ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪುರುಷ ಪ್ರಧಾನ ಕಂಬಳ ಗದ್ದೆಯಲ್ಲಿ 11ರ ಬಾಲಕಿಯ ಕಲರವ!

By ರಹೀಂ ಉಜಿರೆ
|
Google Oneindia Kannada News

ಉಡುಪಿ, ಮಾರ್ಚ್ 06: ಯಕ್ಷಗಾನವನ್ನು ಕರಾವಳಿಯ ಗಂಡು ಕಲೆ ಎಂದು ಕರೆಯುತ್ತಾರೆ. ಹಾಗೆ ನೋಡಿದರೆ ಜನಪದ ಕ್ರೀಡೆ ಕಂಬಳ ಕೂಡ ಗಂಡು ಕಲೆಯೇ. ಕಂಬಳದಲ್ಲಿ ಈ ತನಕ ಮಹಿಳೆಯರು ಭಾಗವಹಿಸಿದ ಇತಿಹಾಸ ಇಲ್ಲ. ಆದರೆ, ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ 11ರ ಕುವರಿಯೊಬ್ಬಳು ಕಂಬಳ ಗದ್ದೆಗೆ ಇಳಿಯುವ ಮೂಲಕ ಹೊಸ ದಾಖಲೆ ಸೃಷ್ಟಿಸಿದ್ದಾಳೆ.

ಕೆಲವು ದಿನಗಳ ಹಿಂದೆ ಮಿಯಾರುವಿನ ಪ್ರಸಿದ್ಧ ಲವಕುಶ ಜೋಡುಕರೆ ಕಂಬಳದಲ್ಲಿ ಚೈತ್ರಾ ಎಂಬ 11ರ ಬಾಲಕಿ ಮೊಟ್ಟ ಮೊದಲ ಬಾರಿಗೆ ಕಂಬಳ ಗದ್ದೆಗೆ ಇಳಿಯುವ ಮೂಲಕ ಪುರುಷ ಪ್ರಧಾನ ಕಂಬಳ ಕ್ರೀಡೆಯಲ್ಲಿ ಬಾಲಕಿಯ ಪ್ರವೇಶವಾಗಿದೆ.

ಜನವರಿ ಅಂತ್ಯದಲ್ಲಿ ಕರಾವಳಿಯಲ್ಲಿ ಆರಂಭವಾಗಲಿದೆ ಕಂಬಳ ಜನವರಿ ಅಂತ್ಯದಲ್ಲಿ ಕರಾವಳಿಯಲ್ಲಿ ಆರಂಭವಾಗಲಿದೆ ಕಂಬಳ

ಚೈತ್ರಾ ಕುಂದಾಪುರ ತಾಲೂಕಿನ ಬೋಳಂಬಳ್ಳಿ ಗ್ರಾಮದ ಪರಮೇಶ್ವರ ಭಟ್‌, ರಮ್ಯಾ ದಂಪತಿಯ ಪುತ್ರಿ. ಈ ದಂಪತಿಯ ಇಬ್ಬರು ಮಕ್ಕಳ ಪೈಕಿ ಚೈತ್ರಾಗೆ ಕಂಬಳವೆಂದರೆ ಅದೇನೋ ಸೆಳೆತ. ಈಕೆ ಕಾಲ್ತೊಡು ಸರಕಾರಿ ಶಾಲೆಯಲ್ಲಿ 6ನೇ ತರಗತಿ ಓದುತ್ತಿದ್ದಾಳೆ.

ನಾನು ಕೆಸರಿನ ಓಟಗಾರ, ಟ್ರ್ಯಾಕ್‌ನಲ್ಲಿ ಓಡುವುದಿಲ್ಲ: ಕಂಬಳ ವೀರ ಶ್ರೀನಿವಾಸ್ ಗೌಡನಾನು ಕೆಸರಿನ ಓಟಗಾರ, ಟ್ರ್ಯಾಕ್‌ನಲ್ಲಿ ಓಡುವುದಿಲ್ಲ: ಕಂಬಳ ವೀರ ಶ್ರೀನಿವಾಸ್ ಗೌಡ

Udupi 11 Year Old Girl Participated In Kambala

ಕಂಬಳದಲ್ಲಿ ಕೋಣದ ಯಜಮಾನಿಕೆಯ ನೇತೃತ್ವ ವಹಿಸಿ, ಕರಾವಳಿ ಭಾಗದ ಸಾಂಪ್ರದಾಯಿಕ ಕ್ರೀಡೆ ಕಂಬಳದಲ್ಲಿ ಹೊಸ ಸಂಚಲನ ಮೂಡಿಸಿದ್ದಾಳೆ. ಕೃಷಿ ಪ್ರಧಾನ ಕುಟುಂಬವಾಗಿದ್ದರಿಂದ ಮತ್ತು ಹಿರಿಯರಿಗೆ ಕಂಬಳದ ಬಗ್ಗೆ ಆಸಕ್ತಿ ಇದ್ದುದರಿಂದಾಗಿ ಅದೇ ಪರಿಸರದಲ್ಲಿ ಬೆಳೆದ ಚೈತ್ರಾ ಚಿಕ್ಕ ವಯಸ್ಸಿನಲ್ಲೇ ಕಂಬಳ ಕೋಣಗಳೆಡೆಗೆ ಆಕರ್ಷಿತಳಾದಳು.

ಉಸೇನ್ ಬೋಲ್ಟ್ ಅನ್ನು ಮೀರಿಸಿದ ಕಂಬಳ ವೀರ ಶ್ರೀನಿವಾಸ್ ಗೌಡಉಸೇನ್ ಬೋಲ್ಟ್ ಅನ್ನು ಮೀರಿಸಿದ ಕಂಬಳ ವೀರ ಶ್ರೀನಿವಾಸ್ ಗೌಡ

ಕೋಣಗಳಿಗೆ ಸ್ನಾನ ಮಾಡಿಸುವುದು, ಅವುಗಳಿಗೆ ಆಹಾರ ಬೇಯಿಸಿ ತಿನ್ನಿಸುವುದು, ಅವುಗಳ ಆರೈಕೆ ಮಾಡುವುದು ಹೀಗೆ ವಿವಿಧ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಳು. ಕೃಷಿಕ ತಂದೆ ಪರಮೇಶ್ವರ್‌ ಭಟ್‌ ಕಳೆದ 20 ವರ್ಷಗಳಿಂದ ಕೋಣಗಳನ್ನು ಸಾಕುತ್ತಿದ್ದಾರೆ. ಕೋಣಗಳನ್ನು ಸಾಕಿ ಕಂಬಳಕ್ಕೆ ಹೋಗುವ ಹವ್ಯಾಸ ಅವರಿಗಿದೆ. ಇದು ಬಾಲಕಿಯ ಮೇಲೆ ಪ್ರಭಾವ ಬೀರಿ ಕಂಬಳ ಗದ್ದೆಗೆ ಇಳಿಯುವಷ್ಟು ಆತ್ಮವಿಶ್ವಾಸ ಕುವರಿಯಲ್ಲಿ ಬೆಳೆದಿದೆ.

Recommended Video

ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿ ನೋಡ್ಕೋಳ್ತಿದ್ದಾರಾ ನಮ್ಮ ಸಚಿವರು? | Oneindia Kannada

ಚೈತ್ರಾಗೆ ಕಂಬಳ ಕೋಣಗಳನ್ನು ಓಡಿಸುವ ಮತ್ತು ಕಂಬಳದ ಎಲ್ಲಾ ಹಂತದಲ್ಲೂ ಪಳಗುವ ತವಕ ಇದೆ. ಸದ್ಯ ಓದುತ್ತಲೇ ಕಂಬಳದ ಎಬಿಸಿಡಿ ಕಲಿಯುತ್ತಿದ್ದಾಳೆ. ಈಕೆ ಮುಂದೊಂದು ದಿನ ಪೂರ್ಣ ಪ್ರಮಾಣದ ಕಂಬಳದಲ್ಲಿ ಭಾಗವಹಿಸಿ ಕರಾವಳಿಯ ಪುರುಷ ಪ್ರಧಾನ ಕಂಬಳದಲ್ಲಿ ಹೊಸ ಇತಿಹಾಸ ಸೃಷ್ಟಿಸುವುದರಲ್ಲಿ ಯಾವುದೇ ಸಂಶಯವೂ ಇಲ್ಲ.

English summary
Udupi district Kundapur based 11 year old girl participated in kambala field first time. Kambala is a buffalo race traditional sports of Karavali, Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X