ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಬಿಜೆಪಿ ಗೇಟ್ ಮುಚ್ಚುವುದಿಲ್ಲ, ಆದರೆ ಮಧ್ವರಾಜ್ ಬರುವುದು ಬೇಡ'

|
Google Oneindia Kannada News

ಉಡುಪಿ, ಮಾರ್ಚ್‌ 23: ಪ್ರಮೋದ್ ಮಧ್ವರಾಜ್ ಬಿಜೆಪಿಗೆ ಬಂದ್ರೆ ಸ್ವಾಗತಿಸುತ್ತೇವೆ. ಯಾರು ಬಂದ್ರೂ ನಾವು ಸ್ವಾಗತಿಸ್ತೇವೆ. ಉಡುಪಿ ಬಿಜೆಪಿ ಆಫೀಸಿಗೆ ಗೇಟೇ ಇಲ್ಲ. ಆದರೆ ಬಿಜೆಪಿಯನ್ನು ಉದ್ಧಾರ ಮಾಡಲು ಮಧ್ವರಾಜ್ ಬರುವುದು ಬೇಡ ಎಂದು ಹೇಳಿದ ಅವರು ಅವರಿಗೆ ಲಾಭ ಆಗುವುದಾದ್ರೆ ಬಿಜೆಪಿಗೆ ಬರಲಿ ಎಂದು ಮಾಜಿ ಶಾಸಕ ರಘುಪತಿ ಭಟ್ ಹೇಳಿದರು.

ಉಡುಪಿಯಲ್ಲಿ ಮಾಧ್ಯಮ ಗೋಷ್ಠೀಯಲ್ಲಿ ಸಚಿವ ಮದ್ವರಾಜ್ ಅವರ ವೈಫಲ್ಯಗಳ ಚಾರ್ಜ್ ಶೀಟ್ ಬಿಡುಗಡೆಗೊಳಿಸಿದ ಮಾತನಾಡಿದ ಅವರು 2000 ಕೋಟಿ ಅನುದಾನ ತಂದವರಿಗೆ ಬೇರೆ ಪಕ್ಷ ಯಾಕೆ ? ಎಂದು ಪ್ರಶ್ನಿಸಿದ ಅವರು ಮಧ್ವರಾಜ್ ಅವರು ಬಿಜೆಪಿಗೆ ಬರ್ತೇನೆ, ಬರೂದಿಲ್ಲ ಅಂತ ಗೊಂದಲ ಯಾಕೆ ಹುಟ್ಟಿಸುತ್ತಿದ್ದಾರೆ? ಕಾಂಗ್ರೆಸ್ ಕಾರ್ಯಕರ್ತರಲ್ಲಿ ಬಿಜೆಪಿಗೆ ಹೋಗ್ತೇನೆ ಅಂತಾರೆ. ಮಾಧ್ಯಮದ ಹೇಳಿಕೆಯಲ್ಲಿ ಗೊಂದಲ ಸೃಷ್ಟಿಸುತ್ತಾರೆ ಎಂದು ಅವರು ಕಿಡಿಕಾರಿದರು.

ಅಬ್ರಹಾಂ ಮೇಲೆ 10 ಕೋಟಿ ಮಾನನಷ್ಟ ಮೊಕದ್ದಮೆ ಹೂಡಲು ಮುಂದಾದ ಮಧ್ವರಾಜ್ಅಬ್ರಹಾಂ ಮೇಲೆ 10 ಕೋಟಿ ಮಾನನಷ್ಟ ಮೊಕದ್ದಮೆ ಹೂಡಲು ಮುಂದಾದ ಮಧ್ವರಾಜ್

ಕಾಂಗ್ರೆಸ್ ಆಢಳಿತಾವಧಿಯಲ್ಲಿ ಉಡುಪಿ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಆಗಿಲ್ಲ. ಉಡುಪಿ ಜಿಲ್ಲೆಯ ಆಭಿವೃದ್ದಿಗೆ 2000 ಕೋಟಿ ರೂಪಾಯಿ ತಂದಿರುವುದಾಗಿ ಸಚಿವ ಮದ್ವರಾಜ್ ಬೊಗಳೆ ಬಿಟ್ಟಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. 500 ಕೋಟಿ ರೂಪಾಯಿ ಜಿಲ್ಲಾಸ್ಪತ್ರೆ ಹಗಲು ಕನಸಾಗಿದೆ ಎಂದು ಹೇಳಿದ ಅವರು ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಖಾಸಗಿಯವರಿಗೆ ಕೊಡಲಾಗಿದೆ ಎಂದು ಅವರು ಟೀಕಿಸಿದರು.

Udupi BJP releases failures charge sheet of Pramod Madhwaraj

ಜಿಲ್ಲೆಯ ರಸ್ತೆಗಳ ಸಮಗ್ರ ಅಭಿವೃದ್ಧಿಯಲ್ಲಿ ಸಚಿವರು ವಿಫಲ ರಾಗಿದ್ದು .ಉಡುಪಿಗೆ ಪಿ.ಜಿ ಸೆಂಟರ್ ಕೂಡ ಕೈತಪ್ಪಿದೆ ಎಂದು ಅವರು ಕಿಡಿಕಾರಿದರು. ಸಚಿವರು ಬ್ರಹ್ಮಾವರ ಪುರಸಭೆ ಮಾಡಿಲ್ಲ. ಜಿಲ್ಲೆಯಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ನೆನೆಗುದಿಗೆ ಬಿದ್ದಿದೆ ದೂರಿದ ಅವರು ಮಧ್ವರಾಜ್ ಅವರಿಂದ ಜಿಲ್ಲೆಯಲ್ಲಿ ಮರಳು ಮಾಫಿಯಾ ಸೃಷ್ಟಿಯಾಗಿದೆ ಎಂದು ಅವರು ಆರೋಪಿಸಿದರು.

ಕ್ರೀಡಾ ಕಿಟ್ ವಿತರಣೆಯಲ್ಲಿ ಅವ್ಯವಹಾರ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ರಘುಪತಿ ಭಟ್ 15 ಸಾವಿರ ರೂಪಾಯಿ ಬೆಲೆಯ ಕ್ರಿಡಾ ಕಿಟ್ ಅನ್ನು 40 ಸಾವಿರ ರೂಪಾಯಿಗೆ ಖರೀದಿಲಾಗಿದೆ ಎಂದು ಆರೋಪಿಸಿದರು. ಕ್ರೀಡಾ ಸಚಿವರಾಗಿ ಮಧ್ವರಾಜ್ ಸಂಪೂರ್ಣ ವೈಫಲ್ಯ ಕಂಡಿದ್ದಾರೆ ಎಂದ ಅವರು ಉಡುಪಿಗೆ ಮದ್ವರಾಜ್ ಉಸ್ತುವಾರಿ ಸಚಿವರಾಗಿ ಏನೂ ಉಪಯೋಗವಾಗಿಲ್ಲ ಎಂದು ಹೇಳಿದವರು.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಈಗಾಗಲೇ ಉಡುಪಿಯ 7 ಜನ ಜಿಲ್ಲಾಧಿಕಾರಿ ವರ್ಗಾವಣೆಯಾದರು. 6 ಮಂದಿ ಪೊಲೀಸ್ ವರಿಷ್ಠಾಧಿಕಾರಿಗಳ ವರ್ಗಾವಣೆ ಆಯ್ತು. ಉಡುಪಿಯಲ್ಲಿ ಫ್ಲೆಕ್ಸ್ ಅಂಗಡಿಗಳು ಮಾತ್ರ ಅಭಿವೃದ್ಧಿಯಾಗಿವೆ ಹೊರತು ಉಡುಪಿ ಜಿಲ್ಲೆ ಅಭಿವೃದ್ಧಿ ಆಗಿಲ್ಲ ಎಂದು ವ್ಯಂಗ್ಯ ಮಾಡಿದರು.

English summary
Udupi BJP unit released charge sheets against Udupi incharge minister Pramod Madwaraj's failures in the press meet hare at Udupi on march 23.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X