ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕ್ವಾರಂಟೈನ್ ಗಳು ಹೊರಬಂದರೆ ಕಠಿಣ ಕ್ರಮ: ಉಡುಪಿ ಡಿಸಿ

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಏಪ್ರಿಲ್ 02: ವಿದೇಶದಿಂದ ಬಂದಿದ್ದ ಕಾಪು ಮೂಲದ ಕೊರೊನಾ ವೈರಸ್ ಪಾಸಿಟಿವ್ ವ್ಯಕ್ತಿಯ ಹೆಂಡತಿ ಮತ್ತು ಮಗುವಿಗೆ ಚಿಕಿತ್ಸೆ ನೀಡಿದ್ದ ಮಣಿಪಾಲ ಆಸ್ಪತ್ರೆ 30 ಸಾವಿರ ರೂ. ವೆಚ್ಚವನ್ನು ಭರಿಸಲು ಹೇಳಿದೆ.

ಈ ಬಗ್ಗೆ ಜಿಲ್ಲಾಧಿಕಾರಿ ಅವರನ್ನು ಪ್ರಶ್ನೆ ಮಾಡಿದಾಗ ಜಿಲ್ಲಾಧಿಕಾರಿ ಅವರು, ""ಕೇವಲ ಆತನ ಹೆಂಡತಿ ಮಗುವಿನ ಶುಲ್ಕ ಮಾತ್ರವಲ್ಲ, ಅವರ ಊರಿನಲ್ಲಿ ಯಾರಿಗಾದರೂ ಕೊರೊನಾ ವೈರಸ್ ಸೋಂಕು ಕಂಡು ಬಂದರೆ ಅವರ ಚಿಕಿತ್ಸೆಯ ವೆಚ್ಚವನ್ನೂ ಈತನಿಂದಲೇ ವಸೂಲಿ ಮಾಡಲಾಗುವುದು'' ಎಂದು ಎಚ್ಚರಿಸಿದ್ದಾರೆ.

""ಮನೆಯೊಳಗಡೆ ಇರಬೇಕು ಎಂದು ಕಟ್ಟಾಜ್ಞೆಯನ್ನು ಜಿಲ್ಲಾಡಳಿತ ನೀಡಿತ್ತು, ಅದನ್ನು ಉಲ್ಲಂಘಿಸಿ ಆತ ಓಡಾಡಿದ್ದಾನೆ. ಸಾರ್ವಜನಿಕ ಸ್ಥಳಗಳಿಗೆ ಹೋಗಿ ಅಲ್ಲಿದ್ದವರ ಜೀವದ ಜೊತೆಗೆ ಚೆಲ್ಲಾಟ ಮಾಡಿದ್ದಾನೆ. ಹೀಗಾಗಿ ಆತನನ್ನು ಬಿಡುವ ಪ್ರಶ್ನೆಯೇ ಇಲ್ಲ. ಆತನ ಮೇಲೆ ಕೇಸು ದಾಖಲಿಸಿದ್ದೇವೆ'' ಎಂದು ಜಿಲ್ಲಾಧಿಕಾರಿ ಜಗದೀಶ್ ಅವರು ಹೇಳಿದ್ದಾರೆ.

Udupi DC Warned To Home Quarantines

ಕಾಪು ಮೂಲದ ವ್ಯಕ್ತಿಯೋರ್ವರು ಕೆಲ ದಿನಗಳ ಹಿಂದೆ ವಿದೇಶದಿಂದ ಬಂದಿದ್ದು, ಆರೋಗ್ಯ ಇಲಾಖೆಯವರು ಆತನನ್ನು ಮನೆಯೊಳಗಡೆ ಇರುವಂತೆ ಸೂಚಿಸಿದ್ದರು. ಆದರೆ ಜಿಲ್ಲಾಡಳಿತದ ಕಾನೂನನ್ನು ಮೀರಿ ಆತ ಮನೆಯಿಂದ ಹೊರಬಂದು ಊರಲ್ಲಿ ತಿರುಗಾಡಿದ ಕೊನೆಗೆ ಆತನಿಗೆ ಸೋಂಕು ಇರುವುದು ಕಂಡುಬಂದಿತ್ತು. ಹೀಗಾಗಿ ಆತನ ಗೆಳೆಯರು, ಮನೆಯವರು ಮತ್ತು ಹೆಂಡತಿ ಮಗುವನ್ನು ಕೂಡ ಪರೀಕ್ಷೆಗೆ ಒಳಪಡಿಸಲಾಗಿತ್ತು.

English summary
The Manipal Hospital, which treated the wife and child of a Kapura based Coronavirus positive person from overseas, paid Rs.30 Thousand Told to pay the costs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X