ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇರ್ಜಿಕೊಡ್ಲು ಬಳಿ 3 ಚಿರತೆಗಳ ಪೈಕಿ 2 ಚಿರತೆ ಬೋನಿಗೆ

|
Google Oneindia Kannada News

ಉಡುಪಿ, ಡಿಸೆಂಬರ್ 28: ಹಾಡಹಗಲೇ ಗುಂಪಾಗಿ ಬಂದು ದಾಳಿ ಮಾಡುತ್ತಿದ್ದ 3 ಚಿರತೆಗಳ ಪೈಕಿ 2 ಚಿರತೆ ಬೋನಿಗೆ ಬಿದ್ದಿವೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮೊಳಹಳ್ಳಿ ಗ್ರಾಮದ ಇರ್ಜಿಕೊಡ್ಲು ಎಂಬಲ್ಲಿ ಈ ಚಿರತೆಗಳನ್ನು ಸೆರೆ ಹಿಡಿಯಲಾಗಿದೆ.

ಕೋರ್ಟ್‌ಗೆ ಬಂದ ಅನಿರೀಕ್ಷಿತ ಅತಿಥಿ!: ಜಡ್ಜ್, ವಕೀಲರೆಲ್ಲ ದಿಕ್ಕಾಪಾಲಾಗಿ ಓಡಿದ್ದೇಕೆ?ಕೋರ್ಟ್‌ಗೆ ಬಂದ ಅನಿರೀಕ್ಷಿತ ಅತಿಥಿ!: ಜಡ್ಜ್, ವಕೀಲರೆಲ್ಲ ದಿಕ್ಕಾಪಾಲಾಗಿ ಓಡಿದ್ದೇಕೆ?

ಇಲ್ಲಿಯ ನಿವಾಸಿ ಗುಲಾಬಿ ಕುಲಾಲ್ತಿ ಎಂಬವರ ಮನೆಯ ಹಟ್ಟಿಯಲ್ಲಿದ್ದ ದನಕರುಗಳ ಮೇಲೆ 3 ಚಿರತೆ ಗುಂಪಾಗಿ ಇತ್ತೀಚೆಗೆ ದಾಳಿ ಮಾಡಿದ್ದವು. ಹಾಡಹಗಲೇ ದಾಳಿ ಮಾಡುತ್ತಿದ್ದ ಈ ಚಿರತೆಗಳು ಇದುವರೆಗೆ 20 ಹಸು ಮತ್ತು 15 ಸಾಕು ನಾಯಿ, ಬೆಕ್ಕುಗಳನ್ನು ಹಿಡಿದಿವೆ ಎಂದು ಹೇಳಲಾಗಿದೆ.

ಕಾಡಿನಲ್ಲಿ ಧ್ಯಾನ ಮಾಡಲು ಹೋಗಿ ಚಿರತೆಗೆ ಬಲಿಯಾದ ಬೌದ್ಧ ಬಿಕ್ಕುಕಾಡಿನಲ್ಲಿ ಧ್ಯಾನ ಮಾಡಲು ಹೋಗಿ ಚಿರತೆಗೆ ಬಲಿಯಾದ ಬೌದ್ಧ ಬಿಕ್ಕು

ಈ ಚಿರತೆಗಳು ಗುಂಪಾಗಿ ಬಂದು ದಾಳಿ ಮಾಡುತ್ತಿದ್ದದನ್ನು ಕಂಡು ಸ್ಥಳೀಯರು ಭಯಭೀತರಾಗಿದ್ದರು. ಮೊಳಹಳ್ಳಿ ಪರಿಸರದಲ್ಲಿ ಜನರು ಒಂಟಿಯಾಗಿ ತಿರುಗಾಡುವುದು ಮತ್ತು ರಾತ್ರಿ ಸಂಚಾರ ಮಾಡುವುದನ್ನೇ ನಿಲ್ಲಿಸಿದ್ದರು.

Two Leopard captured by forest department in Udupi

ಚಿರತೆಗಳು ಗುಂಪಾಗಿ ದಾಳಿ ಮಾಡುತ್ತಿರುವ ಘಟನೆಯ ಕುರಿತು ಶಂಕರನಾರಾಯಣ ಅರಣ್ಯ ಇಲಾಖೆಗೆ ಸ್ಥಳೀಯರು ದೂರು ನೀಡಿದ್ದರು. ಈ ಕುರಿತು ಕ್ಷೀಪ್ರ ಕಾರ್ಯಾಚರಣೆ ನಡೆಸಿದ ಇಲಾಖೆ ಸಿಬ್ಬಂದಿಗಳ ತಂಡ ಗುಲಾಬಿ ಕುಲಾಲ್ತಿ ಮನೆಯ ಬಳಿ ಬೋನು ಇರಿಸಿತ್ತು. ಈ ಹಿನ್ನೆಲೆಯಲ್ಲಿ ಒಂದೇ ದಿನದಲ್ಲಿ ಎರಡು ಚಿರತೆಗಳು ಸೆರೆಯಾಗಿದ್ದು, ಮೂರನೇ ಚಿರತೆಗಾಗಿ ಬೋನಿರಿಸಲಾಗಿದೆ.

ಉಡುಪಿಯ ಬೈಂದೂರಿನಲ್ಲಿ ಬಾವಿಗೆ ಬಿದ್ದ ಅಪರೂಪದ ಕರಿ ಚಿರತೆ ರಕ್ಷಣೆಉಡುಪಿಯ ಬೈಂದೂರಿನಲ್ಲಿ ಬಾವಿಗೆ ಬಿದ್ದ ಅಪರೂಪದ ಕರಿ ಚಿರತೆ ರಕ್ಷಣೆ

ಈ ಭಾಗದಲ್ಲಿ ನಿರಂತರವಾಗಿ ಚಿರತೆ ಹಾವಳಿಗೆ ಒಳಗಾಗುತ್ತಿರುವ ಹೈನು ಕೃಷಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಕಾಡು ಪ್ರಾಣಿಗಳು ನಾಡಿಗೆ ಬರದಂತೆ ಕ್ರಮಕ್ಕಾಗಿ ಸ್ಥಳೀಯರು ಆಗ್ರಹಸಿದ್ದಾರೆ.

English summary
Forest department officials captured 2 Leopard in Molahalli near Kundapura.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X