ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಡುಪಿಯಲ್ಲಿ ಜುಲೈ 15ರಿಂದ ಸೀಲ್ ಡೌನ್; ಮಾರ್ಗಸೂಚಿ

|
Google Oneindia Kannada News

ಉಡುಪಿ, ಜುಲೈ 14 : ಉಡುಪಿ ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ಹರಡುವುದನ್ನು ತಡೆಗಟ್ಟಲು ಸೀಲ್ ಡೌನ್ ಘೋಷಣೆ ಮಾಡಲಾಗಿದೆ. ಜಿಲ್ಲೆಯಲ್ಲಿ ಮಂಗಳವಾರ 73 ಹೊಸ ಕೊರೊನಾ ವೈರಸ್ ಸೋಂಕಿನ ಪ್ರಕರಣ ದಾಖಲಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 1,735ಕ್ಕೆ ಏರಿಕೆಯಾಗಿದೆ.

Recommended Video

Constable Sunita Yadaw had to Quit for questioning Minister Son | Oneindia kannada

ಮಂಗಳವಾರ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಈ ಕುರಿತು ಮಾಹಿತಿ ನೀಡಿದರು. "ಜುಲೈ 15 ರಿಂದ 29ರ ತನಕ 14 ದಿನಗಳ ವರೆಗೆ ಜಿಲ್ಲೆಯ ಗಡಿಗಳನ್ನು ಸೀಲ್ ಡೌನ್ ಮಾಡಲಾಗುವುದು. ಆದರೆ, ಜಿಲ್ಲೆಯೊಳಗಿನ ಆರ್ಥಿಕ ಚಟುವಟಿಕೆಗಳು ಎಂದಿನಂತೆ ನಡೆಯಲಿವೆ" ಎಂದರು.

ದ್ವಿತೀಯ ಪಿಯುಸಿ ಫಲಿತಾಂಶ: ಉಡುಪಿ ಫಸ್ಟ್, ಉಳಿದ ಜಿಲ್ಲೆಗಳ ಕಥೆಯೇನು?ದ್ವಿತೀಯ ಪಿಯುಸಿ ಫಲಿತಾಂಶ: ಉಡುಪಿ ಫಸ್ಟ್, ಉಳಿದ ಜಿಲ್ಲೆಗಳ ಕಥೆಯೇನು?

"ಸೋಮವಾರ ಮುಖ್ಯಮಂತ್ರಿಗಳ ಜೊತೆ ನಡೆಸಿದ ಸಭೆಯಲ್ಲಿ ಸಂಬಂಧಪಟ್ಟ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯಲ್ಲಿ ಲಾಕ್ ಡೌನ್ ಮಾಡುವ ಕುರಿತಂತೆ ನಿರ್ಧಾರ ಮಾಡುವಂತೆ ತಿಳಿಸಿದ್ದರು. ಸೋಮವಾರ ಸಂಜೆ ಜಿಲ್ಲೆಯ ಜಿಲ್ಲಾ ವೈದ್ಯಕೀಯ ತಜ್ಞರ ಸಮಿತಿ ಜೊತೆ ಚರ್ಚೆ ನಡೆಸಲಾಯಿತು" ಎಂದು ಜಿಲ್ಲಾಧಿಕಾರಿಗಳು ಹೇಳಿದರು.

 ಉಡುಪಿ: ಪಿಎಫ್ಐ ಕಾರ್ಯಕರ್ತರಿಂದ ಮೃತ ಕೋವಿಡ್ ಸೋಂಕಿತನ ಅಂತ್ಯಸಂಸ್ಕಾರ ಉಡುಪಿ: ಪಿಎಫ್ಐ ಕಾರ್ಯಕರ್ತರಿಂದ ಮೃತ ಕೋವಿಡ್ ಸೋಂಕಿತನ ಅಂತ್ಯಸಂಸ್ಕಾರ

"ಮಂಗಳವಾರ ಜಿಲ್ಲೆಯ ಎಲ್ಲಾ ಶಾಸಕರೊಂದಿಗೆ ಚರ್ಚೆ ನಡೆಸಿದ ಬಳಿಕ ಜುಲೈ 15ರ ರಾತ್ರಿ 8 ಗಂಟೆಯಿಂದ ಜಿಲ್ಲೆಯ ಗಡಿಗಳನ್ನು ಸೀಲ್ ಡೌನ್ ಮಾಡಲಾಗುವುದು. ಆದರೆ, ಅಂತರ ರಾಜ್ಯ/ಅಂತರ ಜಿಲ್ಲಾ ಸರಕು ಸಾಗಾಣಿಕೆ/ವಸ್ತುಗಳ ಸಾಗಾಣಿಕೆಗೆ ಯಾವುದೇ ನಿರ್ಭಂದಗಳಿಲ್ಲ" ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದರು.

ಉಡುಪಿ; ಕೋವಿಡ್ ಪರೀಕ್ಷೆ ಲ್ಯಾಬ್; ದಿನಕ್ಕೆ 300 ಮಾದರಿ ಪರೀಕ್ಷೆ ಉಡುಪಿ; ಕೋವಿಡ್ ಪರೀಕ್ಷೆ ಲ್ಯಾಬ್; ದಿನಕ್ಕೆ 300 ಮಾದರಿ ಪರೀಕ್ಷೆ

ಬಸ್ ಸಂಚಾರ ಇರುವುದಿಲ್ಲ

ಬಸ್ ಸಂಚಾರ ಇರುವುದಿಲ್ಲ

ಉಡುಪಿ ಜಿಲ್ಲೆಯಿಂದ ಹೊರ ಜಿಲ್ಲೆ, ರಾಜ್ಯಕ್ಕೆ ಹೋಗುವವರು ಮತ್ತು ಜಿಲ್ಲೆಯೊಳಗೆ ಬರುವವರು ಜುಲೈ 15ರ ರಾತ್ರಿ 8 ಗಂಟೆಯ ಒಳಗೆ ಬರಲು / ಹೋಗಲು ಅವಕಾಶ ನೀಡಲಾಗಿದೆ. ಸೀಲ್ ಡೌನ್ ಅವಧಿಯಲ್ಲಿ ಜಿಲ್ಲೆಯಲ್ಲಿ ಯಾವುದೇ ಬಸ್ ಸಂಚಾರ ಇರುವುದಿಲ್ಲ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.

ಯಾವುದಕ್ಕೆ ನಿಷೇಧ

ಯಾವುದಕ್ಕೆ ನಿಷೇಧ

ಸೀಲ್ ಡೌನ್ ಅವಧಿಯಲ್ಲಿ ಸಂತೆ, ರಾಜಕೀಯ ಮತ್ತು ಧಾರ್ಮಿಕ, ಸಾಮಾಜಿಕ ಸಭೆ ಸಮಾರಂಭ ನಡೆಸುವಂತಿಲ್ಲ. ಸಾರ್ವಜನಿಕವಾಗಿ ಹಬ್ಬ ಆಚರಣೆಗಳು ಇರುವುದಿಲ್ಲ, ಪೂರ್ವ ನಿರ್ಧರಿತ ಮದುವೆ ಸಮರಂಭಗಳನ್ನು ತಹಶೀಲ್ದಾರ್ ಅವರಿಂಧ ಕಡ್ಡಾಯವಾಗಿ ಅನುಮತಿ ಪಡೆದು 50 ಜನಕ್ಕೆ ಮೀರದಂತೆ ನಡೆಸಬಹುದಾಗಿದೆ. ಅಂತ್ಯ ಸಂಸ್ಕಾರದಲ್ಲಿ 20 ಜನ ಮಾತ್ರ ಭಾಗವಹಿಸಬಹುದು.

ಅಂಗಡಿಗಳು ಬಂದ್ ಆಗಲಿವೆಯೇ?

ಅಂಗಡಿಗಳು ಬಂದ್ ಆಗಲಿವೆಯೇ?

* ಸೀಲ್ ಡೌನ್ ಅವಧಿಯಲ್ಲಿ ದೇವಾಲಯ, ಚರ್ಚ್, ಮಸೀದಿಗಳನ್ನು ಸಾರ್ವಜನಿಕ ದರ್ಶನಕ್ಕೆ ಮಾತ್ರ ಸೀಮತಿಗೊಳಿಸಲಾಗಿದೆ. ಈ ಸಮಯದಲ್ಲಿ ಒಮ್ಮೆಗೆ ಅರ್ಚಕರು, ಮೌಲ್ವಿಗಳು, ಧರ್ಮಗುರುಗಳು, ಭಕ್ತಾದಿಗಳು ಸೇರಿ 20 ಕ್ಕಿಂತ ಜಾಸ್ತಿ ಜನ ಇರುವಂತಿಲ್ಲ.

* ಯಾವುದೇ ವಿಶೇಷ ಪೂಜೆಗಳು, ಧಾರ್ಮಿಕ ಆಚರಣೆಗಳು ಇರುವುದಿಲ್ಲ. ಸ್ವಯಂ ಪ್ರೇರಿತವಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲು ಮಾಲೀಕರು ನಿರ್ಧರಿಸಿದಲ್ಲಿ ಜಿಲ್ಲಾಡಳಿತದ ಅಭ್ಯಂತರ ಇರುವುದಿಲ್ಲ.

ಭಾನುವಾರ ಸಂಪೂರ್ಣ ಲಾಕ್ ಡೌನ್

ಭಾನುವಾರ ಸಂಪೂರ್ಣ ಲಾಕ್ ಡೌನ್

* ಸರ್ಕಾರದ ನಿರ್ದೇಶನದಂತೆ ಭಾನುವಾರ ಸಂಪೂರ್ಣ ಲಾಕ್ ಡೌನ್ ಇರಲಿದೆ. ಮೆಡಿಕಲ್, ಕ್ಲಿನಿಕಲ್ ಲ್ಯಾಬ್, ಆಸ್ಪತ್ರೆ, ಹಾಲು, ದಿನಪತ್ರಿಕೆ ಮಾರಾಟಕ್ಕೆ ನಿರ್ಭಂದವಿಲ್ಲ. ಹೋಟೆಲ್‌ಗಳಿಂದ ಪಾರ್ಸೆಲ್, ಫುಡ್ ಡೆಲಿವರಿಗೆ ಅವಕಾಶವಿದೆ.

* ತುರ್ತು ಸಂದರ್ಭದಲ್ಲಿ ಜಿಲ್ಲೆಯಿಂದ ಹೊರ ಹೋಗಲು ಮತ್ತು ಪ್ರತಿನಿತ್ಯದ ಕೆಲಸಗಳಿಗೆ ಜಿಲ್ಲೆಗೆ ಆಗಮಿಸುವವರಿಗೆ ಪಾಸ್ ನೀಡಲಾಗುವುದು.

English summary
Udupi deputy commissioner G. Jagadeesha said that from July 15th to 29 all borders of the district will seal down to control spread of Coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X