ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಾಡದೋಣಿ ಮೀನುಗಾರಿಕೆಗೆ ತೆರಳಿದ ಇಬ್ಬರು ಯುವಕರು ನೀರುಪಾಲು

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಜುಲೈ.25: ಕರ್ನಾಟಕ ಕರಾವಳಿ ತೀರದಲ್ಲಿ ಮಳೆಗಾಲದ ಮೀನುಗಾರಿಕೆ ಆರಂಭವಾಗಿದೆ. ಅತ್ಯಂತ ಕಠಿಣವಾದ ಈ ಸಾಂಪ್ರದಾಯಿಕ ಮೀನುಗಾರಿಕೆಯನ್ನು ನಾಡದೋಣಿ ಮೀನುಗಾರಿಕೆ ಎಂದು ಕರೆಯುತ್ತಾರೆ.

ಉಳಿದ ಸಮಯದಲ್ಲಿ ಬೇರೆಯವರ ಬೋಟುಗಳಲ್ಲಿ ದುಡಿಯುವ ಮೀನುಗಾರ ಕಾರ್ಮಿಕರು, ಮಳೆಗಾಲದಲ್ಲಿ ತಾವೇ ಗುಂಪು ಕಟ್ಟಿಕೊಂಡು ನಾಡದೋಣಿಗಳಲ್ಲಿ ಸಾಹಸಮಯ ಮೀನಿನ ಬೇಟೆ ನಡೆಸುತ್ತಾರೆ. ಆದರೆ ಮೀನುಗಾರಿಕೆಗೆ ತೆರಳಿ ಜೀವವನ್ನೇ ಕಳೆದುಕೊಂಡ ಕರಾಳ ಘಟನೆ ಉಡುಪಿಯ ಮಲ್ಪೆ ಪಡುಕೆರೆಶಾಂತಿ ನಗರದಲ್ಲಿ ನಡೆದಿದೆ.

ಜೂನ್ 1 ರಿಂದ ಮೀನುಗಾರಿಕೆ ನಿಷೇಧ: ಯಾವ ಕಾರಣಕ್ಕೆ ಗೊತ್ತಾ? ಜೂನ್ 1 ರಿಂದ ಮೀನುಗಾರಿಕೆ ನಿಷೇಧ: ಯಾವ ಕಾರಣಕ್ಕೆ ಗೊತ್ತಾ?

ನತೇಶ್ (38) ಹಾಗೂ ನಿಶಾಂತ್ (22) ಯುವಕರು ಮೀನುಗಾರಿಕೆಗೆ ತೆರಳಿ ನೀರುಪಾಲಾಗಿದ್ದಾರೆ. ಇಬ್ಬರು ಯುವಕರ ಕುಟುಂಬಿಕರು ತಮ್ಮ ಮಕ್ಕಳನ್ನು ಕಳೆದ ದುಃಖದಲ್ಲಿದ್ದಾರೆ. ಇಬ್ಬರು ಯುವಕರಲ್ಲಿ ಒರ್ವನ ಮೃತದೇಹ ದೊರಕಿದ್ದು, ಇನ್ನೊಬ್ಬನ ಮೃತದೇಹಕ್ಕಾಗಿ ಶೋಧ ಕಾರ್ಯ ನಡೆಯುತ್ತಿದೆ.

Two young men who went to fishing have died

ಇನ್ನೂ ಘಟನೆ ತಿಳಿದು ಸ್ಥಳೀಯ ಶಾಸಕ ಲಾಲಾಜಿ ಆರ್ ಮೆಂಡನ್ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ, ಯುವಕರ ಕುಟುಂಬಕ್ಕೆ ಪರಿಹಾರ ಒದಗಿಸುವ ಭರವಸೆ ನೀಡಿದರು. ಯುವಕರು ಆಪ್ತರು, ಸಂಬಂಧಿಕರು ಮನೆಯ ಸುತ್ತ ನೆರವೇರಿದ್ದು, ದುಃಖ ಸಾಗರವೇ ಆವರಿಸಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

English summary
Rainfed fishing started on Karnataka coast and two young men who went to fishing have died. Incident occurred in padukereshanthi nagar of Malpe at Udupi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X