• search
  • Live TV
ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಉಡುಪಿಯಲ್ಲೂ ಅನಾಹುತ ಸೃಷ್ಟಿಸಿದ ಮಳೆ, ರೆಡ್ ಅಲರ್ಟ್ ಘೋಷಣೆ

By ಉಡುಪಿ ಪ್ರತಿನಿಧಿ
|

ಉಡುಪಿ, ಆಗಸ್ಟ್.14: ಮಲೆನಾಡು ಮಾತ್ರವಲ್ಲದೆ, ಉಡುಪಿ ಜಿಲ್ಲೆಯಾದ್ಯಂತ ಭಾರೀ ಗಾಳೆ, ಮಳೆಯಾಗುತ್ತಿದ್ದು ಅನಾಹುತವನ್ನೇ ಸೃಷ್ಟಿಸಿದೆ. ಕಳೆದ ಮೂರು ದಿನಗಳ ಗಾಳಿ, ಮಳೆ ಇವತ್ತೂ ಮುಂದುವರೆದಿದ್ದು ಮುಂಜಾಗ್ರತಾ ಕ್ರಮವಾಗಿ ಇಂದು ಮಂಗಳವಾರ ಜಿಲ್ಲೆಯಾದ್ಯಂತ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.

72ನೇ ಸ್ವಾತಂತ್ರ್ಯ ದಿನಾಚರಣೆ 2018

ಮಹಾಮಳೆಗೆ ಹಲವೆಡೆ ಮನೆಗಳಿಗೆ ಹಾನಿಯಾಗಿದ್ದು ವಿದ್ಯುತ್ ಕಂಬಗಳು ಧರೆಗುರುಳಿವೆ. ಮೀನುಗಾರಿಕೆ ಸಂಪೂರ್ಣ ಸ್ಥಬ್ಧಗೊಂಡಿದ್ದು ಬೋಟುಗಳು ಮಲ್ಪೆ ಬಂದರಿನಲ್ಲಿ ಲಂಗರು ಹಾಕಿವೆ. ಇನ್ನು ಐತಿಹಾಸಿಕ ದುರ್ಗಾ ಪರಮೇಶ್ವರಿ ದೇಗುಳದ ಗರ್ಭಗುಡಿಗೆ ನೀರು ಬಂದಿದ್ದು ,ಸಮೃದ್ಧಿಯ ಸಂಕೇತ ಎಂಬ ನೆಲೆಯಲ್ಲಿ ಈ ಭಾಗದ ಭಕ್ತಜನತೆ ಪುಳಕಗೊಂಡಿದ್ದಾರೆ.

ಅವರು ಹಾಗೆ ಪುಳಕಗೊಳ್ಳಲು ಕಾರಣವೂ ಇದೆ. ಮಹಾಮಳೆಗೂ ಈ ದೇವಸ್ಥಾನದೊಳಗೆ ನೀರು ಬರುವುದಕ್ಕೂ ಸಂಬಂಧವಿದೆ. ಪ್ರತೀ ವರ್ಷ ಒಮ್ಮೆಯಾದ್ರೂ ದೇವಸ್ಥಾನದೊಳಗೆ ನೀರು ಬಂದರೆ ಈ ಮಳೆಗಾಳದ ಕೋಟಾ ಮುಗಿದಂತೆಯೇ.

ಭಾರೀ ಮಳೆಗೆ ಹೈರಾಣಾದ ಮಲೆನಾಡ ಜನ, ಶೃಂಗೇರಿಯಲ್ಲಿ ತುಂಗೆಯ ರೌದ್ರ ‌ನರ್ತನ

ಗರ್ಭಗುಡಿವರೆಗೆ ನೀರು ಹರಿದರೆ ದೇವಿಗೆ ನೈಸರ್ಗಿಕ ಅಭಿಷೇಕ ಎಂದೇ ಈ ಭಾಗದ ಭಕ್ತರು ನಂಬುತ್ತಾರೆ. ಈ ಹಿನ್ನೆಲೆಯಲ್ಲಿ ಜಲಾವೃತ ಆಗುತ್ತಿದ್ದಂತೆ ಅರ್ಚಕರು ದೇವಿಗೆ ಆರತಿ ಬೆಳಗಿ ನೀರು ಬಂದ ಹಿನ್ನಲೆಯಲ್ಲಿ ಜನತೆ ಖುಷಿಗೊಂಡರು. ಇನ್ನು ಜಿಲ್ಲೆಯ ಯಾವ ಭಾಗದಲ್ಲಿ ಎಷ್ಟು ಮಳೆಯಾಗಿದೆ ಎಂಬುದರ ಪೂರ್ಣ ಮಾಹಿತಿ ಇಲ್ಲಿದೆ.

ಧರೆಗುರುಳಿದ ವಿದ್ಯುತ್ ಕಂಬಗಳು, ಮರಗಳು

ಧರೆಗುರುಳಿದ ವಿದ್ಯುತ್ ಕಂಬಗಳು, ಮರಗಳು

ಉಡುಪಿಯ ಪೆರ್ಣಂಕಿಲ, ಮಣಿಪುರ ಗ್ರಾಮಗಳಲ್ಲಿ ಐವತ್ತಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಹಲವು ಮನೆಗಳ ಛಾವಣಿ, ಸಿಮೆಂಟ್ ಶೀಟುಗಳು ಹಾರಿ ಹೋಗಿವೆ. ಕೆಲವೆಡೆ ಮರದ ಕೊಂಬೆಗಳು ಮನೆಯ ಮಹಡಿ ಮೇಲೆ ಬಿದ್ದಿವೆ. ಭಾರೀ ಗಾಳಿ ಮಳೆಗೆ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿವೆ.

ಅದೃಷ್ಟವಶಾತ್ ಮನೆಯೊಳಗಿದ್ದವರಿಗೆ ಯಾವುದೇ ತೊಂದರೆಯಾಗಿಲ್ಲ. ಹಾನಿಗೊಳಗಾದ ಪ್ರದೇಶಗಳಿಗೆ ಪೆರ್ಣಂಕಿಲ ಗ್ರಾಮ ಕರಣಿಕ ಸುನಿಲ್ ಭೇಟಿ ನೀಡಿದ್ದಾರೆ. ಒಟ್ಟು 5 - 6 ಲಕ್ಷ ರೂ. ನಷ್ಟ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ.

ಕಾಪು ಶಾಸಕ ಲಾಲಾಜಿ ಮೆಂಡನ್, ಪಂಚಾಯತ್ ಸದಸ್ಯರಾದ ಸದಾನಂದ ಪ್ರಭು, ರಶ್ಮಿ ನಾಯಕ್, ಮೋನಿಕಾ ನೊರೊನ್ಹಾ ಹಾನಿಗೀಡಾದ ಮನೆಗಳಿಗೆ ಭೇಟಿ ನೀಡಿದ್ದಾರೆ.

ವರ್ಷಕ್ಕೊಮ್ಮೆ ದುರ್ಗಾಪರಮೇಶ್ವರಿಗೆ ನೈಸರ್ಗಿಕ ಅಭಿಷೇಕ ಮಾಡುವ ನದಿ

 ಮುಳುಗಡೆಯಾದ ಬೋಟು

ಮುಳುಗಡೆಯಾದ ಬೋಟು

ತೂಫಾನಿನ ರಭಸಕ್ಕೆ ಮಲ್ಪೆಯಿಂದ ಆಳಸಮುದ್ರ ಮೀನುಗಾರಿಕೆಗೆ ತೆರಳಿದ ಬೋಟೊಂದು ಮುಳುಗಡೆಯಾಗಿದೆ. ಆದರೆ ಮೀನುಗಾರರನ್ನು ರಕ್ಷಣೆ ಮಾಡಲಾಗಿದ್ದ ಯಾವುದೇ ಸಾವು ನೋವು ಸಂಭವಿಸಿಲ್ಲ.

ಮಲ್ಪೆ ಬಂದರಿನಿಂದ ಆಳಸಮುದ್ರ ಮೀನುಗಾರಿಕೆಗೆ ತೆರಳಿದ ಕೆಲ ಬೋಟುಗಳು ಸಮುದ್ರದಲ್ಲೇ ಗಾಳಿಮಳೆಗೆ ಸಿಕ್ಕಿಹಾಕಿಕೊಂಡಿರುವ ಸಾಧ್ಯತೆ ಇರುವುದರಿಂದ ಮಲ್ಪೆ ಬಂದರಿನಲ್ಲಿ ಸಿಬ್ಬಂದಿಗಳು ಮೈಕ್ ಮೂಲಕ ಎಚ್ಚರಿಕೆ ಸಂದೇಶ ರವಾನಿಸುತ್ತಿದ್ದಾರೆ. ಜಿಪಿಎಸ್ ಮೂಲಕ ಸಮುದ್ರದಲ್ಲಿರುವ ಬೋಟ್ ಗಳ ಚಲನವಲನಗಳನ್ನು ಪರಿಶೀಲಿಸಲಾಗುತ್ತಿದೆ.

 ಮನೆಗಳಿಗೆ ನುಗ್ಗಿದ ನೀರು

ಮನೆಗಳಿಗೆ ನುಗ್ಗಿದ ನೀರು

ಇನ್ನು ಉಪ್ಪೂರು ಹೊಳೆ, ಸೌಪರ್ಣಿಕಾ ನದಿ ತುಂಬಿ ಹರಿಯುತ್ತಿದ್ದು, ಈ ಭಾಗದ ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ತಗ್ಗುಪ್ರದೇಶಗಳಿಗೆ ನೆರೆ ನೀರು ನುಗ್ಗುತ್ತಿದ್ದು, ಕೆಲವೆಡೆ ಮನೆಗಳಿಗೂ ನೀರು ನುಗ್ಗಿದೆ. ನದಿ ತಟದ ಮನೆಗಳಿಗೆ ನೀರು ನುಗ್ಗಿದ ಕಾರಣ ನೀರನ್ನು ಹೊರಹಾಕಲು ಜನರು ಹರಸಾಹಸ ಪಡುವಂತಾಗಿದೆ.

 ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ

ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ

ಭಾರೀ ಮಳೆ ಸಾಧ್ಯತೆ ಹಿನ್ನೆಲೆಯಲ್ಲಿ ಆಗಸ್ಟ್ 17ರ ತನಕ ಕರಾವಳಿಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ನವದೆಹಲಿಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾಗಿ ಕರಾವಳಿ ಜಿಲ್ಲೆಗಳಲ್ಲಿ ರೆಡ್​ ಅಲರ್ಟ್ ಘೋಷಣೆ ಮಾಡಲಾಗಿದೆ.

ಈ ಹಿನ್ನೆಲೆಯಲ್ಲಿ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳದಂತೆ ಸೂಚನೆ ನೀಡಲಾಗಿದೆ. ಅಲ್ಲದೆ ನದಿ, ಸಮುದ್ರದ ಹತ್ತಿರದಲ್ಲಿ ವಾಸಿಸುವ ಜನರು ಒಂದು ವಾರಗಳ ಕಾಲ ಎಚ್ಚರವಾಗಿರುವಂತೆ ಸೂಚನೆ ನೀಡಲಾಗಿದೆ.

ಕಡಲ ಕೊರೆತ

ಕಡಲ ಕೊರೆತ

ಉಡುಪಿ ಜಿಲ್ಲೆಯ ಉಪ್ಪುಂದ ಸಮೀಪದ ಕರ್ಕಿಕಳಿಯ ಬಳಿಯ ಯಕ್ಷೇಶ್ವರಿ ದೇವಸ್ಥಾನದ ಹತ್ತಿರದಲ್ಲಿರುವ ಕಡಲ ತೀರದಲ್ಲಿ ನಿನ್ನೆ ಸಂಜೆ ಹಾಗೂ ಇಂದು ಮುಂಜಾನೆ ವೇಳೆ ಕಡಲ ಕೊರೆತ ಸಂಭವಿಸಿದೆ.

ಶನಿವಾರ ರಾತ್ರಿ ಹಾಗೂ ರವಿವಾರ ಬೆಳಗ್ಗೆ ಭಾರೀ ಮಳೆಯಾಗಿರುವುದರಿಂದ ರವಿವಾರ ಮಧ್ಯಾಹ್ನ ಉಪ್ಪುಂದ ಕರ್ಕಿಕಳಿ ಸಮುದ್ರ ತೀರ ಭಾಗದ ಸಮುದ್ರದಲ್ಲಿ ದೊಡ್ಡ ಗಾತ್ರದ ಅಲೆಗಳು ದಡಕ್ಕೆ ಬಂದು ಅಪ್ಪಳಿಸುತ್ತಿದೆ.

ಸಮುದ್ರದ ಅಲೆಗಳು ಒಮ್ಮೆಲೇ ದಡಕ್ಕೆ ಬಂದು ಅಪ್ಪಳಿಸುತ್ತಿರುವುದರಿಂದ ದೋಣಿಗಳು ಸಮುದ್ರ ಪಾಲಾಗುವ ಅಪಾಯ ಮನಗಂಡ ಸ್ಥಳೀಯ ಮೀನುಗಾರರು ಸಮುದ್ರ ತಟದಲ್ಲಿ ನಿಲ್ಲಿಸಿರುವ ದೋಣಿಗಳನ್ನು ಸುರಕ್ಷಿತ ಸ್ಥಳಕ್ಕೆ ತರುವ ಮೂಲಕ ದೋಣಿಗಳನ್ನು ರಕ್ಷಿಸಿ ಸಂಭವನೀಯ ನಷ್ಟದಿಂದ ಪಾರಾಗಿದ್ದಾರೆ.

English summary
Udupi district has a huge wind and rainfall and created a disaster. Holidays to school have been announced for precautionary measures Today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X