ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋವಿಡ್ ಕರ್ಪ್ಯೂ; ಉಡುಪಿಯಲ್ಲಿ 354 ಸರಳ ಮದುವೆ!

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಏಪ್ರಿಲ್ 25; ಕೋವಿಡ್ 19 ಎರಡನೇ ಅಲೆ, ವಾರಾಂತ್ಯದ ಲಾಕ್ ಡೌನ್ ಕಠಿಣ ನಿಯಮದ ನಡುವೆ ಉಡುಪಿ ಜಿಲ್ಲೆಯಲ್ಲಿ ಭಾನುವಾರ ದಾಖಲೆ ಸಂಖ್ಯೆಯ ಸರಳ ಮದುವೆಗಳು ನಡೆದವು. ಜಿಲ್ಲೆಯ ಐದೂ ತಾಲೂಕಿನಲ್ಲಿ ಇಂದು ಅನುಮತಿ ಪಡೆದು ನಡೆದ ಸರಳ ಮದುವೆಗಳ ಸಂಖ್ಯೆ ಬರೋಬ್ಬರಿ 354.

ಈ ಎಲ್ಲಾ ಮದುವೆಗಳು ಕೋವಿಡ್-19 ನಿಯಮಾನುಸಾರ ನಡೆಯುತ್ತಿದ್ದು, ಪ್ರತಿ ಮದುವೆಗೂ 50 ಮಂದಿ ಭಾಗವಹಿಸಲು ಮಾತ್ರ ಅವಕಾಶವಿತ್ತು. ಸಂಬಂಧಿಕರು ಮತ್ತು ಸ್ನೇಹಿತರು‌ ಮದುವೆಯಲ್ಲಿ ಭಾಗವಹಿಸಲು ಅನಾನುಕೂಲ ಉಂಟಾಗಿದೆ.

ಕೋವಿಡ್ ಮಾರ್ಗಸೂಚಿ; ಮದುವೆಗೆ ಬಂದವರು ಅರ್ಧದಲ್ಲೇ ವಾಪಸ್! ಕೋವಿಡ್ ಮಾರ್ಗಸೂಚಿ; ಮದುವೆಗೆ ಬಂದವರು ಅರ್ಧದಲ್ಲೇ ವಾಪಸ್!

ಆದರೆ, ಬಹುತೇಕ ಮದುವೆ ಕಾರ್ಯಕ್ರಮಗಳನ್ನು ಫೇಸ್ ಬುಕ್, ಯುಟ್ಯೂಬ್ ಮೂಲಕ ಲೈವ್ ಮಾಡಲಾಗುತ್ತಿದ್ದು, ಕುಟುಂಬಸ್ಥರು ಮತ್ತು ಸ್ನೇಹಿತರು ಮನೆಯಲ್ಲೇ ಕುಳಿತು ಮದುವೆ ಕಣ್ತುಂಬಿಕೊಳ್ಳುತ್ತಿದ್ದಾರೆ.

ಮದುವೆಗೆ 50 ಜನ; ಭಾಗವಹಿಸುವವರ ಕೈಗೆ ಬ್ಯಾಂಡ್! ಮದುವೆಗೆ 50 ಜನ; ಭಾಗವಹಿಸುವವರ ಕೈಗೆ ಬ್ಯಾಂಡ್!

 Udupi District Witnessed For 354 Wedding On April 25th

ನಗರದ ಶಾರದಾ ಮಂಟಪದಲ್ಲಿ ಉಡುಪಿಯ ಶ್ರಾವ್ಯಾ, ಮೈಸೂರಿನ ಪ್ರಸನ್ನ ರಾವ್ ಸರಳವಾಗಿ ಮದುವೆ ಮಾಡಿಕೊಂಡರು. ಒಂದೂವರೆ ಸಾವಿರ ಜನರು ಈ ವಿವಾಹದಲ್ಲಿ ಪಾಲ್ಗೊಳ್ಳಬೇಕಿತ್ತು. ಆದರೆ, ಕುಟುಂಬಸ್ಥರು ಕಾರ್ಯಕ್ರಮವನ್ನು 50 ಜನಕ್ಕೆ ಸೀಮಿತಗೊಳಿಸಿದರು. ಮದುವೆ ಮುಂದೂಡಬಹುದಿತ್ತು. ನಿಗದಿಯಾದ ಘಳಿಗೆ ಚೆನ್ನಾಗಿದ್ದ ಕಾರಣ ಮದುವೆ ಮಾಡುತ್ತಿದ್ದೇವೆ ಎಂದು ಕುಟುಂಬಸ್ಥರು ಹೇಳಿದ್ದಾರೆ.

ಅಂತರ್ಜಾತಿ ವಿವಾಹ ವಿರೋಧಿಸಿ ಹಕ್ಕು ನಿವೃತ್ತಿ ಪತ್ರಕ್ಕೆ ಸಹಿ ಪಡೆದ ವಧುವಿನ ಕುಟುಂಬ ಅಂತರ್ಜಾತಿ ವಿವಾಹ ವಿರೋಧಿಸಿ ಹಕ್ಕು ನಿವೃತ್ತಿ ಪತ್ರಕ್ಕೆ ಸಹಿ ಪಡೆದ ವಧುವಿನ ಕುಟುಂಬ

Recommended Video

ಕೊರೋನ ತಡಿಯೋಕೆ 14 ದಿನಗಳ ಕಾಲ Lock Down! | Oneindia Kannada

ಅದೇ ರೀತಿ ಇಂದು ನಿಗದಿಯಾಗಿದ್ದ ಬಹುತೇಕ ಮದುವೆಗಳು ಕೋವಿಡ್ ನೈಟ್ ಕರ್ಪ್ಯೂ, ಡೇ ಕರ್ಪ್ಯೂ ಘೋಷಣೆಗೂ ಮುನ್ನ ನಿಶ್ವಯವಾದವುಗಳು. ಬಂಧುಗಳಿಗೆ ಮತ್ತು ಸ್ನೇಹಿತರಿಗೆ ಊಟ ಹಾಕಲು ಈ ಕೋವಿಡ್ ಬಿಡುತ್ತಿಲ್ಲ ಎಂಬ ನೋವು, ನಿರಾಸೆ ಕುಟುಂಬಗಳದ್ದಾಗಿವೆ.

English summary
Karnataka government allowed only 50 people for wedding to maintain social distancing. Udupi district witnessed for 354 wedding on Sunday, April 25th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X