ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಲ್ಲೂರು ಕ್ಷೇತ್ರದಲ್ಲಿ ಕ್ವಾರಂಟೈನ್ ಕೇಂದ್ರಗಳು: ಸ್ಥಳೀಯರಲ್ಲಿ ಆತಂಕ!

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಮೇ 22: ಕೃಷ್ಣನಗರಿ ಉಡುಪಿ ಸೇಫ್ ಆಗಿದೆ ಎಂಬ ಭಾವನೆ ನಾಲ್ಕು ದಿನದ ಹಿಂದಿನತನಕವೂ ಇತ್ತು. ಆದರೆ ಮುಂಬೈಯಿಂದ ಸಾವಿರಾರು ಜನರು ಜಿಲ್ಲೆ ಪ್ರವೇಶಿಸಿದ ಬಳಿಕ ಜಿಲ್ಲೆಯ ಜನರ ಆತಂಕ ಇಮ್ಮಡಿಯಾಗಿದೆ.

Recommended Video

ತರಕಾರಿಯಿಂದಲು ಹಬ್ಬುತ್ತಿದೆ ಕೊರೋನಾ ಮಹಾಮಾರಿ!! ಎಚ್ಚರ!! | Oneindia Kannada

ಕಳೆದ ಮೂರು ದಿನಗಳಿಂದ ಉಡುಪಿ ಜಿಲ್ಲೆಯಲ್ಲಿ ಕೊರೊನಾ ವೈರಸ್ ಸೋಂಕು ಪೀಡಿತರ ಸಂಖ್ಯೆ 47 ಕ್ಕೆ ಏರಿದೆ. ಈ ನಡುವೆ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಆಸುಪಾಸಿನ ಜನ ಆತಂಕಿತರಾಗಿದ್ದಾರೆ. ಕಾರಣ, ಮೂಕಾಂಬಿಕಾ ದೇವಸ್ಥಾನದ ಸುತ್ತ ಇರುವ ಕ್ವಾರಂಟೈನ್ ಕೇಂದ್ರಗಳು.

ಪ್ರಿಯತಮನ ಜೊತೆ ಪರಾರಿಯಾದ ಉಡುಪಿಯ ವಿವಾಹಿತ ಮಹಿಳೆಪ್ರಿಯತಮನ ಜೊತೆ ಪರಾರಿಯಾದ ಉಡುಪಿಯ ವಿವಾಹಿತ ಮಹಿಳೆ

ಕೊಲ್ಲೂರಿನ ಲಾಡ್ಜ್, ಮತ್ತು ಹಾಸ್ಟೆಲ್ ಗಳಲ್ಲಿ ಮಹಾರಾಷ್ಟ್ರದಿಂದ ಬಂದ ಜನರನ್ನು ಕ್ವಾರಂಟೈನ್ ಮಾಡಲಾಗಿದೆ. ಹೀಗಾಗಿ ಕೊಲ್ಲೂರು ಮೂಕಾಂಬಿಕಾ ದೇಗುಲ ರಸ್ತೆಗೆ ಇಂದು ರಾಸಾಯನಿಕ ಔಷಧಿ ಸಿಂಪಡಣೆ ಮಾಡಲಾಯಿತು.

Chemical Spraying In Quarantine Places At Kolluru

ಕೊಲ್ಲೂರು ದೇಗುಲದ ಹೊರ ಆವರಣ ಗೋಡೆಗೂ ರಾಸಾಯನಿಕ ದ್ರಾವಣ ಮಾಡಿದೆ. ಕ್ಷೇತ್ರದ ಸ್ವಚ್ಛತೆಗೆ ಸ್ಥಳೀಯಾಡಳಿತ ಗಮನ ಕೊಟ್ಟಿದೆ. ಕೊಲ್ಲೂರು ದೇಗುಲ ಸುತ್ತಮುತ್ತ 962 ಜನರಿಗೆ ಕ್ವಾರಂಟೈನ್ ಮಾಡಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಈವರೆಗೆ 48 ಮಂದಿಗೆ ಕೊರೊನಾ ವೈರಸ್ ದೃಢಪಟ್ಟಿದೆ.

Chemical Spraying In Quarantine Places At Kolluru

ಕೊಲ್ಲೂರಿನ ಕ್ವಾರಂಟೈನ್ ಕೇಂದ್ರಗಳಲ್ಲೂ ಕೊರೊನಾ ವೈರಸ್ ಮಹಾಮಾರಿ ಕಾಣಿಸಿಕೊಂಡಿದೆ. ಹೀಗಾಗಿ ಈ ಭಾಗದ ಜನ ಓಡಾಡುವುದಕ್ಕೂ ಹಿಂದೆಮುಂದೆ ನೋಡುವಂತಾಗಿದೆ.

English summary
The number of coronavirus infection Cases in Udupi district has increased to 47 over the past three days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X