ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಸ್ಟ್ರೇಲಿಯಾ ಲಿಬರಲ್ ಪಕ್ಷದ ಸಮಿತಿ ಸದಸ್ಯರಾಗಿ ಕನ್ನಡತಿ ಶಿಲ್ಪಾ ಹೆಗ್ಡೆ ಆಯ್ಕೆ

|
Google Oneindia Kannada News

ಉಡುಪಿ, ಫೆಬ್ರವರಿ 19: ಉಡುಪಿ ಮೂಲದ ಕನ್ನಡತಿ ಶಿಲ್ಪಾ ಹೆಗ್ಡೆ (44) ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಅವರ ಲಿಬರಲ್ ಪಕ್ಷದ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

ಉಡುಪಿಯ ಪೆರ್ಡೂರು ಮೂಲದ ಶಿಲ್ಪಾ, ಮೋಹನ್ ದಾಸ್ ಹೆಗ್ಡೆ ಹಾಗೂ ಶಶಿಕಲಾ ದಂಪತಿ ಪುತ್ರಿ. ನಿಟ್ಟೆ ಎನ್‌ಎಂಎಎಂ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ವ್ಯಾಸಂಗ ಮಾಡಿದ್ದು, ಇಪ್ಪತ್ತು ವರ್ಷದಿಂದ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದಾರೆ. ಸದ್ಯ ಅಲ್ಲಿನ ಡಿಡಬ್ಲುಎಸ್ ಗ್ಲೋಬಲ್ ಕಂಪನಿ ಐಟಿ ಕನ್ಸಲ್ಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಶಿಲ್ಪಾ ಪತಿ ದಯಾನಂದ್ ಶೆಟ್ಟಿ ಕೂಡ ಆಸ್ಟ್ರೇಲಿಯಾದಲ್ಲಿ ಉದ್ಯಮಿಯಾಗಿದ್ದಾರೆ.

ಆಕ್ಸ್‌ಫರ್ಡ್ ವಿವಿ ವಿದ್ಯಾರ್ಥಿ ಸಂಘದ ಅಧ್ಯಕ್ಷೆಯಾಗಿ ಕನ್ನಡತಿ ರಶ್ಮಿ ಸಾಮಂತ್ ಆಯ್ಕೆಆಕ್ಸ್‌ಫರ್ಡ್ ವಿವಿ ವಿದ್ಯಾರ್ಥಿ ಸಂಘದ ಅಧ್ಯಕ್ಷೆಯಾಗಿ ಕನ್ನಡತಿ ರಶ್ಮಿ ಸಾಮಂತ್ ಆಯ್ಕೆ

2013ರಲ್ಲಿ ನಡೆದ ಫೆಡರಲ್ ಚುನಾವಣೆಯಲ್ಲಿ ಶಿಲ್ಪಾ ಹೆಗ್ಡೆ ಮೆಲ್ಬರ್ನ್‌ನ ವಿಲ್ಸ್‌ನಿಂದ ಚುನಾವಣೆ ಸ್ಪರ್ಧಿಸಿದ್ದರು. ಇದೀಗ ಅವರನ್ನು ಲಿಬರಲ್ ಪಕ್ಷದ ಉನ್ನತ ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ. ಚುನಾವಣೆಗೆ ಸಂಬಂಧಿಸಿದಂತೆ ಪಕ್ಷದ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಮಿತಿ ಇದಾಗಿದ್ದು, ಈ ಸಮಿತಿಯಲ್ಲಿ ಸ್ಥಾನ ಪಡೆದ ಮೊದಲ ಭಾರತೀಯ ಮಹಿಳೆ ಎಂದು ಶಿಲ್ಪಾ ಕರೆಸಿಕೊಂಡಿದ್ದಾರೆ.

Udupi Based Shilpa Hegde Is Member Of Australian Liberal Partys Decision Making Panel

Recommended Video

203 ದಿನಗಳ ಪ್ರಯಾಣದ ನಂತರ ಮಂಗಳನ ಅಂಗಳ ತಲುಪಿದ ನಾಸಾ ರೋವರ್‌..! | NASA Rover | Oneindia Kannada

ಈ ವರ್ಷದ ಕೊನೆಯಲ್ಲಿ ಅಥವಾ 2022ರ ವೇಳೆಗೆ ಆಸ್ಟ್ರೇಲಿಯಾದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಶಿಲ್ಪಾ, "ಕಾರ್ಯಕಾರಿ ಸಮಿತಿ ಭಾಗವಾಗಿರುವುದಕ್ಕೆ ಸಂತಸವಾಗುತ್ತಿದೆ. ನಮ್ಮ ಪಕ್ಷ ಆಸ್ಟ್ರೇಲಿಯಾದ ವಲಸಿಗ ಸಮುದಾಯದ ಅಭಿವೃದ್ಧಿ ಕುರಿತು ಚಿಂತಿಸಲಿದೆ" ಎಂದಿದ್ದಾರೆ.

English summary
Udupi based Shilpa Hegde, 44 selected as the candidate by the top Liberal Party leaders of Australia
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X