ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕುವೈತ್ ಜೈಲಿನಿಂದ 7 ತಿಂಗಳ ನಂತರ ಬಸ್ರೂರಿನ ಶಂಕರ ಪೂಜಾರಿ ಬಿಡುಗಡೆ

|
Google Oneindia Kannada News

ಉಡುಪಿ, ಜನವರಿ 16 : ನಿಷೇಧಿತ ಔಷಧ ತೆಗೆದುಕೊಂಡು ಹೋಗುವಾಗ ಏಳು ತಿಂಗಳ ಹಿಂದೆ ಕುವೈತ್ ಪೊಲೀಸರು ಬಂಧಿಸಿದ್ದ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬಸ್ರೂರಿನವರಾದ 40 ವರ್ಷದ ಶಂಕರ ಪೂಜಾರಿ ಅವರನ್ನು ಬಿಡುಗಡೆ ಮಾಡಲಾಗಿದೆ. ಕುವೈತ್ ನ ಆಹಾರ ಮತ್ತು ಕೃಷಿ ಸಂಸ್ಥೆಯೊಂದರಲ್ಲಿ ಪೂಜಾರಿ ಕಾರ್ಯ ನಿರ್ವಹಿಸುತ್ತಿದ್ದರು.

ಉಡುಪಿಯಿಂದ ಪಾರ್ಸೆಲ್ ತೆಗೆದುಕೊಂಡ ವ್ಯಕ್ತಿ ಕುವೈಟ್‌ನಲ್ಲಿ ಬಂಧನಉಡುಪಿಯಿಂದ ಪಾರ್ಸೆಲ್ ತೆಗೆದುಕೊಂಡ ವ್ಯಕ್ತಿ ಕುವೈಟ್‌ನಲ್ಲಿ ಬಂಧನ

ಕಳೆದ ವರ್ಷ ಮೇ ತಿಂಗಳಲ್ಲಿ ರಜಾದ ಮೇಲೆ ಭಾರತದಲ್ಲಿರುವ ತಮ್ಮ ಮನೆಗೆ ಹಿಂತಿರುಗಿದ್ದರು. ತಮ್ಮ ಸಹೋದ್ಯೋಗಿ ಮನವಿ ಮಾಡಿದ್ದರಿಂದ ಇಲ್ಲಿಂದ ಪಾರ್ಸೆಲ್ ತೆಗೆದುಕೊಂಡು ಹೋಗಿದ್ದರು. ಅದರಲ್ಲಿ ನಿಷೇಧಿತ ಔಷಧವಿತ್ತು. ಉಡುಪಿಯಿಂದ ಕುವೈತ್ ಗೆ ಹಿಂತಿರುಗಿದ ಅವರನ್ನು ವಿಮಾನ ನಿಲ್ದಾಣದಲ್ಲೇ ಅಲ್ಲಿನ ಪೊಲೀಸರು ವಶಕ್ಕೆ ಪಡೆದಿದ್ದರು.

Udupi district Kundapur man released from Kuwait jail after 7 months

ಈ ಪಾರ್ಸೆಲ್ ಬಗ್ಗೆ ತನಗೇನೂ ಗೊತ್ತಿಲ್ಲ ಎಂದು ಶಂಕರ್ ಪೂಜಾರಿ ಎಷ್ಟೇ ಮನವಿ ಮಾಡಿದರೂ ಪ್ರಯೋಜನ ಆಗಿರಲಿಲ್ಲ. ಆ ನಂತರ ಈ ಪ್ರಕರಣವನ್ನು ಉಡುಪಿಯ ಜಿಲ್ಲಾಡಳಿತ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಕೈಗೆತ್ತಿಕೊಂಡಿತ್ತು. ಈ ಪ್ರಕರಣದಲ್ಲಿ ಶಂಕರ ಪೂಜಾರಿ ಅಮಾಯಕರು ಎಂದು ಕುವೈತ್ ಪೊಲೀಸರ ಬಳಿ ಸಾಬೀತು ಪಡಿಸಲು ಯಶಸ್ವಿಯಾಗಿದ್ದರು.

English summary
S hankara Poojary, 40, from Basroor, Kundapur, who was arrested seven months ago by Kuwait police for carrying banned medicine, has been released. Poojary came home on a holiday in May 2018. On his return, he agreed to take a parcel at a colleague’s request. Police found that it parcel at a colleague’s request. Police found that it contained banned medicines.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X