ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಡುಪಿ: 3 ಬಸ್ ಚಾಲಕರು ಸೇರಿದಂತೆ 40 ಜನರಿಗೆ ಕೊರೊನಾ ವೈರಸ್ ಸೋಂಕು ದೃಢ

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಜುಲೈ 6: ಉಡುಪಿ ಜಿಲ್ಲೆಯಲ್ಲಿ ಸೋಮವಾರ ಮತ್ತೆ 40 ಹೊಸ ಕೊರೊನಾ ವೈರಸ್ ಪ್ರಕರಣ ಪತ್ತೆಯಾಗಿವೆ. ಇದರಲ್ಲಿ ಮೂವರು ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕರು, ಹೋಟೆಲ್ ಮಾಲೀಕರು ಮತ್ತು ಅಂಗಡಿ ಮಾಲೀಕರೂ ಸೇರಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಈವರೆಗೆ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 1362 ಕ್ಕೆ ಏರಿಕೆ ಆಗಿದೆ.

ಹೋಟೆಲ್ ಸಿಬ್ಬಂದಿ, ಅಂಗಡಿ ಮಾಲೀಕರ ಕುಟುಂಬಕ್ಕೂ ಕೊರೊನಾ ವೈರಸ್ ಸೋಂಕು ತಗುಲಿದ್ದು, ಸಮುದಾಯಕ್ಕೆ ಹಬ್ಬುವ ಭೀತಿ ಎದುರಾಗಿದೆ. ಕುಂದಾಪುರ ತಾಲೂಕಿನ ಕೋಟದಲ್ಲಿರುವ ಹೋಟೆಲ್ ಮತ್ತು ಅಂಗಡಿ ಮಾಲೀಕರಿಗೆ ಕೋವಿಡ್ ವೈರಸ್ ದೃಢಗೊಂಡಿದ್ದು, ಹೊಟೇಲ್ ಮತ್ತು ಅಂಗಡಿಯನ್ನು ಸೀಲ್ ಡೌನ್ ಮಾಡಲಾಗಿದೆ.

ಉಡುಪಿಯಲ್ಲಿ ಒಂದೇ ದಿನ 45 ಕೊರೊನಾ ವೈರಸ್ ಸೋಂಕು ಪತ್ತೆಉಡುಪಿಯಲ್ಲಿ ಒಂದೇ ದಿನ 45 ಕೊರೊನಾ ವೈರಸ್ ಸೋಂಕು ಪತ್ತೆ

ಇನ್ನು ಆರೋಗ್ಯ ಇಲಾಖೆಯು ಕೆ.ಎಸ್.ಆರ್.ಟಿ.ಸಿ ಬಸ್‌ ಚಾಲಕರು ಮತ್ತು ನಿರ್ವಾಹಕರ ಗಂಟಲ ದ್ರವವನ್ನು ಪರೀಕ್ಷೆಗೆ ಒಳಪಡಿಸಿತ್ತು. ಇಂದು ಬಂದ ವರದಿಯಲ್ಲಿ ಮೂವರಿಗೆ ಕೋವಿಡ್ ಸೋಂಕು ಇರುವುದು ವರದಿವಾಗಿದೆ.

Udupi: 40 Coronavirus Infections Including 3 Bus Drivers Are Confirmed Today

ಕುಂದಾಪುರ ತಾಲೂಕಿನ 58, ಬಾಗಲಕೋಟೆ ಮೂಲದ 36 ಮತ್ತು 44 ವರ್ಷದ ಮೂವರು ಬಸ್‌ ಚಾಲಕರಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಈ ಮೂವರು ಕೂಡ ಕುಂದಾಪುರದಿಂದ ಹೊರ ಜಿಲ್ಲೆಗಳಿಗೆ ಸಂಚರಿಸುವ ಬಸ್‌ಗಳ ಚಾಲಕರಾಗಿದ್ದರು. ಈ ಮುನ್ನ ಕುಂದಾಪುರ, ಬೆಂಗಳೂರು ಖಾಸಗಿ ಬಸ್ ನ ಇಬ್ಬರು ಚಾಲಕರಿಗೂ ಕೊರೊನಾ ಸೋಂಕು ದೃಢವಾಗಿತ್ತು.

ಚಿತ್ರದುರ್ಗ; ಬೆಲೆ ಕುಸಿತದಿಂದ ಬೇಸತ್ತು ಬದನೆ ಬೆಳೆ ನಾಶಪಡಿಸಿದ ರೈತಚಿತ್ರದುರ್ಗ; ಬೆಲೆ ಕುಸಿತದಿಂದ ಬೇಸತ್ತು ಬದನೆ ಬೆಳೆ ನಾಶಪಡಿಸಿದ ರೈತ

ಚಿತ್ರದುರ್ಗದಲ್ಲಿ ಇಂದು 6 ಪ್ರಕರಣ ಪತ್ತೆ, ಸೋಂಕಿತರ ಸಂಖ್ಯೆ 89ಕ್ಕೆ ಏರಿಕೆ

ಕೋಟೆನಾಡು ಚಿತ್ರದುರ್ಗದಲ್ಲಿ ಇಂದು ಕೋವಿಡ್-19 ವೈರಸ್ ಸಂಬಂಧಿಸಿದಂತೆ 6 ಜನರಲ್ಲಿ ಸೋಂಕು ಇರುವುದು ದೃಢಪಟ್ಟಿದ್ದು, ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 89 ಕ್ಕೆ ಏರಿಕೆಯಾದಂತಾಗಿದೆ.

ಒಟ್ಟು 101 ಜನರ ಗಂಟಲು, ಮೂಗು ದ್ರವ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, 6 ಜನರಲ್ಲಿ ಕೋವಿಡ್ ದೃಢಪಟ್ಟಿದೆ. ಚಿತ್ರದುರ್ಗ ತಾಲ್ಲೂಕಿನಲ್ಲಿ 01, ಚಳ್ಳಕೆರೆ-04 ಹಾಗೂ ಮೊಳಕಾಲ್ಮೂರು ತಾಲ್ಲೂಕಿನಲ್ಲಿ ಓರ್ವ ವ್ಯಕ್ತಿಗೆ ಸೋಂಕು ಇರುವುದು ದೃಢಪಟ್ಟಿದೆ.

English summary
40 new coronavirus positive infections have been detected in Udupi district on Monday. This includes three KSRTC bus drivers, hotel owners and shop owners.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X