿ ದಿನ ಕಳೆಯುತ್ತಿದ್ದಾರೆ. ಮೀನುಗಾರರ ನಾಪತ್ತೆ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿರುವ ಮೀನುಗಾರರು ಮುಖ್ಯಮಂತ್ರಿ ಅವರ ಮನೆಯ ಮುಂದೆ ಧರಣಿ ನಡೆಸಲು ಮುಂದಾಗಿದ್ದಾರೆ.

ನಿರ್ಮಲಾ ಸೀತಾರಾಮನ್ ಸಹಾಯ ಕೋರಿದ ಉಡುಪಿ ಮೀನುಗಾರರುನಿರ್ಮಲಾ ಸೀತಾರಾಮನ್ ಸಹಾಯ ಕೋರಿದ ಉಡುಪಿ ಮೀನುಗಾರರು

ಆಳ ಸಮುದ್ರದಲ್ಲಿ ನೌಕಾಪಡೆಯ ಹಡಗು 7 ಮಂದಿ ಮೀನುಗಾರರಿದ್ದ ಸುವರ್ಣ ತ್ರಿಭುಜ ಬೋಟ್ ಗೆ ಡಿಕ್ಕಿ ಹೊಡೆದಿದತ್ತು ಎಂದು ಅನುಮಾನಿಸಲಾಗಿತ್ತು. ಈ ವಿಚಾರದಲ್ಲಿ ತನಿಖೆ ನಡೆಸಿ ಯಾವುದೇ ನಿರ್ಣಾಯಕ ಹಂತಕ್ಕೆ ಬರಲು ಸಾಧ್ಯವಾಗಿಲ್ಲ.

Udupi fishermen decided to stage protest in front of CM,s resident

ಅಪಘಾತ ನಡೆದಿರುವ ಶಂಕೆಯಿಂದ ಸಮುದ್ರದ 60 ಮೀಟರ್ ಆಳದಲ್ಲಿ ಪರಿಶೀಲನೆ ನಡೆಸಿದಾಗ 23 ಅಡಿ ಉದ್ದದ ಕಬ್ಬಿಣದ ತುಂಡಿನ ಮಾದರಿ ಸಿಕ್ಕಿತ್ತು. ಸಟ್ಲೇಜ್ ಹಾಗೂ ನಿರೀಕ್ಷಕ್ ಎಂಬ ನೌಕಾಸೇನೆಯ ಎರಡು ಹಡಗುಗಳು ಈ ಭಾಗದಲ್ಲಿ ಪರಿಶೀಲನೆ ನಡೆಸಿದ್ದವು.

 ನಾಪತ್ತೆಯಾಗಿರುವ ಮೀನುಗಾರರ ಮೊಬೈಲ್ 46 ದಿನಗಳ ಬಳಿಕ ರಿಂಗಣಿಸಿತೆ? ನಾಪತ್ತೆಯಾಗಿರುವ ಮೀನುಗಾರರ ಮೊಬೈಲ್ 46 ದಿನಗಳ ಬಳಿಕ ರಿಂಗಣಿಸಿತೆ?

ಮೀನುಗಾರರು ನಾಪತ್ತೆಯಾಗಿ 64 ದಿನಗಳ ನಂತರವೂ ಕುರುಹು ಸಿಕ್ಕಿಲ್ಲ. ಮೀನುಗಾರರ ನಾಪತ್ತೆ ಪ್ರಕರಣ ತಾರ್ಕಿಕ ಅಂತ್ಯಕ್ಕೆ ಬಂದಿಲ್ಲ. ಮೀನುಗಾರರು ರಸ್ತೆಗಿಳಿದು ಪ್ರತಿಭಟಿಸಿದರೂ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ.

 ಹೈಡ್ರೊಗ್ರಾಫಿಕ್ಸ್ ಮೂಲಕ ಮುಂದುವರೆದ ನಾಪತ್ತೆಯಾದ ಮೀನುಗಾರರ ಪತ್ತೆ ಕಾರ್ಯಾಚರಣೆ ಹೈಡ್ರೊಗ್ರಾಫಿಕ್ಸ್ ಮೂಲಕ ಮುಂದುವರೆದ ನಾಪತ್ತೆಯಾದ ಮೀನುಗಾರರ ಪತ್ತೆ ಕಾರ್ಯಾಚರಣೆ

ಅಲ್ಲದೇ ಮೀನುಗಾರರನ್ನು ಹುಡುಕಿ ಕೊಡುವ ಭರವಸೆ ನೀಡಿದ ರಾಜಕೀಯ ನಾಯಕರೇ ಈಗ ಕಾಣೆಯಾಗಿದ್ದಾರೆ. ಇಲ್ಲೇ ಇದ್ದು ಸಮಸ್ಯೆ ಬಗೆಹರಿಸಿಕೊಡುವುದಾಗಿ ಹೇಳಿದ್ದ ಉಸ್ತುವಾರಿ ಸಚಿವೆ ಜಯಮಾಲಾ ಇತ್ತ ಮುಖವೇ ಹಾಕಿಲ್ಲ. ಮೀನುಗಾರಿಕಾ ಸಚಿವ ವೆಂಕಟರಾವ್ ನಾಡಗೌಡ ಎಲ್ಲಿದ್ದಾರೋ ಗೊತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ನಡುವೆ ಮೀನುಗಾರರು ಸಿಎಂ ಮನೆಯ ಮುಂದೆ ಧರಣಿ ಮಾಡಲು ತೀರ್ಮಾನಿಸಿದ್ದಾರೆ.

English summary
Search operation of missing fishermen of Malpe continued.Mean while Udupi fishermen decided to stage protest in front of CM,s resident for trace missing fishermen.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X