ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಡುಪಿ: ಜೋಡಿಕೊಲೆ ಪ್ರಕರಣ ಭೇದಿಸಿದ ಪೊಲೀಸರು, ಆರೋಪಿ ಬಂಧನ

|
Google Oneindia Kannada News

ಉಡುಪಿ, ಮೇ 13: ಜಿಲ್ಲೆಯನ್ನು ಸಂಚಲನ ಮೂಡಿಸಿದ್ದ ಹತ್ತು ವರ್ಷದ ಹೆಣ್ಣು ಮಗಳು ಮತ್ತು ತಾಯಿಯನ್ನು ಕೊಲೆಗೈದ ಆರೋಪಿಯನ್ನು 48 ಗಂಟೆಯೊಳಗೆ ಪೋಲಿಸರು ಬಂಧಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಬೊಮ್ಮನಕಟ್ಟೆ ನಿವಾಸಿ ಹರೀಶ್ ಯಾನೆ ಗಣೇಶ್(29) ಬಂಧಿತ ಆರೋಪಿ.

ಆರೋಪಿಯು ಮೃತ ಚೆಲುವಿನ ದೂರದ ಸಂಬಂಧಿ. ವಿವಾಹಿತನಾದ ಈತನಿಗೆ ಇಬ್ಬರು ಮಕ್ಕಳೂ ಇರುತ್ತಾರೆ. ಗಂಡನಿಂದ ದೂರವಾಗಿದ್ದ ಚೆಲುವೆಯನ್ನು ಉಪಯೋಗಿಸಿಕೊಂಡು ಆಗಾಗ್ಗೆ ಆಕೆಯ ಮನೆಗೆ ಹೋಗಿಬರುತ್ತಿರುತ್ತಾನೆ. ಮದುವೆ ಆಗಬೇಕೆಂದು ಒತ್ತಾಯಿಸುತ್ತಿರುತ್ತಾನೆ.

ಇದೇ ವೇಳೆ, ಚೆಲುವಿ ಬೇರೆ ಗಂಡಸರೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಿರುತ್ತಾಳೆ ಎಂದು ಹರೀಶನಿಗೆ ಸಂಶಯ ಬರುತ್ತದೆ. ಮೇ 8ರಂದು ರಾತ್ರಿ ಚೆಲುವಿಯ ಮನೆಗೆ ಹೋಗುತ್ತಾನೆ. ಊಟ ಮಾಡಿ ಮಲಗಿದ ಬಳಿಕ ಚೆಲುವಿ ಜೊತೆ ಜಗಳ ಮಾಡಿದ್ದಾನೆ. ಬೇರೆ ಗಂಡಸರ ಜೊತೆ ಫೋನ್‌ನಲ್ಲಿ ಮಾತನಾಡುವ ವಿಚಾರವನ್ನು ಎತ್ತಿ ತಗಾದೆ ತೆಗೆದಿದ್ದಾನೆ.

 Udupi double murder case: Police arrest accused

ನಂತರ ಚೆಲುವಿ ಮಲಗಿದ್ದಾಗ ಶಾಲಿನಿಂದ ಕುತ್ತಿಗೆಗೆ ಬಿಗಿದು ಕೊಲೆ ಮಾಡಿದ್ದು ನಂತರ ನಿದ್ರೆಯಲ್ಲಿದ್ದ ಮಗಳು ತನ್ನ ವಿರುದ್ಧ ಸಾಕ್ಷಿ ಹೇಳಬಹುದೆಂದು ಅವಳನ್ನು ಕೂಡಾ ಶಾಲಿನಿಂದ ಕುತ್ತಿಗೆಗೆ ಬಿಗಿದು ಕೊಲೆ ಮಾಡಿರುತ್ತಾರೆ. ಕೊಲೆ ಮಾಡಿದ ನಂತರ ಚೆಲುವಿಯ ಕುತ್ತಿಗೆಯಲ್ಲಿದ್ದ ಸುಮಾರು 50,000 ರು ಮೌಲ್ಯದ ಚಿನ್ನದ ಸರ ಹಾಗೂ ಮೃತಳು ಉಪಯೋಗಿಸುತ್ತಿದ್ದ OPPO ಮೊಬೈಲ್‌ ಪೋನ್‌ನ್ನು ಸುಲಿಗೆ ಮಾಡಿಕೊಂಡು ಹೋಗಿರುತ್ತಾರೆ.

ಪ್ರಕರಣದ ತನಿಖಾಧಿಕಾರಿಯವರಾದ ಬ್ರಹ್ಮಾವರ ವೃತ್ತ ನಿರೀಕ್ಷಕರಾದ ಅನಂತ ಪದ್ಮನಾಭ ರವರ ನೇತೃತ್ವದಲ್ಲಿ ಪಿಎಸ್ಐ ರವರಾದ ಅನಿಲ್ ಬಿ ಮಾದರ, ಮಧು ಬಿ.ಇ, ಪ್ರೊಬೆಷನರಿ ಪಿಎಸ್ಐ ರವರಾದ ಮಂಜುನಾಥ ಮರಬದ, ರವಿ ಬಿ ಕಾರಗಿ ಸಿಬ್ಬಂದಿಯವರಾದ ರಾಘವೇಂದ್ರ ಮತ್ತು ನಿತಿನ್ ರವರ ವಿಶೇಷ ತಂಡವು ಪ್ರಕರಣ ದಾಖಲಾಗಿ 48 ಗಂಟೆಯೊಳಗಾಗಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

English summary
Udupi Police have arrested a man accused of murdering a woman and her 10-year-old daughter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X