ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಸಿ ಕಾರು ಬಿಟ್ಟು ಬಸ್ ಏರಿ ಕಚೇರಿಗೆ ಬಂದ ಉಡುಪಿ ಜಿಲ್ಲಾಧಿಕಾರಿ

|
Google Oneindia Kannada News

ಉಡುಪಿ, ಮೇ 30 : ಹವಾನಿಯಂತ್ರಿತ ವಾಹನದಲ್ಲಿ ಸಂಚಾರ ನಡೆಸುವ ಜಿಲ್ಲಾಧಿಕಾರಿಗಳು ಸಾರ್ವಜನಿಕ ಸಾರಿಗೆಯಲ್ಲಿ ಸಂಚಾರ ನಡೆಸಿ ಗಮನ ಸೆಳೆದರು. ಜಿಲ್ಲಾಧಿಕಾರಿಗಳು ಮಾತ್ರವಲ್ಲ ಜಿಲ್ಲಾಧಿಕಾರಿಗಳ ಕಚೇರಿಯ ಸಿಬ್ಬಂದಿಗಳು ಸಹ ಸಾರ್ವಜನಿಕ ಸಾರಿಗೆ ಬಳಕೆ ಮಾಡಿದರು.

ಉಡುಪಿ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಮತ್ತು ಅಪರ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಗುರುವಾರ ಸಾರ್ವಜನಿಕ ಸಾರಿಗೆ ಬಳಕೆ ಮಾಡಿ ಜನರಿಗೆ ಮಾದರಿಯಾದರು. ಪ್ರತಿನಿತ್ಯ ಕಾರು, ದ್ವಿಚಕ್ರ ವಾಹನದಲ್ಲಿ ಕಚೇರಿಗೆ ಆಗಮಿಸುತ್ತಿದ್ದ ಸಿಬ್ಬಂದಿಗಳು ಬಸ್ ಬಳಕೆ ಮಾಡಿದರು.

4 ಜಿಲ್ಲೆಗಳಿಂದ ತಿರುಪತಿ ಕೆಎಸ್ಆರ್‌ಟಿಸಿ ಪ್ಯಾಕೇಜ್‌ ಪ್ರವಾಸ ಆರಂಭ4 ಜಿಲ್ಲೆಗಳಿಂದ ತಿರುಪತಿ ಕೆಎಸ್ಆರ್‌ಟಿಸಿ ಪ್ಯಾಕೇಜ್‌ ಪ್ರವಾಸ ಆರಂಭ

ಸಾರ್ವಜನಿಕ ಸಾರಿಗೆ ಬಳಕೆಗೆ ಮುನ್ನುಡಿ ಬರೆದ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರ ನಿರ್ದೇಶನದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ಸಿಬ್ಬಂದಿಗಳೆಲ್ಲಾ ಒಂದೇ ವಾಹನದಲ್ಲಿ ಮಣಿಪಾಲದ ರಜತಾದ್ರಿಯಲ್ಲಿರುವ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದರು.

ಮಂಗಳೂರು: ಕೋಳಿಗೂ ಟಿಕೆಟ್ ಕೊಳ್ಳಿರೆಂದ ಕಂಡಕ್ಟರ್ ಮಹಾಶಯ!ಮಂಗಳೂರು: ಕೋಳಿಗೂ ಟಿಕೆಟ್ ಕೊಳ್ಳಿರೆಂದ ಕಂಡಕ್ಟರ್ ಮಹಾಶಯ!

ಗುರುವಾರ ಸಂಜೆ 5.30 ಕ್ಕೆ ಕಚೇರಿ ಸಮಯ ಮುಕ್ತಾಯದ ನಂತರವೂ ಸಹ ಸಾರ್ವಜನಿಕ ವಾಹನದಲ್ಲಿಯೇ ಜಿಲ್ಲಾಧಿಕಾರಿ ಮತ್ತು ಸಿಬ್ಬಂದಿಗಳು ಮನೆಗೆ ತೆರಳಿದರು. ಜಿಲ್ಲಾಧಿಕಾರಿಗಳ ಕಾರ್ಯಕ್ಕೆ ಜನರು ಮೆಚ್ಚುಗೆಯನ್ನು ಸೂಚಿಸಿದರು.....

2 ಮಾರ್ಗದಲ್ಲಿ ಸ್ಲೀಪರ್ ಬಸ್ ಸೇವೆ ಆರಂಭಿಸಿದ ಕೆಎಸ್ಆರ್‌ಟಿಸಿ2 ಮಾರ್ಗದಲ್ಲಿ ಸ್ಲೀಪರ್ ಬಸ್ ಸೇವೆ ಆರಂಭಿಸಿದ ಕೆಎಸ್ಆರ್‌ಟಿಸಿ

ಬಸ್ ಏರಿದ ಜಿಲ್ಲಾಧಿಕಾರಿ

ಬಸ್ ಏರಿದ ಜಿಲ್ಲಾಧಿಕಾರಿ

ಗುರುವಾರ ಬೆಳಗ್ಗೆ 9.30ಕ್ಕೆ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರು ತಮ್ಮ ಅಧಿಕೃತ ಸರಕಾರಿ ವಾಹನವನ್ನು ಮನೆಯಲ್ಲಿಯೇ ಬಿಟ್ಟು, ವಾಹನ ಚಾಲಕ ಮತ್ತು ಅಂಗರಕ್ಷಕನೊಂದಿಗೆ ಸಾರ್ವಜನಿಕ ವಾಹನ ಏರಿದರು.

ಸಂಜೆ 5.30 ಕ್ಕೆ ಕಚೇರಿ ಸಮಯ ಮುಕ್ತಾಯದ ನಂತರವೂ ಸಹ ಸಾರ್ವಜನಿಕ ವಾಹನದಲ್ಲಿಯೇ ಜಿಲ್ಲಾಧಿಕಾರಿ ಮತ್ತು ಸಿಬ್ಬಂದಿಗಳು ತೆರಳಿದರು. ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆಂಪೇಗೌಡ, ಜಿಲ್ಲಾ ಹಿಂದುಳಿದ ವರ್ಗಗಳ ಅಧಿಕಾರಿ ಹೆಚ್.ಆರ್. ಲಮಾಣಿ ಮುಂತಾದವರು ಬಸ್‌ನಲ್ಲಿ ಸಂಚಾರ ನಡೆಸಿದರು.

ಬಸ್ ಹತ್ತಿದ ನೌಕರರು

ಬಸ್ ಹತ್ತಿದ ನೌಕರರು

ಜಿಲ್ಲಾಧಿಕಾರಿಗಳ ನಿವಾಸದ ಪಕ್ಕದಲ್ಲಿಯೇ ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಅವರ ನಿವಾಸವಿದೆ. ಅವರು ಸಹ ವಾಹನವನ್ನು ಬಿಟ್ಟು ಜಿಲ್ಲಾಧಿಕಾರಿಗಳ ಜೊತೆ ಬಸ್ ಏರಿದರು. ಅಜ್ಜರಕಾಡು ವಸತಿಗೃಹದಲ್ಲಿರುವ ವಿವಿಧ ಅಧಿಕಾರಿಗಳು ಸಹ ತಮ್ಮ ಸರಕಾರಿ ವಾಹನ ಬಿಟ್ಟು, ಸಾರ್ವಜನಿಕ ಸಮೂಹ ಸಾರಿಗೆ ಏರಿದರು. ವಸತಿಗೃಹದಲ್ಲಿರುವ ವಿವಿಧ ಇಲಾಖೆಯ ಸಿಬ್ಬಂದಿಗಳು ಇವರನ್ನು ಸೇರಿಕೊಂಡರು.

ಜಿಲ್ಲಾಧಿಕಾರಿಗಳ ಕಚೇರಿ ತಲುಪಿದರು

ಜಿಲ್ಲಾಧಿಕಾರಿಗಳ ಕಚೇರಿ ತಲುಪಿದರು

ಜಿಲ್ಲಾಧಿಕಾರಿ ನಿವಾಸದಿಂದ ಹೊರಟ ಬಸ್, ಬನ್ನಂಜೆಯ ತಾಲೂಕು ಕಚೇರಿ ಮಾರ್ಗವಾಗಿ, ಸಿಟಿ ಬಸ್ ನಿಲ್ದಾಣ, ಎಂಜಿಎಂ ಕಾಲೇಜು ಮಾರ್ಗದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರ್ತವ್ಯಕ್ಕೆ ತೆರಳಲು ಕಾಯುತ್ತಿದ್ದ ವಿವಿಧ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಹತ್ತಿಸಿಕೊಂಡು ಬೆಳಗ್ಗೆ 9.50ಕ್ಕೆ ಜಿಲ್ಲಾಧಿಕಾರಿಗಳ ಕಚೇರಿ ತಲುಪಿತು.

ಪ್ರತಿ ಗುರುವಾರ ಕಾರಿನ ಬಳಕೆ ಇಲ್ಲ

ಪ್ರತಿ ಗುರುವಾರ ಕಾರಿನ ಬಳಕೆ ಇಲ್ಲ

ವಾರದಲ್ಲಿ ಒಂದು ದಿನವಾದರೂ ಎಲ್ಲ ಅಧಿಕಾರಿ, ಸಿಬ್ಬಂದಿಗಳು ಸಾರ್ವಜನಿಕ ಸಾರಿಗೆ ಬಳಕೆ ಮಾಡಬೇಕು ಎಂಬುದು ಜಿಲ್ಲಾಧಿಕಾರಿಗಳ ಚಿಂತನೆಯಾಗಿದೆ. ಈ ಮೂಲಕ ವಾಯು ಮಾಲಿನ್ಯ ನಿಯಂತ್ರಣ ಮಾಡುವುದು ಮತ್ತು ಸಾರ್ವಜನಿಕ ಸಾರಿಗೆ ಬಳಕೆಗೆ ಉತ್ತೇಜನ ನೀಡಲು ತೀರ್ಮಾನಿಸಿದ್ದಾರೆ. ಪ್ರತಿ ಗುರುವಾರ ಸಾರ್ವಜನಿಕ ಸಾರಿಗೆ ಬಳಸಲು ನಿರ್ಧರಿಸಿದ್ದಾರೆ.

English summary
Udupi Deputy Commissioner Hephsiba Rani Korlapati used public transport to reach office on May 30, 2019. Deputy Commissioner officer officials also used bus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X